ತಿರುವನಂತಪುರಂ: ಪ್ರಯಾಗ್‌ರಾಜ್‌ನಲ್ಲಿ (Prayagraj) ನಡೆದ ಕುಂಭಮೇಳದ (Kumbh Mela) ಸಂದರ್ಭದಲ್ಲಿ ವೈರಲ್ ಆಗಿದ್ದ ವಿಡಿಯೋ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿದ್ದ ಯುವತಿ ಮೊನಾಲಿಸಾ ಭೋಂಸ್ಲೆ (Monalisa Bhonsle) ಕೇರಳದಲ್ಲಿ (Kerala) ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ತಮ್ಮ ಪ್ರಿಯತಮನೊಂದಿಗೆ ವಾಸಿಸಲು ಮತ್ತು ಆತನನ್ನು ವಿವಾಹವಾಗಲು ತಮಗೆ ರಕ್ಷಣೆ ನೀಡಬೇಕೆಂದು ಬೆಕ್ಕಿನ ಕಣ್ಣಿನ ಬೆಡಗಿ ತಿರುವನಂತಪುರಂ ಪೊಲೀಸರಲ್ಲಿ ಕೋರಿದ್ದಾರೆ.
ಪೊಲೀಸರ ಪ್ರಕಾರ, ಭೋಂಸ್ಲೆ ಮತ್ತು ಆಕೆಯ ಉತ್ತರ ಪ್ರದೇಶ ಮೂಲದ ಪ್ರಿಯತಮ ಚಿತ್ರತಂಡದ ಸದಸ್ಯರೊಂದಿಗೆ ಠಾಣೆಗೆ ಆಗಮಿಸಿದ್ದರು.
ತನ್ನ ಇಚ್ಛೆಗೆ ವಿರುದ್ಧವಾಗಿ ತಂದೆ ತನ್ನನ್ನು ಮರಳಿ ಹುಟ್ಟೂರಿಗೆ ಕರೆದೊಯ್ಯಲು ಪ್ರಯತ್ನಿಸುತ್ತಿದ್ದಾರೆ ಎಂದು ಈ ಸಂದರ್ಭದಲ್ಲಿ ಆಕೆ ಆರೋಪಿಸಿದ್ದಾರೆ. ಈ ಜೋಡಿ ಇತ್ತೀಚೆಗೆ ಚಲನಚಿತ್ರದ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಹತ್ತಿರದ ಪೂವರ್‌ಗೆ ಆಗಮಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.



