ಕಲಬುರಗಿ: ಡೆಪ್ಯುಟಿ ತಹಸೀಲ್ದಾರ್ ಎಂದು ಸುಳ್ಳು ಹೇಳಿ, ತಿಂಗಳಿಗೆ 35 ಸಾವಿರ ರೂ. ಬಾಡಿಗೆ ನೀಡುತ್ತೇನೆ ಎಂದು ಹೇಳಿ ಕರಾರು ಪತ್ರ ಬರೆಸಿಕೊಂಡು ಕಾರ್ನ್ನು ಮಹಾರಾಷ್ಟ್ರದಲ್ಲಿ ಇಸ್ಪೆಟ್ ಆಡಲು ಅಡ ಇಟ್ಟು, ಕಾರ್ ಮಾಲಿಕರಿಗೆ ಮೋಸ ಮಾಡಿದ ಟನೆ ನಗರದಲ್ಲಿ ನಡೆದಿದೆ.
ಕಾಶಿನಾಥ ಕೊನಶೆಟ್ಟಿ ಮೋಸ ಮಾಡಿದ ಸರ್ಕಾರಿ ನೌಕರ. ಇತ ಆಳಂದ ತಾಲೂಕಿನ ಖಜೂರಿ ಗ್ರಾಮದ ಗ್ರಾಮ ಲೆಕ್ಕಿಗ ಇದ್ದಾನೆ. ಆದರೆ ಕಾರ್ ಮಾಲಿಕ ಅವಿನಾಶ ರಾಠೋಡ್ ಅವರಿಗೆ ನಾನು ಡೆಪ್ಯೂಟಿ ತಹಸೀಲ್ದಾರ್ ಇದ್ದೇನೆ.
ನನಗೆ ಕಾರ್ ಬಾಡಿಗೆಗೆ ಬೇಕು, ತಿಂಗಳಿಗೆ 35 ಸಾವಿರ ರೂ. ನೀಡುತ್ತೇನೆ. ಚಾಲಕ, ಡೀಸೆಲ್ ಎರಡು ಬೇಡ. ಕೇವಲ ಕಾರ್ ನೀಡಿ ಎಂದು ಕರಾರು ಮಾಡಿಕೊಂಡು ಕಾರ್ ಪಡೆದಿರುತ್ತಾನೆ.
ಎರಡು ತಿಂಗಳ ಮುಂಗಡ ಹಣ 70 ಸಾವಿರ ನೀಡುವುದಾಗಿ ಹೇಳಿರುತ್ತಾನೆ. ಆದರೆ ಹಲವು ಬಾರಿ ಕೇಳಿದರೂ ಮುಂಗಡ ಹಣ ನೀಡಿರುವುದಿಲ್ಲ. ಇದರಿಂದ ಅನುಮಾನ ಬಂದು ಪರಿಶೀಲಿಸಿದಾಗ ಆತ ಸುಳ್ಳು ಹೇಳಿದ್ದು ಗೊತ್ತಾಗಿದೆ.
ಹಲವರಿಗೆ ಮೋಸ: ಕಾಶೀನಾಥ ಕೊನಶೆಟ್ಟಿ ಮಾದರಿಯಲ್ಲೇ ಗಣೇಶ ಚವ್ಹಾಣ್, ರಾಜು ಜಾಧವ್ ಸೇರಿ ಹಲವರ ಕಾರ್ ಬಾಡಿಗೆ ಎಂದು ಪಡೆದು, ಮುಂಗಡ ನೀಡದೆ, ಬಾಡಿಗೆ ನೀಡದೇ ಮೋಸ ಮಾಡಿ, ಮಹಾರಾಷ್ಟ್ರದಲ್ಲಿ ಅಡವಿಟ್ಟು ಬಂದು ನಾಪತ್ತೆಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅವಿನಾಶಗೆ ಕಾಶೀನಾಥನನ್ನು ಪರಿಚಯಿಸಿದ ಕೆರಿಬೋಸಗಾ ಸಹ ಇದರಲ್ಲಿ ಭಾಗಿಯಾಗಿದ್ದು, ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೆಟ್ಗಾಗಿ ಮಹಾರಾಷ್ಟ್ರದಲ್ಲಿ ಅಡವಿಟ್ಟ: ಇಸ್ಪೆಟ್ ಆಡುವ ಚಟವಿರುವ ಕಾಶೀನಾಥ ಕೊನಶೆಟ್ಟಿ ಇತನೂ ಕಾರ್ಗಳನ್ನು ಬಾಡಿಗೆ ಎಂದು ಪಡೆದು, ಮಹಾರಾಷ್ಟ್ರದ ಅಕ್ಕಲಕೋಟದ ಜೂಜಾಡಲು ಹೋಗಿ, ಅಲ್ಲಿಯ ವಿಕ್ರಂ ರಾಠೋಡ, ಹಣಮಂತ್ರಾಯ ಗೌಡ ಅವರ ಬಳಿ ಅಡವಿಟ್ಟು ಬಂದಿದ್ದಾನೆ. ವಾಹನ ಮಾಲಿಕರಿಂದ ಮೂಲ ದಾಖಲೆ ಪಡೆದಿದ್ದ ಎನ್ನಲಾಗಿದೆ.




