Ad imageAd image

ಬೆಂಗಳೂರಿನ ಮನೆ ಮಾಲಿಕನಿಗೆ ಬಂತು 17 ಕೋಟಿ ರೂ. ಕರೆಂಟ್ ಬಿಲ್ 

Bharath Vaibhav
ಬೆಂಗಳೂರಿನ ಮನೆ ಮಾಲಿಕನಿಗೆ ಬಂತು 17 ಕೋಟಿ ರೂ. ಕರೆಂಟ್ ಬಿಲ್ 
CURRENT BILL
WhatsApp Group Join Now
Telegram Group Join Now

ಬೆಂಗಳೂರು: ಬರೋಬ್ಬರಿ 17 ಕೋಟಿ ರೂಪಾಯಿ ಕರೆಂಟ್ ಬಿಲ್ ಬಂದಿದ್ದನ್ನು ಕಂಡು ಮನೆ ಮಾಲೀಕ ಬೆಚ್ಚಿಬಿದ್ದಿದ್ದಾರೆ. ಜೆಬಿ ಕಾವಲ್ ಕೃಷ್ಣಾನಂದ ನಗರದ ಪೊಲೀಸ್ ಕ್ವಾಟ್ರಸ್ ನ ಮನೆಯೊಂದಕ್ಕೆ 17 ಕೋಟಿ ರೂಪಾಯಿ ಕರೆಂಟ್ ಬಿಲ್ ಬಂದಿದೆ. ತಾಂತ್ರಿಕ ದೋಷದಿಂದಾಗಿ ಈ ರೀತಿ ಆಗಿರಬಹುದು ಎನ್ನಲಾಗಿದೆ.

ನೀಡಲಾದ ವಿದ್ಯುತ್ ಬಿಲ್ ನಲ್ಲಿ 17,15,75,596 ಎಂದು ನಮೂದಿಸಲಾಗಿದೆ. ಇದು ಬೆಸ್ಕಾಂ ಮೀಟರ್ ತಾಂತ್ರಿಕ ಸಮಸ್ಯೆಯಿಂದ ಆಗಿರುವ ಲೋಪವೇ ಅಥವಾ ಬೇರೆ ಏನಾದರೂ ಸಮಸ್ಯೆ ಆಗಿದೆ ಎಂಬುದರ ಬಗ್ಗೆ ಬೆಸ್ಕಾಂ ಅಧಿಕಾರಿಗಳು ಇನ್ನು ಸ್ಪಷ್ಟನೆ ನೀಡಿಲ್ಲ. ದೊಡ್ಡ ದೊಡ್ಡ ಕಾರ್ಖಾನೆಗಳಿಗೆ ಹೆಚ್ಚಿನ ಪ್ರಮಾಣದ ಬಿಲ್ ಬರುತ್ತದೆ. ಆದರೆ ಮನೆಗೆ 17 ಕೋಟಿ ರೂಪಾಯಿ ಬಿಲ್ ಬಂದಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

WhatsApp Group Join Now
Telegram Group Join Now
Share This Article
error: Content is protected !!