ಬೆಂಗಳೂರು: ಪಿಯುಸಿ ಫಲಿತಾಂಶದ ವಿಚಾರವಾಗಿ ತಾಯಿ ಮಗಳ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ಪರಸ್ಪರ ಚಾಕು ಇರಿತದಲ್ಲಿ ಪುತ್ರಿ ಸಾಹಿತಿ ಸಾವನ್ನಪ್ಪಿದ್ದಾರೆ.
ದ್ವಿತೀಯ ಪಿಯುಸಿ ಪಾಸ್ ಆಗಿದ್ದ ಸಾಹಿತಿ ಜೊತೆಗೆ ತಾಯಿ ಪದ್ಮಜಾ ವಾಗ್ವಾದ ನಡೆಸುತ್ತಿದ್ದರು. ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಎಂದು ಪುತ್ರಿಯ ಜೊತೆಗೆ ತಾಯಿ ಪದ್ಮಜಾ ವಾಗ್ವಾದ ನಡೆಸುತ್ತಿದ್ದು, ಅದು ತಾರಕಕ್ಕೇರಿ ತಾಯಿ, ಪುತ್ರಿ ಪರಸ್ಪರ ಚಾಕುವಿನಿಂದ ಇರಿದುಕೊಂಡಿದ್ದಾರೆ.
ಚಾಕು ಇರಿತದಿಂದ ತೀವ್ರ ರಕ್ತಸ್ರಾವವಾಗಿ ಪುತ್ರಿ ಸಾಹಿತಿ(18) ಸಾವನ್ನಪ್ಪಿದ್ದಾರೆ. ತಾಯಿ ಪದ್ಮಜಾಗೆ ನಾಲ್ಕರಿಂದ ಐದು ಕಡೆ ಪುತ್ರಿ ಸಾಹಿತಿ ಚಾಕುವಿನಿಂದ ಇರಿದಿದ್ದಾರೆ. ಸದ್ಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಪದ್ಮಜಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.