Ad imageAd image

ಸಾಮಾಜಿಕ ನ್ಯಾಯದ ಹರಿಕಾರ ಡಿ ದೇವರಾಜ ಅರಸು : ಹಿಂದುಳಿದ ವರ್ಗಗಳಿಗೆ ಅವರ ಕೊಡುಗೆ ಅಪಾರ.

Bharath Vaibhav
ಸಾಮಾಜಿಕ ನ್ಯಾಯದ ಹರಿಕಾರ ಡಿ ದೇವರಾಜ ಅರಸು : ಹಿಂದುಳಿದ ವರ್ಗಗಳಿಗೆ ಅವರ ಕೊಡುಗೆ ಅಪಾರ.
WhatsApp Group Join Now
Telegram Group Join Now

ಕಲಘಟಗಿ: ಉಳುವವನೇ ಹೊಲದೊಡೆಯ ಎಂಬ ಕ್ರಾಂತಿಕಾರಿ ಕಾಯ್ದೆ ರೂಪಿಸಿ, ಲಕ್ಷಾಂತರ ಬಡ ಗೇಣಿದಾರರಿಗೆ ಭೂಮಿ ನೀಡಿದ ಧ್ರುವತಾರೆ ಡಿ ದೇವರಾಜ ಅರಸು ಎಂದು ನ್ಯಾಯವಾದಿ ರಮೇಶ ಸೋಲಾರಗೊಪ್ಪ ಹೇಳಿದರು.

ಅವರು ಪಟ್ಟಣದ ತಹಶಿಲ್ದಾರ ಕಚೇರಿಯಲ್ಲಿ ಹಿಂದುಳಿದ ವರ್ಗಗಳ ಇಲಾಖೆ ಹಾಗೂ ತಾಲ್ಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ದೇವರಾಜ ಅರಸು ಅವರ 109 ನೇ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದರು.

ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದರು. ಸಮ ಸಮಾಜವನ್ನು ಕಟ್ಟಲು ಹಗಲಿರಲು ಶ್ರಮಿಸಿದರು. ತಲೆ ಮೇಲೆ ಮಲ ಹೋರುವ ಅನಿಷ್ಟ ಪದ್ಧತಿಯನ್ನು ಹಾಗೂ ಜೀತ ಪದ್ದತಿಯನ್ನು ಪ್ರಬಲ ಕಾನೂನು ಮಾಡುವ ಮೂಲಕ ರದ್ದುಗೊಳಿಸಿದರು. ಭೂ ಸುಧಾರಣೆ ಕಾಯ್ದೆ ರೂಪಿಸಿ ಉಳುವವನೇ ಹೊಲದೊಡೆಯ ಎಂಬ ಕ್ರಾಂತಿಕಾರಕ ಕಾನೂನಿನ ಮೂಲಕ ಲಕ್ಷಾಂತರ ಬಡ ಗೇಣಿದಾರರಿಗೆ ಭೂಮಿ ದೊರೆಯುವಂತೆ ಮಾಡಿದರು ಎಂದು ಅರಸು ಅವರ ಸಾಧನೆಗಳನ್ನು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ಧ ತಹಶೀಲ್ದಾರ್ ವೀರೇಶ್ ಮುಳಗುಂದಮಠ ಅರಸು ಅವರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಗೌರವ ನಮನ ಸಲ್ಲಿಸಿ ಮಾತನಾಡಿ ದಲಿತರು, ಬಡವರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರಿಗೆ ರಾಜಕೀಯ ಕ್ಷೇತ್ರದಲ್ಲಿ ಅಧಿಕಾರ ನೀಡಿ ದುರ್ಬಲರಿಗೆ ಸಾಮಾಜಿಕ ನ್ಯಾಯ ಒದಗಿಸಿದರು ಸಾಮಾಜಿಕ ನ್ಯಾಯದ ಪರಿಕಲ್ಪನೆ ದೇಶದಲ್ಲಿಯೇ ಅನನ್ಯವಾದದ್ದು. ಶತ ಶತಮಾನಗಳ ಕಾಲದಿಂದ ಶೋಷಣೆಗೆ ಒಳಗಾಗಿದ್ದ ಜನ ಸಮುದಾಯ ಗಳನ ಗುರುತಿಸಿ, ಅವರಿಗೆ ಆಡಳಿತದಲ್ಲಿ ಪಾಲು ಪಡೆಯುವಂತೆ ಕಲ್ಪಿ ವಿಶೇಷ ಅವಕಾಶಗಳು ದೇವರಾಜ್ ಅರಸರನ್ನು ಒಬ್ಬ ದಾರ್ಶನಿಕ ಮುತ್ಸದ್ದಿಯನ್ನಾಗಿಸಿತು ಎಂದರು.

ಅತಿ ಹೆಚ್ಚು ಅಂಕ ಗಳಿಸಿದ ಹಿಂದುಳಿದ ವರ್ಗಗಳ ಇಲಾಖೆ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಮತ್ತು ಜಿಲ್ಲಾ ಗ್ರಾಮೀಣ ಅತ್ಯುತ್ತಮ ಲೇಖನ ಪ್ರಶಸ್ತಿ ಪಡೆದ ಪತ್ರಕರ್ತ ಪ್ರಹ್ಲಾದ ಗೊಲ್ಲಗೌಡರ ಅವರನ್ನ ಸನ್ಮಾನ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಗಳಾದ ಗೀತಾ ಬೀಳಗಿ, ಬಸವರಾಜ ಕುಂಬಾರ, ಅರ್ ಎಂ ಸಾವಂತ, ತಾಲೂಕ ನೌಕರ ಸಂಘದ ಅಧ್ಯಕ್ಷ ಆರ ಎಂ ಹೋಲ್ತಿಕೋಟಿ, ಜಿ ಕೆ ತಿಮ್ಮರೆಡ್ಡಿ, ದೇವೇಂದ್ರಪ್ಪ ಲಮಾಣಿ, ಶಂಕ್ರಮ್ಮ ಭೋವಿ, ಲತಾ, ಹನುಮಂತ ಚವರಗುಡ್ದ , ಹನುಮಂತ ಹರಿಜನ, ಸುಭಾಸ ಸುಣಗಾರ ಸೇರಿದಂತೆ ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಫೋಟೊ ಕೆ ಎಲ್ ಜಿ 19 ಕಲಘಟಗಿ ತಹಶಿಲ್ದಾರ ಕಾರ್ಯಾಲಯದಲ್ಲಿ ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರ 109ನೇ ಜನ್ಮ ದಿನಾಚರಣೆ ಆಚರಿಸಲಾಯಿತು.

ವರದಿ ಶಶಿಕುಮಾರ ಕಟ್ಟಿಮನಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!