ಮುಂಬೈ : ಇಡೀ ದೇಶದಲ್ಲಿಯೇ ಬೆಚ್ಚಿ ಬೆಳಿಸುವಂತಹ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, 180ಕ್ಕೂ ಹೆಚ್ಚು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಇದೀಗ ಕೇಳಿಬಂದಿದೆ. ಅಲ್ಲದೆ ಆರೋಪಿ ಮೊಬೈಲ್ ನಲ್ಲಿ 350ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಲಭ್ಯವಾಗಿವೆ.
ಆರೋಪಿ ಅಯಾನ್ ಅಹಮದ್ ತನ್ವೀರ್ ಎನ್ನುವ ಮೊಬೈಲ್ ನಲ್ಲಿ 350ಕ್ಕೂ ಹೆಚ್ಚು ಅಪ್ರಪ್ತ ಬಾಲಕಿಯರ ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ. ಸದ್ಯ ಅಮರಾವತಿ ಗ್ರಾಮೀಣ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ಆರೋಪಿ ಅಯಾನ್ ಮನೆ ಮೇಲೆ ಬುಲ್ಡೋಜರ್ ನಿಂದ ಆತನ ಮನೆ ತೆರುಗೊಳಿಸಿ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. ಅಮರಾವತಿಯ ಗ್ರಾಮೀಣ ಪೊಲೀಸ್ರಿಂದ ಇದೀಗ ತೀವ್ರ ತನಿಖೆ ನಡೆಯುತ್ತಿದೆ.




