Ad imageAd image

ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಅಬ್ಬರದ ಪ್ರಚಾರ 

Bharath Vaibhav
WhatsApp Group Join Now
Telegram Group Join Now

ಮಂಡ್ಯ: ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಪರ ಮಂಡ್ಯದಲ್ಲಿ ಅಬ್ಬರದ ಚುನವಣಾ ಪ್ರಚರ ನಡೆಸಿ, ಸುಮಲತಾ ಗೆಲುವಿಗಾಗಿ ಜೋಡೆತ್ತುಗಳಂತೆ ನಟ ಯಶ್ ಹಾಗೂ ದರ್ಶನ್ ಕರಯನಿರ್ವಹಿಸಿದ್ದರು. ಈಗ ಸುಮಲತಾ ಬಿಜೆಪಿಯಲ್ಲಿದರೂ ನಟ ದರ್ಶನ್ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮಂಡ್ಯದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದಾರೆ.

ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಭರ್ಜರಿ ಪ್ರಚರ ನಡೆಸಿದ ನಟ ದರ್ಶನ್, ನಾನು ಯಾವುದೇ ಪಕ್ಷದ ಪರವಾಗಿ ಇಲ್ಲಿಗೆ ಬಂದಿಲ್ಲ. ವ್ಯಕ್ತಿಯ ಪರವಾಗಿ ಬಂದಿದ್ದೇನೆ. ಶಾಸಕ ನರೇಂದ್ರ ಸ್ವಾಮಿ ಆಪ್ತರಾಗಿದ್ದು, ಅವರು ಹೇಳಿದ್ದಕ್ಕೆ ಸ್ಟಾರ್ ಚಂದ್ರು ಪರ ಪ್ರಚಾರ ನಡೆಸಿದ್ದೇನೆ. ಇದನ್ನು ಬೇರೆ ರೀತಿ ತಿಳಿದುಕೊಳ್ಳುವುದು ಬೇಡ. ನನಗೆ ಪಕ್ಷ ಮುಖ್ಯವಲ್ಲ ವ್ಯಕ್ತಿಗಳು ಮುಖ್ಯ ಎಂದರು.

ಇದೇ ವೇಳೆ ಲೋಕಸಭಾ ಚುನವಣೆಯಲ್ಲಿ ಎಲ್ಲರೂ ಬಂದು ಮತದಾನ ಮಾಡಿ, ನಿಮ್ಮ ಹಕ್ಕು ಚಲಾಯಿಸಿ ಸ್ಟಾರ್ ಚಂದ್ರು ಅವರನ್ನು ಗೆಲ್ಲಿಸಿ ಎಂದು ಕರೆ ನೀಡಿದರು. ಇಂದು ಮಂಡ್ಯ ಲೋಕಸಭಾ ಕ್ಷೇತ್ರದ ಮಳವಳ್ಳಿಯಲ್ಲಿ ದರ್ಶನ್ ಸ್ಟಾರ್ ಚಂದ್ರು ಪರ ಮತಬೇಟೆ ನಡೆಸಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!