Ad imageAd image

28ನೇ ವಸಂತಕ್ಕೆ ಕಾಲಿಟ್ಟ ನಟಿ ನಿಶ್ವಿಕಾ ನಾಯ್ಡು

Bharath Vaibhav
WhatsApp Group Join Now
Telegram Group Join Now

ನಟಿ ನಿಶ್ವಿಕಾ ನಾಯ್ಡು ಇಂದು ತಮ್ಮ 28ನೇ ಜನ್ಮದಿನದ ಸಂಭ್ರಮದಲ್ಲಿದ್ದು, ತಮ್ಮ ಕುಟುಂಬ ಹಾಗೂ ಗೆಳತಿಯರೊಂದಿಗೆ ಸರಳವಾಗಿ ಹುಟ್ಟುಹಬ್ಬವನ್ನು ಸೆಲಿಬ್ರೇಟ್ ಮಾಡಿದ್ದಾರೆ.

2018 ರಲ್ಲಿ ಚಿರಂಜೀವಿ ಸರ್ಜಾ ಅಭಿನಯದ ‘ಅಮ್ಮ ಐ ಲವ್ ಯು’ ಮತ್ತು ‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ ಇವರು 2019 ರಂದು ಶ್ರೇಯಸ್ ಮಂಜು ಜೊತೆ ‘ಪಡ್ಡೆ ಹುಲಿ’ ಸಿನಿಮಾದಲ್ಲಿ ತೆರೆ ಹಂಚಿಕೊಂಡರು.

ಬಳಿಕ ‘ಜೆಂಟಲ್ ಮ್ಯಾನ್’ ‘ರಾಮಾರ್ಜುನ’ ‘ಸಕ್ಕತ್’ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದರು.

ಕಳೆದ ವರ್ಷ ‘ಗರಡಿ’ ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದ ನಿಶ್ವಿಕಾ ನಾಯ್ಡು ಇತ್ತೀಚಿಗೆ ‘ಕರಟಕ ದಮನಕ’ ಚಿತ್ರದ ‘ಹಿತ್ತಲಕ ಕರಿಬ್ಯಾಡ ಮಾವ’ ಎಂಬ ಹಾಡಿನ ಮೂಲಕ ತಮ್ಮ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದಾರೆ. ಇಂದು ಸಾಮಾಜಿಕ ಜಾಲತಾಣದಲ್ಲಿ ಸ್ಯಾಂಡಲ್ ವುಡ್ ನ ಹಲವಾರು ಸಿನಿಮಾ ಕಲಾವಿದರು ನಿಶ್ವಿಕಾ ನಾಯ್ಡು ಅವರಿಗೆ ವಿಶ್ ಮಾಡಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!