Ad imageAd image

ಪ್ರಾಮಾಣಿಕತೆ ಮೆರೆದ ಆದರ್ಶ ವಿದ್ಯಾರ್ಥಿನಿ

Bharath Vaibhav
WhatsApp Group Join Now
Telegram Group Join Now

ಶಿಗ್ಗಾವಿ : ಗೌರಮ್ಮ ಬ ಅಂಕಲಕೋಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ. ಶಿಗ್ಗಾವ. ಕಾಲೇಜಿನ ಬಿ ಕಾಂ. ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿನಿಯಾದ ಕುಮಾರಿ ಕಾವ್ಯ ಮಹಾರಾಜಪೇಟೆ ಪ್ರಾಮಾಣಿಕತೆ ತೋರಿದ್ದು ಸುದ್ಧಿಯಾಗಲು ತೊಡಗಿದ್ದಾರೆ.

ಕಾಲೇಜಿನ ಉಪನ್ಯಾಸಕರಾದ ಡಾ. ಸುರೇಶ್ ವಾಲ್ಮೀಕಿ ಅವರ 1,80,000/-( ಒಂದು ಲಕ್ಷ ಎಂಬತ್ತು ಸಾವಿರ ) ಬೆಲೆಬಾಳುವ ಬಂಗಾರದ ಬ್ರಾಸ್ಲೈಟ್ ಕಳೆದು ಹೋಗಿದ್ದು. ನಾಲ್ಕು ದಿನಗಳ ನಂತರ ಅದೇ ಕಾಲೇಜಿನ ವಿದ್ಯಾರ್ಥಿನಿಯಾದ ಕುಮಾರಿ ಕಾವ್ಯಾ ಮಹಾರಾಜಪೇಟೆ ಅದು ಸಿಕ್ಕ ತಕ್ಷಣ ಮಾನ್ಯ ಪ್ರಾಂಶುಪಾಲರ ಗಮನಕ್ಕೆ ತಂದುಕೊಟ್ಟು ತನ್ನ ಪ್ರಾಮಾಣಿಕತೆ ಹಾಗೂ ಆದರ್ಶವನ್ನು ಮೆರೆದಿದ್ದು ಕಾಲೇಜಿನ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿ ಮತ್ತು ಕಾಲೇಜಿನ ಕೀರ್ತಿ ಗೌರವವನ್ನು ತಂದಿರುವ ವಿದ್ಯಾರ್ಥಿನಿಗೆ ಪ್ರಾಂಶುಪಾಲರಾದ ಡಾ. ಚನ್ನಬಸಪ್ಪ ಎಸ್ ಕುಮ್ಮೂರ ಹಾಗೂ ಸಿಬ್ಬಂದಿ ವರ್ಗದವರು ಅಲ್ಪ ಕಾಣಿಕೆ ನೀಡುವುದರ ಮೂಲಕ ಅವಳನ್ನು ಗೌರವಿಸಲಾಯಿತು.

ವರದಿ ;ರಮೇಶ್ ತಾಳಿಕೋಟಿ

WhatsApp Group Join Now
Telegram Group Join Now
Share This Article
error: Content is protected !!