Ad imageAd image

ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ‌ ಅಣ್ಣಾಸಾಹೇಬ‌ ಜೊಲ್ಲೆ ನಾಮಪತ್ರ ಸಲ್ಲಿಕೆ.

Bharath Vaibhav
WhatsApp Group Join Now
Telegram Group Join Now

ಚಿಕ್ಕೋಡಿ :-ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅಣ್ಣಾಸಾಹೇಬ‌ ಜೊಲ್ಲೆಯವರು ಚುನಾವಣಾಧಿಕಾರಿ ರಾಹುಲ ಶಿಂಧೆಯವರಿಗೆ ನಾಮಪತ್ರ ಸಲ್ಲಿಸಲಾಯಿತು.

ನಂತರ ಅಭ್ಯರ್ಥಿ ಅಣ್ಣಾಸಾಹೇಬ‌ ಜೊಲ್ಲೆಯವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅಣ್ಣಾಸಾಹೇಬ‌ ಜೊಲ್ಲೆ ಈಗಾಗಲೇ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್ ಸಭೆ ಮಾಡಲಾಗಿದೆ ಬಿಜೆಪಿಯಲ್ಲಿ ಯಾವುದೇ ಭಿನ್ನಾಪ್ರಯವಿಲ್ಲ ಲೋಕಸಭಾ ಕ್ಷೇತ್ರದ ೫ ಜನ ಕಾಂಗ್ರೆಸ್ ಇದ್ದರೂ.ನಮ್ಮಗೆ ಯಾವುದೇ ಸಮಸ್ಯೆ ಇಲ್ಲ ವಿಧಾನಸಭೆ ಚುನಾವಣೆಯ‌ ಬೇರೆ ಲೋಕಸಭಾ ಚುನಾವಣೆಯ ಬೇರೆ ಎಂದರು.

ರಮೇಶ ಕತ್ತಿಯ ಮುನಿಸಿನ ಕುರಿತ ಪ್ರತಿಕ್ರಿಯಿಸಿದ ಅವರು ಕೇಲವೊಂದು ಕೆಲಸದಲ್ಲಿ ಇದ್ದಾರೆ.ಅವರು ಸಹ ಪ್ರಚಾರಕ್ಕೆ ಬರುತ್ತಾರೆ ಎಂದರು.ಕೊವಿಡ್ ಹಾಗೂ ಪ್ರವಾಹ ಸಂಧರ್ಭದಲ್ಲಿ ನಾನು ನಮ್ಮ ಸಂಸ್ಥೆಯ ಸದಸ್ಯರು,ನಮ್ಮ ಶಾಸಕರು ಒಳ್ಳೆಯ ರೀತಿಯಾಗಿ ಕೆಲಸ ಮಾಡಿದ್ದಾರೆ.ಈ ಬಾರಿ ಜನರ ಬೆಂಬಲ ನೋಡಿದರೆ 2 ಲಕ್ಷಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಗೆಲವು ಸಾಧಿಸುತ್ತೇವೆ ಎಂದರು.

ಅಣ್ಣಾಸಾಹೇಬ‌ ಜೊಲ್ಲೆ:-ಬಳಿಕ ಲೋಕಸಭಾ ಚುನಾವಣೆ ಪ್ರಭಾರಿ ಪಿ.ಎಚ ಪೂಜಾರ ಮಾತನಾಡಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಪರ ಅಲೆ ಇದೆ ಪ್ರಧಾನಿ ನರೇಂದ್ರ ಮೋದಿಯವರ ವಿಶ್ವನಾಯಕರಾಗಿ ಹೋರಹೊಮ್ಮಿದ್ದಾರೆ ಮತ್ತೋಮ್ಮೆ ನರೇಂದ್ರ ಮೋದಿಯವರು ಪ್ರಧಾನಿ ಆಗುವುದು ನಿಶ್ಚಿತ ಎಂದರು.

ಅಣ್ಣಾಸಾಹೇಬ‌ ಜೊಲ್ಲೆಯವರು ಮಾಡಿದ ಅಭಿವೃದ್ಧಿ ಕಾರ್ಯಗಳು ತಮ್ಮ ಸಂಸ್ಥೆಯ ಮೂಲಕ ಮಾಡಿರುವ ಉದ್ಯೋಗ ಸೃಷ್ಟಿ ಇವೆಲ್ಲವೂ ಕಾರ್ಯಗಳನ್ನು ಜನರು ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ ಈ ಹಿನ್ನೆಲೆಯಲ್ಲಿ ಈ ಬಾರಿ ಅಣ್ಣಾಸಾಹೇಬ‌ ಜೊಲ್ಲೆ ಗೆಲವು ನಿಶ್ಚಿತ ಎಂದರು.

ಪಿ ಎಚ್ ಪೂಜಾರ:-ಈ ಸಂದರ್ಭದಲ್ಲಿ ಶಾಸಕಿ ಶಶಿಕಲಾ ಜೊಲ್ಲೆ,ಶಾಸಕ ದುರ್ಯೋಧನ ಐಹೊಳೆ, ಮಾಜಿ ಶಾಸಕರಾದ ಶ್ರೀಮಂತ ಪಾಟೀಲ, ಕಲ್ಲಪ್ಪಣಾ, ಮಹೇಶ್ ಭಾತೆ ಮಗೆನ್ನವರ,ಮಹೇಶ ಕುಮಟಳ್ಳಿ,ಚಿಕ್ಕೋಡಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ,ಡಾ!ರಾಜೇಶ್ ನೇರ್ಲಿ,ಶಿವಾನಂದ ನವಲಿಹಾಳ,ಅಮೃತ ಕುಲಕರ್ಣಿ,ಅಪ್ಪಾಸಾಹೇಬ ಚೌಗಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವರದಿ ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!