ನವದೆಹಲಿ : ದೇಶಾದ್ಯಂತ 98 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಿರುವುದಾಗಿ ವಾಟ್ಸಾಪ್ ಹೇಳಿದೆ. ಸುಳ್ಳು ಸುದ್ದಿಯನ್ನು ಹರಡುತ್ತಿದ್ದ ಆರೋಪ ಮತ್ತು ವಾಟ್ಸಪ್ ಖಾತೆಯ ದುರ್ಬಳಕೆಯ ಮೇಲೆ ಈ ಕ್ರಮ ಕೈಗೊಳ್ಳಲಾಗಿದ್ದು 2025 ರ ಜೂನ್ ವರೆಗೆ ಸುಮಾರು 98 ಲಕ್ಷ ನಂಬರ್ ಗಳನ್ನು ನಿಷೇಧಿಸಲಾಗಿದೆ ಎಂದು ವಾಟ್ಸಪ್ ಮಾಹಿತಿ ನೀಡಿದೆ.
ಮೀಡಿಯಾ ಎಥಿಕ್ಸ್ ಕೋಡ್ 2021 ರ ಕಾಯಿದೆಯ ಅನುಸಾರವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಮೆಟಾ ಒಡೆತನದ ವಾಟ್ಸಪ್ ಸಂಸ್ಥೆಯು ತುರ್ತು ಸಂದೇಶ ಸೇವೆಗೆ ಇಡೀ ವಿಶ್ವದಲ್ಲೇ ಪ್ರಸಿದ್ದವಾಗದ ವೇದಿಕೆಯಾಗಿದ್ದು, ಭಾರತದಲ್ಲಿ ನೂರಾರು ಕೋಟಿ ಮಂದಿ ವಾಟ್ಸಪ್ ಬಳಕೆದಾರರಿದ್ದಾರೆ.
ಜೂನ್ ನಲ್ಲಿ 160069 ವಿನಂತಿಗಳು ಬಂದಿದ್ದವು. ಎಲ್ಲಾ ವಿನಂತಿಗಳೂ ಸಹ ಖಾತೆಗಳನ್ನು ನಿಷೇಧಿಸುವ ಬಗ್ಗೆಯಾಗಿತ್ತು.
ಎಲ್ಲಾ ವಿನಂತಿಗಳನ್ನೂ ಸ್ವೀಕರಿಸಿ, ಪರಿಶೀಲಿಸಿ 19.79 ಲಕ್ಷ ಬಳಕೆದಾರರನ್ನು ನಕಲಿ ಬಳಕೆದಾರರು, ಸುಳ್ಳು ಸುದ್ದಿ ಹರಡುವವರು ಹಾಗೂ ವಾಟ್ಸಪ್ ಸೇವೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವವರು ಎಂದು ಗುರುತಿಸಲಾಗಿದೆ. ಈ ಎಲ್ಲಾ ನಂಬರ್ ಗಳನ್ನು ವಾಟ್ಸಪ್ ಸೇವೆಯಿಂದ ನಿಷ್ಕ್ರಿಯಗೊಳಿಸಲಾಗಿದೆ ಎಂದು ಮೆಟಾ ಹೇಳಿದೆ.
ವಾಟ್ಸಪ್ ಸಂಸ್ಥೆಯು ಬಳಕೆದಾರರ ಖಾಸಗಿತನವನ್ನು ರಕ್ಷಿಸಲು ಮೂರು ಹಂತದ ದುರುಪಯೋಗ ಪತ್ತೆ ವ್ಯವಸ್ಥೆಯನ್ನು ಜಾರಿಗೊಳಿಸಿದೆ.
ಖಾತೆ ಸೆಟಪ್ ಸಮಯದಲ್ಲಿ ಬಳಕೆದಾರರ ವಿಚಾರಣೆ, ಬಳಕೆದಾರರ ಮೌಲ್ಯಮಾಪನ ಇದರಲ್ಲಿ ಸೇರಿವೆ. ಅಲ್ಲದೇ, ಸ್ಪಾಮ್ ಹರಿಬಿಡುವುದು, ತಪ್ಪು ಮಾಹಿತಿ ನೀಡುವುದು, ಹಾನಿಕಾರಕ ಅಥವಾ ಸಮಾಜ ಬಾಹಿರ ಸಂದೇಶಗಳನ್ನು ಹಂಚುವ ಮೂಲಕ ಅಶಾಂತಿಯೆಬ್ಬಿಸಲು ಯತ್ನಿಸುವ ಯತ್ನಗಳನ್ನು ಆರಂಭದಲ್ಲಿಯೇ ಪತ್ತೆಹಚ್ಚುವಂತೆ ತಂತ್ರಜ್ಞಾನವನ್ನು ವಿನ್ಯಾಸಗೊಳಿಸಲಾಗಿದೆ.




