ಮುದಗಲ್ಲ :– ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಅರ್ಥ ಪೂರ್ಣವಾಗಿ ಬುಧವಾರ ಪುರಸಭೆ ವತಿಯಿಂದ ಆಚರಿಸಲಾಯಿತು ಈ ಸಂದರ್ಭದಲ್ಲಿ ಪುರಸಭೆ ಸಿಬ್ಬಂದಿ ಯಲ್ಲಮ್ಮ ಅವರು ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಇಬ್ಬರು ನಾಯಕರು ಗುಣಗಾನ ಮಾಡಲಾಯಿತು. ಸ್ವಚ್ಛತೆ ಅಭಿಯಾನ, ಕಾರ್ಯಕ್ರಮಗಳು ಸಹ ಜರುಗಿದವು.ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ನಭಿಸಾಬ ಕಂದಗಲ್ಲ ಉಪಾಧ್ಯಕ್ಷ ರಾದ ಅಜ್ಮೀರ್ ಬೆಳ್ಳಿಕಟ್ಟ್ , ಸದಸ್ಯರಾದ ಬಾಬು ಉಪ್ಪಾರ , ಶಿವಗ್ಯಾನಪ್ಪ, ಸಿಬ್ಬಂದಿ ಗಳಾದ ಆರೀಪಾ ಹುನ್ನಿಸಾ ಬೇಗಂ, ಜಾಕೀಯಾ ಬೇಗಂ, ನಿಸಾರ್ ಅಹಮದ್, ಜಿಲಾನಿ ಪಾಶ , ಹಾಗೂ ಮುಖಂಡರಾದ ತಮ್ಮಣ್ಣ ಗುತ್ತೇದಾರ, ಮೈಬುಸಾಬ ಬಾರಿಗಿಡ, ಶರಣಪ್ಪ ಕಟ್ಟಿಮನಿ, ಬಸವರಾಜ ಬಂಕದಮನಿ, ಹಾಗೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು..
ವರದಿ:- ಮಂಜುನಾಥ ಕುಂಬಾರ