Ad imageAd image

ಬೆಳಗಾವಿಗೆ ಮತ್ತೊಂದು ಹಿರಿಮೆ;ಎಸ್ ಎಸ್ ಎಲ್ ಸಿ ಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ

Bharath Vaibhav
WhatsApp Group Join Now
Telegram Group Join Now

ಚಿಕ್ಕೋಡಿ : -ಕುಂದಾನಗರಿ ಬೆಳಗಾವಿ ಜಿಲ್ಲೆಗೆ ಮತ್ತೊಂದು ಹಿರಿಮೆಯ ಗರಿ ಬಂದಿದೆ ಹಳ್ಳಿಯ ಪೋರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವೀತಿಯ ಸ್ಥಾನ ಪಡೆದು  ಜಿಲ್ಲೆಗೆ ಕೀರ್ತಿ ತಂದಿದ್ದಾನೆ.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ಉಪವಿಭಾಗದ ಸೇಡಬಾಳ ಗ್ರಾಮದ ಸಿದ್ದಾಂತ ನಾಯಿಕಬಾ ಗಡದೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ  624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಗಿಟ್ಟಿಸಿಕೊಂಡಿದ್ದಾನೆ.
ಶೇಡಬಾಳ ಗ್ರಾಮದ ಆಚಾರ್ಯ ಸುಬಲಸಾಗರ ಫ್ರೌಢ ವಿದ್ಯಾಮಂದಿರದಲ್ಲಿ ಓದುತ್ತಿದ್ದ ವಿದ್ಯಾರ್ಥಿಯ ಸಾಧನೆಗೆ
ಗುರುವೃಂದ ಸಿಹಿ ತಿನಿಸಿ ಸಂಭ್ರಮಿಸಿದ್ದಾರೆ.

ಇಂಗ್ಲೀಷ ಹೊರತು ಪಡಿಸಿ ಎಲ್ಲ ವಿಷಯಗಳಲ್ಲೂ ಸಮಾನ ಅಂಕ ಪಡೆದ ವಿದ್ಯಾರ್ಥಿ ಸಿದ್ದಾಂತ ಬಡ ರೈತ ಕುಟುಂಬದ ವಿದ್ಯಾರ್ಥಿಯಾಗಿದ್ದು ಈತನ ಸಾಧನೆಗೆ ಗ್ರಾಮಸ್ಥರು ಅಭಿನಂದನೆ ತಿಳಿಸಿದ್ದಾರೆ.

ವರದಿ ರಾಜು ಮುಂಡೆ .

WhatsApp Group Join Now
Telegram Group Join Now
Share This Article
error: Content is protected !!