ನವದೆಹಲಿ: ದೇಶದಲ್ಲಿ ಸೀರೆಗೆ ತನ್ನದೇ ಆದ ಮಹತ್ವವಿದೆ. ಆದರೆ, ಅದರಿಂದಲೇ ಸ್ತ್ರೀಯರಿಗೆ “ಪೆಟಿಕೋಟ್ ಕ್ಯಾನ್ಸರ್” ಎಂಬ ಕಾಯಿಲೆ ಬರುತ್ತಿರುವ ಬಗ್ಗೆ ವೈದ್ಯರು ಎಚ್ಚರಿಸಿದ್ದಾರೆ.
ಎಷ್ಟೋ ಮಂದಿಗೆ ತಾವು ಪೆಟಿಕೋಟ್ ದಾರ ಬಿಗಿಯಾಗಿ ಎಳೆದು ಕಟ್ಟುತ್ತಿರುವುದರಿಂದ ತಮ್ಮ ಚರ್ಮ ರೋಗಗ್ರಸ್ತವಾಗುತ್ತಿದೆ ಎಂಬುದು ಅರಿವಿಗೆ ಬಂದಿರುವುದಿಲ್ಲ.ಈಗ ಅಂಥ ವಿಚಾರಗಳ ಅಧ್ಯಯನ ವರದಿಯನ್ನು “ಬಿಎಂಜೆ ಕೇಸ್ ರಿಪೋರ್ಟ್ಸ್’ ನಿಯತ ಕಾಲಿಕೆ ಪ್ರಕಟಿಸಿದೆ.
ಮಹಿಳೆಯರು ದೀರ್ಘಕಾಲ ಪೆಟಿಕೋಟ್ ಬಿಗಿಯಾಗಿ ಕಟ್ಟುವುದರಿಂದ ಸೊಂಟದ ಸುತ್ತಲಿನ ಭಾಗದ ಚರ್ಮದ ಉಸಿರಾಟಕ್ಕೆ ತೊಂದರೆಯಾಗಿ ಆ ಭಾಗದಲ್ಲಿ ತುರಿಕೆ ಹಾಗೂ ವಾಸಿಯಾಗದ ಗಾಯಗಳಾಗುತ್ತವೆ.
ನಂತರ ಅದು “ಮಾಜೋಲಿನ್ ಕ್ಯಾನ್ಸರ್’ ಆಗಿ ಬದಲಾಗುತ್ತದೆ ಎಂದು ವರದಿ ತಿಳಿಸಿದೆ. ಈ ಬಗ್ಗೆ ವೈದ್ಯರೂ ಎಚ್ಚರಿಕೆ ನೀಡಿದ್ದು, ಆದಷ್ಟು ಮಹಿಳೆಯರು ಪೆಟಿಕೋಟ್‌ಗಳನ್ನು ಸಡಿಲವಾಗಿ ಕಟ್ಟುವಂತೆ ಸಲಹೆ ನೀಡಿದ್ದಾರೆ. 2014ರಲ್ಲಿ ಬೆಂಗಳೂರಿನಲ್ಲೇ ಒಬ್ಬ ಮಹಿಳೆಗೆ ಈ ಕ್ಯಾನ್ಸರ್ ಬಂದಿದ್ದು ವರದಿಯಾಗಿತ್ತು.