ಬೆಂಗಳೂರು : ಬಿಸಿಲಿನ ಬೇಗೆಗೆ ತತ್ತರಿಸಿರುವ ಉತ್ತರ ಕರ್ನಾಟಕದ ಜನತೆಗೆ ಹವಾಮಾನ ಇಲಾಖೆ ಶಾಕ್ ನೀಡಿದೆ. ಇಂದಿನಿಂದ ಮೇ. 2ರವರೆಗೆ ವಿಪರೀತ ಬಿಸಿಲು, ಬಿಸಿಗಾಳಿ ಇರಲಿದೆ ಎಂದು ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆ ಜೊತೆಗೆ ರಣ ಬಿಸಿಲಿನ ಆರ್ಭಟ ಕೂಡ ಮುಂದುವರೆದಿದೆ.ಇಂದಿನಿಂದ ಮೇ 2ರ ವರೆಗೆ ಉತ್ತರ ಕರ್ನಾಟಕದ ಹಲವು ಸ್ಥಳಗಳಲ್ಲಿ ವಿಪರೀತ ಬಿಸಿಲು, ಬಿಸಿಗಾಳಿ ಇರಲಿದೆ.
ಆದ್ದರಿಂದ ಜನರು ಹೆಚ್ಚು ಬಿಸಿಲಿನಲ್ಲಿ ಓಡಾಡದೆ ತಮ್ಮ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಬೇಕು ಎಂದು ಸೂಚನೆ ನೀಡಿದೆ.