Ad imageAd image

ಬಿ ಜೆ ಪಿ ಅಭ್ಯರ್ಥಿ ಸೋಲಿಲ್ಲದ ಸರದಾರ ಹಳೇ ಹುಲಿ ಪಿ ಸಿ ಗದ್ದಿಗೌಡರ ಜನಸಾಗರದ ಜೊತೆ ನಾಮಪತ್ರ

Bharath Vaibhav
WhatsApp Group Join Now
Telegram Group Join Now

ಬಾಗಲಕೋಟೆ:-ಲೋಕಸಭಾ ಚುನಾವಣೆಯ ಬಾಗಲಕೋಟೆ ಮತಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಹಳೇ ಹುಲಿ ಸೋಲಿಲ್ಲದ ಸರದಾರ ಪಿ ಸಿ ಗದ್ದಿಗೌಡರ ನಿನ್ನೆ ಅಪಾರ ಜನಸಾಗರದ ನಡುವೆ ನಾಮಪತ್ರ ಸಲ್ಲಿಸಿದರು. ಮಹಿಳಾ ಕಾರ್ಯಕರ್ತರು ಕೇಸರಿ ರುಮಾಲು ಧರಿಸಿ ಮೋದಿ ಮೋದಿ ಎಂದು ಜಯಘೋಷ ಮೊಳಗಿಸಿದರು. ಮೋದಿ ಮುಖವಾಡ ಧರಿಸಿ ಮೋದಿಯವರು ಭಾವಚಿತ್ರಗಳನ್ನು ಹಿಡಿದು ಯುವಕರು ಮೆರವಣಿಗೆಯ ತುಂಬಾ ಕಾಣುತ್ತಿದ್ದರು. ಇಡೀ ಕೋಟೆ ನಗರಿ ಕೇಸರಿಮಯ ಆಗಿತ್ತು.

ಮೋದಿ ಮೋದಿ ಎಂಬ ಜಯಘೋಷ ಕೋಟೆ ನಗರಿಯ ಕೋಟೆ ಕೊಟ್ಟಲಗಳಿಗೆ ಬಡಿದು ಬರುವಂತೆ ಭಾಸವಾಗುತ್ತಿತ್ತು ಎನ್ನಬಹುದು.ಬಾಗಲಕೋಟೆ ನಗರದ ಕಣವಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಹೊರಟ ಮೆರವಣಿಗೆಯ ತೆರೆದ ವಾಹನದಲ್ಲಿ ಬಿ ಜೆ ಪಿ ಅಭ್ಯರ್ಥಿ ಪಿ ಸಿ ಗದ್ದಿಗೌಡರ,ಮುಖಂಡರಾದ ಮಾಜಿ ಮಾಖ್ಯಮಂತ್ರಿ ಜಗದೀಶ ಶೆಟ್ಟರ್, ಹಿಂದೂ ಫೈರ್ ಬ್ರಾಂಡ್ ಬಸನಗೌಡ ಪಾಟೀಲ ಯತ್ನಾಳ, ಜೆ ಡಿ ಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ಶಾಸಕರುಗಳಾದ ಸಿ ಸಿ ಪಾಟೀಲ, ಸಿದ್ದು ಸವದಿ,ಜಗದೀಶ್ ಗುಡಗುಂಟಿ. ವೀರಣ್ಣ ಚರಂತಿಮಠ, ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ, ಬಿ ಜೆ ಪಿ ಬಾಗಲಕೋಟೆ ಜಿಲ್ಲಾಧ್ಯಕ್ಷ ಶಾಂತಗೌಡ. ಟಿ. ಪಾಟೀಲ, ಬಾದಾಮಿ ತಾಲೂಕಾ ಮಂಡಲ ಅಧ್ಯಕ್ಷ ಯುವಮುಖಂಡ ನಾಗರಾಜ್. ಎಸ್.ಕಾಚಟ್ಟಿ ಸೇರಿದಂತೆ ಮುಖಂಡರು ಜೊತೆಗಿದ್ದರು.

ಕಣವಿ ವೀರಭಧ್ರೆಶ್ವರ ದೇವಸ್ಥಾನದಿಂದ ಸಾಗಿದ ಮೆರವಣಿಗೆ ಹಳೇ ಬಾಗಲಕೋಟೆ ಯಲ್ಲಿ ಸಾಗುತ್ತಾ ಬಸವೇಶ್ವರ ಸರ್ಕಲ್ ವರೆಗೆ ಮೆರವಣಿಗೆ ತಲುಪಿ ಬಸವೇಶ್ವರ ಸರ್ಕಲ್ ನಲ್ಲಿ ಮುಖಂಡರಾದ ಜಗದೀಶ್ ಶೆಟ್ಟರ್, ಮುರಗೇಶ್ ನಿರಾಣಿ,,ಜೆ ಡಿ ಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ,, ಸಿ ಸಿ ಪಾಟೀಲ, ಸಿದ್ದು ಸವದಿ, ವೀರಣ್ಣ ಚರಂತಿಮಠ ಅಭ್ಯರ್ಥಿ ಪರ ಭಾಷಣ ಮಾಡಿ ಲಕ್ಷ ಮತಗಳ ಅಂತರದಿಂದ ಆರಿಸಿ ತರಲು ಕರೆ ನೀಡಿದರು.
ಅಭ್ಯರ್ಥಿ ಪಿ ಸಿ ಗದ್ದಿಗೌಡರ ಮಾತನಾಡಿ ಚುನಾವಣಾ ಅಖಡದಲ್ಲಿರುವುದು ಗದ್ದಿಗೌಡರು ಅಲ್ಲಾ ನರೇಂದ್ರ ಮೋದಿಯವರು ನಿಂತಿದ್ದಾರೆ ಎಂದು ಒಂದೇ ಮಾತಿಗೆ ಇಡೀ ಕೋಟೆ ನಗರಿ ಮೋದಿ ಮೋದಿ ಎಂದು ಎಂದು ಘೋಷಣೆ ಮೊಳಗಿಸಿತು.

ನಂತರ ಬಸನಗೌಡ ಪಾಟೀಲ್ ಯತ್ನಾಲ್ ಮಾತಿಗೆ ಜನಸ್ತೋಮ್ ಕೇಕೆ ಹಾಕಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿತು. ಎಲ್ಲಾ ಕಾರ್ಯಕರ್ತರಲ್ಲಿ ಕೈ ಮುಗಿದು ಕಾಲು ಮುಗಿದು ಕೇಳಿಕೊಳ್ಳುತ್ತೇನೆ ಮೋದಿಯವರನ್ನು ಪ್ರಧಾನ ಮಂತ್ರಿ ಮಾಡಲು ಗದ್ದಿಗೌಡರನ್ನು ಲಕ್ಷ ಮತಗಳ ಅಂತರದಿಂದ ಆರಿಸಿ ತಂದು ಮೋದಿಯವರನ್ನು ಪ್ರಧಾನಿ ಮಾಡೋಣ ನಮ್ಮೆಲ್ಲರ ರಕ್ಷಣೆಗೆ ದೇಶ ರಕ್ಷಣೆಗೆ ಒಬ್ಬ ಯುಗಪುರುಷ ನನ್ನು ದೇವರು ನಮಗೆ ಕೊಟ್ಟಿದ್ದಾನೆ ಆ ಯುಗಪುರುಷ ಮೋದಿಯವರ ಕೈ ಬಳಪಡಿಸಲು ಎಲ್ಲರೂ ಒಟ್ಟಾಗಿ ಮತ ಹಾಕಿ ಎಂದು ತಮ್ಮ ಮೊನಾಚದ ಭಾಷಣದಿಂದ ಕೋಟೆ ನಗರಿ ಜನಸ್ತೋಮದ ಮನ ಗೆದ್ದರು.

ಈ ಮುಖ್ಯವಾದ ಅದ್ದೂರಿ ನಾಮಪತ್ರ ಸಲ್ಲಿಕೆಯಲ್ಲಿ ಬಾದಾಮಿ ಬಿ ಜೆ ಪಿ ಪಾಳ್ಯಯದ ಮುಂಚೂನಿ ನಾಯಕರಾದ ಮಾಜಿ ಶಾಸಕ ಎಂ. ಕೆ. ಪಟ್ಟಣಶೆಟ್ಟಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಯುವ ಮುಖಂಡ ಮಹಾಂತೇಶ್ ಮಮದಾಪೂರ, ಬಿ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಕುಮಾರಗೌಡ ಜನಾಲಿ, ಬಸುರಾಜಗೌಡ. ವೀ.ಪಾಟೀಲ, ವಿಶ್ವ ಹಿಂದೂ ಪರಿಷತ್ ನ ತಾಲೂಕಾ ಉಪಾಧ್ಯಕ್ಷ ರಮೇಶ್ ಹಾದಿಮನಿ, ಶರಣಪ್ಪಗೌಡ ಪಾಟೀಲ್ ಇವರುಗಳು ಹಾಗೂ ಇವರ ಬೆಂಬಲಿಗರು ನಾಮಪತ್ರ ಸಲ್ಲಿಸಲು ಬರದೇ ಗೈರು ಹಾಜರಿದ್ದಿದ್ದು ಕಾರ್ಯಕರ್ತರಿಗೆ ಮುಖಾಂಡರರುಗಳಿಗೆ ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ.

ಇತ್ತೀಚಿಗಷ್ಟೇ ಬಂಡಾಯ ಶಮನ ಮಾಡಿ ಪ್ರಮುಖ ಮುಖಂಡರು ಬಂದು ಸಂಧಾನ ಮಾಡಿಸಿದ್ದಾರೂ ನಾಮಪತ್ರ ಸಲ್ಲಿಸುವ ಸಮಯದಲ್ಲಿ ಗೈರು ಹಾಜರಾಗಿರುವ ಈ ಮುಖಂಡರ ಉದ್ದೇಶ ಏನು ಎಂಬುದು ಈಗ ಬಿ ಜೆ ಪಿ ಪಾಳ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ.

ವರದಿ:- ರಾಜೇಶ್. ಎಸ್. ದೇಸಾಯಿ 

WhatsApp Group Join Now
Telegram Group Join Now
Share This Article
error: Content is protected !!