Ad imageAd image

ಹುಕ್ಕೇರಿ ಯಲ್ಲಿ ಸಂಭ್ರಮದಿಂದ ಬಸವ ಜಯಂತಿ ಆಚರಣೆ

Bharath Vaibhav
WhatsApp Group Join Now
Telegram Group Join Now

ಹುಕ್ಕೇರಿ : 12 ನೇ ಶತಮಾನದಲ್ಲಿ ಸರ್ವ ಧರ್ಮದ ಸಮಾನತೆ ಸಾರಿದ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಇಂದು ಇಡಿ ವಿಶ್ವವೆ ಆಚರಿಸುತ್ತಿದೆ ಎಂದು ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. ಇಂದು ಹುಕ್ಕೇರಿಗೆ ನಗರದಲ್ಲಿ ಜಗಜ್ಯೋತಿ ಬಸವೇಶ್ವರರ ಜಯಂತಿ ಅಂಗವಾಗಿ ಹಮ್ಮಿಕೊಂಡ ಸಮಾರಂಭದಲ್ಲಿ ಎತ್ತುಗಳ ಮೇರವಣಿಗೆಗೆ ಚಾಲನೆ ನೀಡಿ ಮಾತನಾಡುತ್ತಾ ಸರ್ವಧರ್ಮದ ಸಮಾನತೆಯನ್ನು ಸಾರಿದ ಮಹಾನ್ ಚೇತನ ವಿಶ್ವಗುರು ಬಸವಣ್ಣನವರ ಜಯಂತಿಯಂದು ಹುಕ್ಕೇರಿ ನಗರದಲ್ಲಿ ಎತ್ತುಗಳಿಗೆ ವಿಶೇಷ ಅಲಂಕಾರ ನೆರವೇರಿಸಿ ಮೇರವಣೆಗೆ ಮೂಲಕ ಗ್ರಾಮದ ಪ್ರತಿ ದೇವಸ್ಥಾನಗಳಿಗೆ ತೇರಳಿ ಪೂಜೆ ನೇರವೇರಿಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ವಿರಕ್ತಮಠದ ಶಿವಬಸವ ಮಹಾಸ್ವಾಮಿಗಳು ಸರ್ವರಿಗೂ ಬಸವ ಜಯಂತಿಗೆ ಶುಭ ಕೋರಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು .

ಮೆರವಣಿಗೆಯಲ್ಲಿ ವಿಜಯ ರವದಿ, ಎ ಕೆ ಪಾಟೀಲ,ಸುಭಾಷ ನಾಯಿಕ,ಚಂದು ಗಂಗಣ್ಣವರ ,ಸುರೇಶ ಜಿನರಾಳಿ ಸೇರಿದಂತೆ ಇನ್ನೂ ಅನೇಕರು ಭಾಗಿಯಾಗಿದ್ದರು.

ವರದಿ: ಶಿವಾಜಿ ಎನ್ ಬಾಲೇಶಗೋಳ

WhatsApp Group Join Now
Telegram Group Join Now
Share This Article
error: Content is protected !!