Ad imageAd image

ಕೆ ಆರ್ ಎಸ್ ಪಕ್ಷದಿಂದ ಪ್ರಜ್ವಲ್ ಪೆನ್ ಡ್ರೈ ಕುರಿತು ಚಲೋ ಹಾಸನ ಕಾರ್ಯಕ್ರಮ

Bharath Vaibhav
WhatsApp Group Join Now
Telegram Group Join Now

ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಕೆ ಆರ್ ಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿರುಪಾದಿ ಕೆ ಗೋಮರ್ಸಿ ಹಾಸನ ಸಂಸದ ಪ್ರಜ್ವಲ್ ತನ್ನ ಬಳಿಗೆ ಸಹಾಯ ಯಾಚಿಸಿ ಬಂದ ಹಾಸನ ಜಿಲ್ಲೆಯ ನೂರಾರು ಹೆಣ್ಣುಮಕ್ಕಳನ್ನು, ಅಧಿಕಾರ ಮತ್ತು ಸಾಂದರ್ಭಿಕ ಲಾಭ ಪಡೆದು ಲೈಂಗಿಕವಾಗಿ ಶೋಷಣೆ ಮಾಡಿರುವುದು ದುರ್ದೈವದ ವಿಚಾರ. ಇದನ್ನು ಆಗ್ರಹಿಸಿ ಆರ್ ಎಸ್ ಪಕ್ಷವು ದಿನಾಂಕ 13-05-2024 ರಂದು ಅಬಲೆಯರನ್ನು ಗೌರವಿಸೋಣ ಅತ್ಯಾಚಾರಿಗೆ ತಕ್ಕ ಶಾಸ್ತಿ ಮಾಡೋಣ ಹಾಸನ ಚಲೋ” ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಪ್ರತಿಭಟನೆಗೆ ರಾಜ್ಯದ ಜನರು ಬೆಂಬಲ ನೀಡಬೇಕೆಂದು ಈ ಮೂಲಕ ಮನವಿ ಮಾಡಿದರು.

ಇವತ್ತಿನ ಪುರುಷ ಪ್ರಧಾನ ಮನಸ್ಥಿತಿಯ ಸಮಾಜದ ಕಾರಣದಿಂದಾಗಿ ಇದು ಸಾವಿರಾರು ಕುಟುಂಬಗಳಲ್ಲಿ ಅಸಹನೆ, ಸಿಟ್ಟು, ಆಕ್ರೋಶ, ದ್ವೇಷ ಮತ್ತು ಮತ್ಸರಗಳನ್ನು ಹುಟ್ಟು ಹಾಕಿ ಸಂತ್ರಸ್ತ ಮಹಿಳೆಯರನ್ನು ತುಚ್ಛವಾಗಿ ಹಾಗು ಅವಹೇಳನಕಾರಿಯಾಗಿ ನೋಡುವ ಸಂದರ್ಭ ಒದಗಿಬರುವ ಅವಕಾಶ ಸೃಷ್ಟಿಸಿ ಸಾಮಾಜಿಕ ಕ್ಷೋಭೆಗೆ ಕಾರಣವಾಗುವಂತಹ ವಿಚಾರ.

ಈ ಪ್ರಕರಣದಲ್ಲಿ ಜವಾಬ್ದಾರಿಯುತ ಸಂಸದ ಸ್ಥಾನದಲ್ಲಿರುವ ಪ್ರಜ್ವಲ್ ಸಹಾಯ ಕೋರಿ ಬಂದವರನ್ನು ಶೋಷಣೆ ಮಾಡಿರುವುದರಿಂದಾಗಿ ಶೋಷಣೆಗೆ ಒಳಗಾದ ಹೆಣ್ಣು ಮಕ್ಕಳು ಇಲ್ಲಿ ಬಲಿಪಶುಗಳಾಗಿದ್ದು ಅವರದು ಯಾವುದೇ ತಪ್ಪಿರುವುದಿಲ್ಲ. ಇದನ್ನು ನಾಗರಿಕ ಸಮಾಜ ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಸಂತ್ರಸ್ತ ಮಹಿಳೆಯರ ಕುಟುಂಬಸ್ಥರು, ಸಂಬಂಧಿಕರು ಮತ್ತು ಪರಿಚಯಸ್ಥರು ಸೇರಿದಂತೆ ಇಡೀ ಸಮಾಜ ಈ ಮಹಿಳೆಯರೊಂದಿಗೆ ನಿಂತು ಅವರಲ್ಲಿ ಧೈರ್ಯ ತುಂಬುವ ವಾತಾವರಣ ಸೃಷ್ಟಿಸಬೇಕು ಎಂದು ಕೆಆರ್‌ಎಸ್ ಪಕ್ಷ ಹಾಸನ ಜಿಲ್ಲೆಯ ಜನರನ್ನೂ ಒಳಗೊಂಡು ಇಡೀ ಕರ್ನಾಟಕ ಜನತೆಗೆ ಮನವಿ ಮಾಡುತ್ತದೆ. ಹಾಗೆಯೇ, ತನ್ನ ಜವಾಬ್ದಾರಿಯುತ ಸಂಸದ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡು, ಅಸಹಾಯಕ ಹೆಣ್ಣು ಮಕ್ಕಳನ್ನು ಶೋಷಣೆಗೊಳಪಡಿಸಿದ್ದಲ್ಲದೆ, ವಿಡಿಯೋ ಮಾಡಿಕೊಂಡು ವಿಕೃತಿ ಮೆರೆದಿರುವ ಪ್ರಜ್ವಲ್ ರೇವಣ್ಣ ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸುವುದರ ಮೂಲಕ ಯಾವುದೇ ಜವಾಬ್ದಾರಿಯುತ ಜನಪ್ರತಿನಿಧಿಯಾಗಲಿ, ಇತರರೇ ಆಗಲಿ ಇಂತಹ ಕೃತ್ಯಗಳನ್ನು ಎಸಗಲು ಆಗದಂತೆ ತಡೆಯೊಡ್ಡಬೇಕಾಗಿದೆ.

ಪ್ರಜ್ವಲ್ ಎಸಗಿರುವಂತಹ ದುಷ್ಕೃತ್ಯಗಳು ಕೇವಲ ಪ್ರಭಾವೀ ಕೌಟುಂಬಿಕ ಹಿನ್ನೆಲೆಯ, ರಾಜಕೀಯವಾಗಿ ಗೊತ್ತುಗುರಿಯಿಲ್ಲದ ವ್ಯಕ್ತಿಗಳನ್ನು ರಾಜಕೀಯ ಪಕ್ಷಗಳು ಚುನಾವಣೆಗೆ ನಿಲ್ಲಿಸಿ, ವಾಮಮಾರ್ಗದಲ್ಲಿ ಚುನಾವಣೆ ಗೆಲ್ಲುವ ಕಾರಣಗಳಿಂದಾಗಿಯೇ ನಡೆಯುತ್ತಿರುವುದನ್ನು ನಾವು ಗಮನಿಸಬೇಕು. ಅದ್ದರಿಂದ ಪ್ರಜಾತಂತ್ರಕ್ಕೆ ಬಂದೆರಗಿರುವ ಈ ಘೋರ ಕಾಯಿಲೆಯನ್ನು ನಿರ್ಮೂಲನೆ ಮಾಡುವ ಸಂಕಲ್ಪಕ್ಕೆ ಮುಂದಾಗಬೇಕಿದೆ.

ಹಾಗೆಯೇ, ಪೆನ್ ಡ್ರೈವ್ ಪ್ರಕರಣವು ಪಾರದರ್ಶಕವಾಗಿ ತನಿಖೆ ಆಗುವಂತೆ ನಾವು ಸರ್ಕಾರವನ್ನು ಆಗ್ರಹಿಸಬೇಕು. ಪಾರದರ್ಶಕ, ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕಾದರೆ ಪ್ರಜ್ವಲ್ ರೇವಣ್ಣ ಕುಟುಂಬದ ಕೃಪಾಕಟಾಕ್ಷದಿಂದ ಹಾಸನ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ, ಆ ಕುಟುಂಬದ ಋಣದಲ್ಲಿದ್ದೇವೆಂದು ಭಾವಿಸಿರುವ ಹಲವಾರು ನೌಕರರು ಹಾಗೂ ಅಧಿಕಾರಿಗಳನ್ನು ಈ ಪ್ರಕರಣದ ತನಿಖೆ ಮುಗಿಯುವವರೆಗೆ ಬೇರೆ ಜಿಲ್ಲೆಗೆ ವರ್ಗಾಯಿಸಿ ಪ್ರಕರಣದ ಸಾಕ್ಷ್ಯಗಳನ್ನು ತಿರುಚುವ, ಬೆದರಿಸುವುದನ್ನು ತಪ್ಪಿಸಬೇಕೆಂದು KRS ಪಕ್ಷ ಆಗ್ರಹಿಸುತ್ತದೆ.

ಸಂತ್ರಸ್ತ ಮಹಿಳೆಯೋರ್ವರು ಪ್ರಜ್ವಲ್ ಮತ್ತು ರೇವಣ್ಣ ಅವರ ಮೇಲೆ ಹೊಳೆನರಸೀಪುರ ಠಾಣೆಯಲ್ಲಿ ದೂರು ನೀಡಿ, ಮೊಕದ್ದಮೆ ದಾಖಲಾದ ಹತ್ತಾರು ಗಂಟೆಗಳ ನಂತರ ಆತ ವಿದೇಶಕ್ಕೆ ಪರಾರಿಯಾಗಿರುವುದನ್ನು, ಅದನ್ನು ತಪ್ಪಿಸಬಹುದಾಗಿದ್ದ ಅವಕಾಶವನ್ನು ಪೊಲೀಸ್ ಇಲಾಖೆಯ ಅಧಿಕಾರಿಗಳು ಬಳಸದೇ ಇರುವುದನ್ನು ಗಮನಿಸಿದರೆ ಕೆಳಹಂತದ ಸಿಬ್ಬಂದಿಯಿಂದ ಹಿಡಿದು ಉನ್ನತ ಅಧಿಕಾರಿಗಳವರೆಗೆ ಇದರಲ್ಲಿ ಶಾಮೀಲಾಗಿರಬಹುದೆಂದು ಸಕಾರಣವಾಗಿ ಅನುಮಾನಿಸಬಹುದಾಗಿದೆ.

ರಾಜ್ಯದ ಹಾಲಿ ಮತ್ತು ಮಾಜಿ ಪ್ರಭಾವಿ ಜನಪ್ರತಿನಿಧಿಗಳು ತಮ್ಮ ಇಂತಹದೇ ವಿಡಿಯೋಗಳು ಹೊರಬರಬಹುದು ಎಂಬ ಆತಂಕದಲ್ಲಿ ನ್ಯಾಯಾಲಯಗಳಿಂದ ಪ್ರತಿಬಂಧಕ ಆಜ್ಞೆ ಪಡೆದಿದ್ದಾರೆ.

ಇಂತಹ ಜನಪ್ರತಿನಿಧಿಗಳ ಹೆಸರುಗಳನ್ನು ಪಟ್ಟಿ ಮಾಡಿದರೆ ಅದು 50 ಜನರ ಹತ್ತಿರ ಇದೆ. ಈ ಪ್ರಮಾಣದಲ್ಲಿ ಜನಪ್ರತಿನಿಧಿಗಳು ತಮ್ಮ ಅಧಿಕಾರ ದುರುಪಯೋಗ/ ಲೈಂಗಿಕ ಶೋಷಣೆ ಅಥವಾ …. ಮಾಡಿ ಈಗ ಬ್ಲಾಕ್ ಮೇಲ್ ಗೆ ಒಳಗಾಗುತ್ತಾರೆ ಎಂದರೆ ಅವರುk ಯಾವ ರೀತಿಯಲ್ಲಿ ಜನರ ಪರವಾಗಿ ನಿರ್ಭೀತಿಯಿಂದ ಕಾರ್ಯ ನಿರ್ವಹಿಸಬಲ್ಲರು ಮತ್ತು ನಾಡಿನ ಹೆಣ್ಣು ಮಕ್ಕಳ ಸುರಕ್ಷತೆ ಬಗ್ಗೆ ಎಂಬ ಸಂದೇಹ ಕಾಡುತ್ತಿದೆ. ಇದು ಕೇವಲ ರಾಜಕಾರಿಣಿಗಳು ಮಾತ್ರ ಒಳಗೊಂಡಿರುವ ವಿಚಾರ ಮಾತ್ರವಲ್ಲ, ಅಧಿಕಾರಿಗಳು ಮತ್ತು ಖಾಸಗಿ ವಲಯದಲ್ಲಿ ಉನ್ನತ ಸ್ಥಾನದಲ್ಲಿರುವವರು ಕೂಡ ಇದೇ ರೀತಿ ಮಹಿಳೆಯರ ಮೇಲೆ ಶೋಷಣೆ ನಡೆಸುತ್ತಿದ್ದಾರೆ. ಇಂತಹ ಪ್ರಕರಣಗಳು ಮುಂದಿನ ದಿನಗಳಲ್ಲಿ ನಡೆಯಬಾರದು ಮತ್ತು ನಾಡಿನ ಮಹಿಳೆಯರ ಸುರಕ್ಷತೆಯಿಂದ ಇರಬೇಕೆಂದರೆ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಅತ್ಯಾಚಾರಿ ಮತ್ತು ಈ ಕೃತ್ಯಗಳಲ್ಲಿ ಸಹಕರಿಸಿದವರಿಗೆ ಹಾಗು ಈ ವಿಡಿಯೋಗಳನ್ನು ಹರಿಬಿಟ್ಟಿರುವರು ಸೇರಿ ತನಿಖೆಗೆ ಒಳಪಡಬೇಕು ಮತ್ತು … ಹಾಗೆಯೇ ಅತ್ಯಾಚಾರಿ ಮತ್ತು ತನಿಖೆ ನಡೆಸುತ್ತಿರುವ ಸರ್ಕಾರದ ಬಗ್ಗೆಯೂ ಸಂದೇಹಗಳಿದ್ದು, ನ್ಯಾಯಯುತ ತನಿಖೆ ನಡೆಯುತ್ತದೆ ಮತ್ತು ಸಂತ್ರಸ್ತರಿಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇಲ್ಲ, ಆದ್ದರಿಂದ ಈ ಪ್ರಕರಣದ ತನಿಖೆಯನ್ನು ನ್ಯಾಯಾಂಗದ ಉಸ್ತುವಾರಿಯಲ್ಲಿ ನಡೆಯಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಆಗ್ರಹಿಸುತ್ತದೆ ಎಂದು ತಿಳಿಸಿದರು.

ಪ್ರಸ್ತುತ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಪ್ರಥಮವಾಗಿ ದೂರು ಸಲ್ಲಿಸಿದ್ದು ಕೆ ಆರ್ ಎಸ್ ಪಕ್ಷ. ಈ ಪ್ರಕರಣ ನಮ್ಮ ಗಮನಕ್ಕೆ ಬಂದ ತಕ್ಷಣ ದಿನಾಂಕ 27-04-2024 ರಂದು ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಲಿಂಗೇಗೌಡ ಎಸ್. ಎಚ್. ಅವರು ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ನಮ್ಮ ದೂರಿನ ಆಧಾರದ ಮೇಲೆ ತಕ್ಷಣ ಕ್ರಮ ಕೈಗೊಂಡಿದ್ದರೆ, ಪ್ರಜ್ವಲ್ ರೇವಣ್ಣ ತಪ್ಪಿಸಿಕೊಳ್ಳುವುದನ್ನು ತಡೆಯಬಹುದಿತ್ತು. (ಈ ಪ್ರಕರಣದಲ್ಲಿ ಮೊದಲ ದೂರು ದಾಖಲಾಗಿದ್ದು ದಿನಾಂಕ 28-04-2024 ರಂದು). ರಾಜ್ಯದ ಪ್ರಮುಖ ಮೂರೂ ಪಕ್ಷಗಳು ಕೇವಲ ರಾಜಕೀಯ ಲಾಭ ಪಡೆಯುವ ದುರುದ್ದೇಶದಿಂದ
ಈ ಪ್ರಕರಣವನ್ನು ಬಳಸಿಕೊಳ್ಳುತ್ತಿದ್ದಾರೆ.

ಈ ಪಕ್ಷಗಳಿಗೆ ಮಹಿಳೆಯರ ಸುರಕ್ಷತೆ ಮತ್ತು ಗೌರವ ಆದ್ಯತೆ ಆಗಿರುವುದಿಲ್ಲ. ಈ ಪ್ರಕರಣವು ರಾಜ್ಯದ ಮಾನ ಮರ್ಯಾದೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಿಗೆ ಹಾಕಿದೆ. ಇನ್ನು ರಾಜ್ಯದ ಇತರ ರಾಜಕಾರಿಣಿಗಳ ಹಾಗು ಅಧಿಕಾರಿಗಳ ಪ್ರಕರಣಗಳು ಬಹಿರಂಗವಾದರೆ, ಅದರ ಪರಿಣಾಮಗಳನ್ನು ಓಯಿಸಿಕೊಳ್ಳಲು ಸಾಧ್ಯವಿಲ್ಲ. ಇಂತಹ ಪ್ರಕರಣಗಳು ಮತ್ತೆ ಆಗಬಾರದು.

WhatsApp Group Join Now
Telegram Group Join Now
Share This Article
error: Content is protected !!