Ad imageAd image

ಕಾಂಗ್ರೆಸ್ ನ ಬಾಗಲಕೋಟೆ ಲೋಕಸಭಾ ಅಭ್ಯರ್ಥಿ ಸಂಯುಕ್ತ ಪಾಟೀಲ ಪರ ಪ್ರಜಾಧ್ವನಿ ಚುನಾವಣಾ ಪ್ರಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿ.

Bharath Vaibhav
WhatsApp Group Join Now
Telegram Group Join Now

ಬಾಗಲಕೋಟ : ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ  ಸಂಯುಕ್ತಾ ಪಾಟೀಲ ಪರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಬನಹಟ್ಟಿಯಲ್ಲಿ ಬೃಹತ್ ಪ್ರಜಾಧ್ವನಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನಾಡಗೀತೆ ಹಾಡಿ ಸಸಿಗೆ ನೀರು ಹಾಕುವುದರ ಮೂಲಕ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಭಾಷನದುದ್ದಕ್ಕೂ ಬಿ ಜೆ ಪಿ ಸರಕಾರ ಹಾಗೂ ಮೋದಿಯವರು ಸುಳ್ಳು ಆಶ್ವಾಸನೆಗಳ ವಿರುದ್ಧ ಹರಿಹಾಯ್ದರು. ಸದನದಲ್ಲಿ ಕ್ಷೇತ್ರದ ಬಗ್ಗೆ ಮಾತನಾಡದ ಸಂಸದ ಪಿ ಸಿ ಗದ್ದಿಗೌಡರರಿಂದ ಅಭಿವೃದ್ಧಿ ಶೂನ್ಯ. ಅವರು ಅಭಿವೃದ್ಧಿಯ ಬಗ್ಗೆ ಸಂಸತ್ತಿನಲ್ಲಿ ಯಾವತ್ತೂ ಧ್ವನಿಎತ್ತಿ ಮಾತಾಡಿಲ್ಲ ಇಂತವರಿಂದ ಅಭಿವೃದ್ಧಿ ಎಂದಿಗೂ ಸಾಧ್ಯವಿಲ್ಲ.

ನಮ್ಮ ಅಭ್ಯರ್ಥಿ ಯುವನಾಯಕಿ ಸಂಯುಕ್ತಾ ಪಾಟೀಲ ರಾಜಕಾರಣದ ಕುಟುಂಬದಿಂದ ಬಂದಿರುವ ಈ ನಿಮ್ಮ ಮಗಳಿಗೆ ಆಶೀರ್ವಾದ ಮಾಡಿ ಆರಿಸಿ ಕಳಿಸಿದ್ದೇ ಆದಲ್ಲಿ ಸಂಸತ್ತಿನಲ್ಲಿ ನಿಮ್ಮ ಧ್ವನಿಯಾಗಿ ನಿಳ್ಳುತ್ತಾಳೆ ಎನ್ನುವ ಸಂಪೂರ್ಣ ಆತ್ಮವಿಶ್ವಾಸ ನನಗಿದೆ ಸಂಯುಕ್ತಾ ಪಾಟೀಲ ಈ ನಿಮ್ಮ ಸಹೋದರಿಯನ್ನು ಗೆಲ್ಲಿಸಿ ತರುವ ಜವಾಬ್ದಾರಿ ನಿಮ್ಮದು ಎಂದು ಕರೆ ನೀಡಿದರು. ಅಭ್ಯರ್ಥಿ ಸಂಯುಕ್ತಾ ಸಿದ್ದರಾಮಯ್ಯನವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.

ಇದೇ ವೇಳೆ ಬಾದಾಮಿ ಭಾಗದ ಹಿರಿಯ ರಾಜಕಾರಣಿ ಶಿವರಾಯಪ್ಪ.ಡಿ.ಜೋಗಿನ,,, ಪದ್ಮಜಿತ್ ನಾಡಗೌಡ,, ಹಿಪ್ಪರಗಿ ವಕೀಲರು ಸೇರಿದಂತೆ ಅನೇಕರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಕ್ಷದ ಮಾಲೆ ಹಾಕಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.

ಅಭ್ಯರ್ಥಿ ವೇದಿಕೆಯಲ್ಲಿ ಮಾತನಾಡಿ ಒಂದು ಅವಕಾಶ ಕೊಟ್ಟು ನೋಡಿ ನಿಮ್ಮ ಜೀತದಾಳಾಗಿ ದುಡಿದು ನಿಮ್ಮ ಖುಣ ಮುಟ್ಟಿಸುತ್ತೇನೆ. ಬಾಗಲಕೋಟೆ ಮತಕ್ಷೇತ್ರದ ಧ್ವನಿಯಾಗಿ ಸಂಸತ್ತಿನಲ್ಲಿ ಮಾತನಾಡುತ್ತೇನೆ ಎಂದು ಮತಯಾಚನೆ ಮಾಡಿದರು.

ಇದೇ ಸಂದರ್ಭದಲ್ಲಿ ಶಾಸಕ ಲಕ್ಶ್ಮಣ ಸವದಿ, ಸಚಿವ ಶಿವಾನಂದ ಪಾಟೀಲ,ಮಾಜಿ ಸಚಿವ ಅಜಯಕುಮಾರ್ ಸರನಾಯಕ, ಮಾಜಿ ಸಚಿವ ಎಸ್. ಆರ್ ಪಾಟೀಲ, ವಿನಯ ಕುಲಕರ್ಣಿಮಾಜಿ ಸಚಿವೆ ಉಮಾಶ್ರೀ, ಶಾಸಕರಾದ ಜೆ ಟಿ ಪಾಟೀಲ,ಆನಂದ್ ನ್ಯಾಮಗೌಡ್ರ , ಭೀಮಸೇನ ಚಿಮ್ಮನಕಟ್ಟಿ,ವಿಜಯಾನಂದ ಕಾಶಾಪ್ಪನವರ,ಬಿ. ಆರ್. ಯಾವಗಲ್,ಜಿಲ್ಲಾಧ್ಯಕ್ಷ ಎಸ್. ಜಿ.ನಂಜಯ್ಯನಮಠ,ಸುನೀಲಗೌಡ,ಮಹಿಳಾ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ರಕ್ಷಿತಾ ಭರತಕುಮಾರ ಈಟಿ, ಬಾಯಕ್ಕ ಮೇಟಿ,ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ವರದಿ: ರಾಜೇಶ್. ಎಸ್. ದೇಸಾಯಿ 

WhatsApp Group Join Now
Telegram Group Join Now
Share This Article
error: Content is protected !!