Ad imageAd image

ಕಾಂಗ್ರೆಸ್​​ನಿಂದ ಮಾದಿಗರಿಗೆ ಅನ್ಯಾಯ:ನಿಜಾಂಪುರ್ ಆರೋಪ

Bharath Vaibhav
WhatsApp Group Join Now
Telegram Group Join Now

ಹುಮನಾಬಾದ:-  ಮಾದಿಗ ಸಮುದಾಯಕ್ಕೆ ಕಾಂಗ್ರೆಸ್​​ ಪಕ್ಷ ಅನ್ಯಾಯ ಮಾಡುತ್ತ ಬರುತ್ತಿದೆ ಎಂದು ಮಾದಿಗ ದಂಡೋರ ಸಮಿತಿಯ ಮುಖಂಡ ರವಿ ನಿಜಾಂಪುರ ಆರೋಪ ಮಾಡಿದರು.ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕಾಂಗ್ರೆಸ್ ಪಕ್ಷದಿಂದ ನಮ್ಮ ಸಮುದಾಯದ ರಾಜ್ಯ ನಾಯಕರಿಗೆ ತುಳಿಯುವ ಹುನ್ನಾರು ನಡೆಯುತ್ತಿದೆ,ಬಿಜೆಪಿಗೆ ಬೆಂಬಲಿಸಿ ಅಧಿಕಾರಕ್ಕೆ ತಂದರೆ ಸದಾಶಿವ ವರದಿ ಜಾರಿಯಾಗುತ್ತೆ ಎಂಬ ಭರವಸೆ ವ್ಯಕ್ತಪಡಿಸಿದರು.

ಬಳಿಕ ಮಾಜಿ ತಾಲೂಕು ಪಂಚಾಯತ್ ಸದಸ್ಯ ಪರಮೇಶ್ವರ ಕಾಳಮಂದರಗಿ ಮಾತಾಡಿ,ಸುಮಾರು ವರ್ಷಗಳಿಂದ ಮಾದಿಗ ಸಮುದಾಯದ ಮತಗಳು ಪಡೆದು ಕಾಂಗ್ರೆಸ್ ಪಕ್ಷ ಅಧಿಕಾರಿ ಮಾಡುತ್ತ ಬಂದಿದೆ,ಆದರೆ ಮಾಗಿದರ ಏಳಿಗೆಗೆ ಯಾವತ್ತೂ ಚಿಂತೆ ಮಾಡಿಲ್ಲ.ಹೀಗಾಗಿ ಈ ಬಾರಿ ಮಾದಿಗರು ಬಿಜೆಪಿಗೆ ಮತ ನೀಡುವ ಮೂಲಕ ಭಗವಂತ ಖುಬಾಗೆ ಗೆಲ್ಲಿಸೋಣ ಎಂದು ಹೇಳಿದರು.ನಂತರ ಕಮಲಕಾರ ಹೆಗಡೆ ಮಾತನಾಡಿ,ಸದಾಶಿವ ವರದಿ ಜಾರಿ ಹೆಸರಲ್ಲಿ ಆಸೆ ತೋರಿಸಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುತ್ತ ಬಂದಿದೆ.ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ್ರೆ ಒಳ ಮೀಸಲಾತಿ ಜಾರಿ ಮಾಡುವ ಭರವಸೆ ಬಿಜೆಪಿ ನೀಡಿದೆ.ಹೀಗಾಗಿ ಬಿಜೆಪಿಗೆ ಮಾದಿಗರು ಮತ ನೀಡುವ ಮೂಲಕ ಬೆಂಬಲಿಸಿ ಎಂದು ಮನವಿ ಮಾಡಿದರು.

ಪ್ರಶಾಂತ ಎಂಜಿ ಮಾತಾಡಿ,ಮಂದ ಕೃಷ್ಣ ಮಾದಿಗ ಅವರ ನೇತೃತ್ವದಲ್ಲಿ ಒಳ ಮೀಸಲಾತಿ ಜಾರಿ ಹಿನ್ನಲೆಯಿಂದ ಮೋದಿಗೆ ಬೆಂಬಲ ನೀಡುವ ಮಾತಾಗಿದ್ದು ನಮ್ಮ ಸಮುದಾಯದ ರಾಷ್ಟ್ರೀಯ ನಾಯಕನ ವಿಶ್ವಾಸಕ್ಕೆ ಬೆಂಬಲ ನೀಡಬೇಕಾಗಿದೆ ಎಂದರು.ಈ ಸಂದರ್ಭದಲ್ಲಿ ರಾಜಕುಮಾರ ಕಾಣೆ,ಗೋರಖ್ ನಿಂಬೂರ,ಅಮರೇಶ ಸಿಂಧನಕೇರಾ,ಪ್ರವೀಣ ಸಿಂಧನಕೆರಾ,ಪ್ರದೀಪ ನೆಲ್ವಾಡ ಉಪಸ್ಥಿತರಿದ್ದರು.

ವರದಿ;-  ಸಜೀಶ ಲಂಬುನೋರ್

WhatsApp Group Join Now
Telegram Group Join Now
Share This Article
error: Content is protected !!