Ad imageAd image

ನಾಗಸಮುದ್ರ ಗ್ರಾ,ಪಂಚಾಯಿತಿ ಅಧ್ಯಕ್ಷರಾಗಿ,ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪದ್ಮಾವತಿ ನಾಗರಾಜ್ ಅವಿರೋಧವಾಗಿ ಆಯ್ಕೆ

Bharath Vaibhav
ನಾಗಸಮುದ್ರ  ಗ್ರಾ,ಪಂಚಾಯಿತಿ ಅಧ್ಯಕ್ಷರಾಗಿ,ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪದ್ಮಾವತಿ ನಾಗರಾಜ್ ಅವಿರೋಧವಾಗಿ ಆಯ್ಕೆ
WhatsApp Group Join Now
Telegram Group Join Now

ಮೊಳಕಾಲ್ಮುರು:-   ಈ ಹಿಂದಿನ ಅಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸೋಮವಾರ ಮಧ್ಯಾಹ್ನ 11:30ಕ್ಕೆ ನಡೆದ ಚುನಾವಣೆಯಲ್ಲಿ ಪದ್ಮಾವತಿಯವರು ಅಧ್ಯಕ್ಷ ಸ್ಥಾನ ಆಯ್ಕೆ ಬಯಸಿ ನಾಮಪತ್ರ ಸಲ್ಲಿಕೆ ಮಾಡಿದ್ದರು.

ಸಾಮಾನ್ಯ ವರ್ಗದ ಮಹಿಳಾ ಸ್ಥಾನಕ್ಕೆ ಮಿಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಒಂದು ನಾಮ ಪತ್ರ ಸಲ್ಲಿಕೆಯಾದ ಕಾರಣ ಚುನಾವಣಾಧಿಕಾರಿಯದ ತಹಸಿಲ್ದಾರ್ ಶಂಕರಪ್ಪ ಸಲ್ಲಿಕೆಯಾದ ನಾಮಪತ್ರವನ್ನು ಪರಿಶೀಲಿಸಿದ ನಂತರ ಅಧ್ಯಕ್ಷರನ್ನಾಗಿ ಪದ್ಮಾವತಿ ನಾಗರಾಜ್ ರವರನ್ನು ಘೋಷಣೆ ಮಾಡಿದರು.

ಸ್ಥಳದಲ್ಲಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಜಿ ಆನಂದ, ಸದಸ್ಯರಾದ ಗೋವಿಂದಪ್ಪ, ಅಂಜಿನಮ್ಮ ಲಿಂಗಯ್ಯ ನಾಗೇಂದ್ರಪ್ಪ ನಜೀರ್ ಅಹ್ಮದ್ ಗಂಗಮ್ಮ ಯಾಸಿನ್ ಬಾನು, ನಾಗೇಶ್ ಶಿವಲಿಂಗ ,ತಿಪ್ಪಮ್ಮ ತಿಮ್ಮಕ್ಕ ಪುಷ್ಪಾವತಿ ಮಲ್ಲಿಕಾರ್ಜುನ ಮಹಾಂತಕ್ಕ ನಾಗರಾಜ್ ತಿಮ್ಮಕ್ಕ ಗೋವಿಂದ ಗುರುಸ್ವಾಮಿ,ಹಾಗೂ ಉಪತಹಶೀಲ್ದಾರ್ ಮಹಾಂತೇಶ್ ಮತ್ತು ಪಿಡಿಒ ಹಾಗೂ ಸಿಬ್ಬಂದಿಗಳು, ಕಾಂಗ್ರೆಸ್ ಮುಖಂಡರು ಹಾಗೂ ಊರಿನ ಗ್ರಾಮಸ್ಥರು ಇದ್ದರು.

 

ವರದಿ ಪಿಎಂ ಗಂಗಾಧರ

 

WhatsApp Group Join Now
Telegram Group Join Now
Share This Article
error: Content is protected !!