Ad imageAd image

ಇಂದಿರಾ ನಗರದಲ್ಲಿ ಕಾಂಗ್ರೆಸ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೋಳಿ ಪರ ಶಾಸಕ ಗಣೇಶ್ ಹುಕ್ಕೇರಿ ನೇತ್ರತ್ವದಲ್ಲಿ ಭರ್ಜರಿ ಪ್ರಚಾರ

Bharath Vaibhav
WhatsApp Group Join Now
Telegram Group Join Now

ಚಿಕ್ಕೋಡಿ:-  ಇಂದಿರಾನಗರದಲ್ಲಿ ಕಾಂಗ್ರೆಸ್ ಪರ ಮತಯಾಚನೆ ಕಾರ್ಯಕ್ರಮವನ್ನು ನಗರಸೇವಕರಾದ ಸಾಬಿರ್ ಜಮಾದಾರ್ ಹಾಗೂ ಮುದ್ದು ಸರ್ ಜಮಾದಾರ್ ಇವರ ಮುಂದಾಳತ್ವದಲ್ಲಿ ಮತಯಾಚನೆ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ನಾಳೆ ನಡೆಯುವ ಮೇ 7 ರಂದು ತಪ್ಪದೇ ಯಾರು ಮನೆಯಲ್ಲಿ ನಿಲ್ಲದೆ ಪ್ರತಿಯೊಬ್ಬರು ಮತದಾನ ಹಕ್ಕನ್ನು ಚಲಾಯಿಸಬೇಕು ತಪ್ಪದೆ ಮತದಾನ ಮಾಡಬೇಕು ಕಾಂಗ್ರೆಸ್ ಪಕ್ಷದ ಕೈ ಗುರುತಿಗೆ ಅಮೂಲ್ಯವಾದ ಮತ ಹಾಕಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಗಣೇಶ ಹುಕ್ಕೇರಿ, ರಾಮಾ ಮಾನೆ, ಶಾಸಕರಾದ ಎಚ್ ಡಿ ತಮ್ಮಯ್ಯ, ಹಾಗೂ ಕಾಂಗ್ರೆಸ್ ಮುಖಂಡರು ಮಾತನಾಡಿ ಈ ಬಾರಿ 2 ಲಕ್ಷಕ್ಕೂ ಹೆಚ್ಚಿನ ಮತಗಳಿಂದ ಪ್ರಿಯಾಂಕಾ ಜಾರಕಿಹೊಳಿಯವರನ್ನು ಆರಿಸಿ ತರಬೇಕೆಂದು ಮನವಿ ಮಾಡಿದರು.


ಇದೇ ಸಂದರ್ಭದಲ್ಲಿ ಗೋಕಾಕದ ಯೂಟ್ಯೂಬರ್ ಲಫಂಗ ರಾಜಾ ಎಂಬ ಹಾಸ್ಯ ಕಲಾವಿದರು ಮಾತನಾಡಿ ಕಾಂಗ್ರೆಸ್ ಅಭ್ಯರ್ಥಿಯಾದ ಪ್ರಿಯಾಂಕ ಜಾರಕಿಹೊಳಿ ಇವರಿಗೆ ಮತ ನೀಡಿ ಆರಿಸಿ ತರಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಇಂದ್ರಾನಗರದ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಹದಿನಾಲ್ಕು ಮತ್ತು ಹದಿನೈದು ವಾರ್ಡಿನ ಎಲ್ಲ ಮಹಿಳೆ ಹಾಗೂ ಪುರುಷರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು.

ವರದಿ ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!