ನವದೆಹಲಿ: ನಟಿ ದೀಪಿಕಾ ಪಡುಕೋಣೆ ತಾಯಿಯಾದ ನಂತರ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದಿದ್ದರೂ ಸಹ ಬೇರೆ ಬೇರೆ ಕಂಪನಿಗಳ ರಾಯಭಾರಿ ಆಗಿ ಹೊರಹೊಮ್ಮುತ್ತಿದ್ದಾರೆ.
ಇದೀಗ ದೀಪಿಕಾ ಪಡುಕೋಣೆ ಅವರನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮೊದಲ ಮಾನಸಿಕ ಆರೋಗ್ಯ ರಾಯಭಾರಿಯಾಗಿ ಆಯ್ಕೆ ಮಾಡಿದೆ.
ಮಾನಸಿಕ ಆರೋಗ್ಯ ಕಾಪಾಡುವತ್ತ ಮುಖ್ಯ ಹೆಜ್ಜೆ
ದೇಶದ ಜನರ ಮಾನಸಿಕ ಆರೋಗ್ಯವನ್ನ ಗಟ್ಟಿ ಮಾಡುವಲ್ಲಿ ಹಾಗೂ ಉತ್ತಮ ಪರಿಸರ ವ್ಯವಸ್ಥೆಯನ್ನ ನಿರ್ಮಾಣ ಮಾಡುವತ್ತ ಇದು ಬಹಳ ಮುಖ್ಯವಾದ ಹೆಜ್ಜೆಯಾಗಿದೆ.
ದೀಪಿಕಾ ಅವರನ್ನ ರಾಯಭಾರಿ ಮಾಡುವ ಮೂಲಕ ಭಾರತದ ಮಾನಸಿಕ ಆರೋಗ್ಯಕ್ಕೆ ಬೆಂಬಲ ನೀಡುವ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಯಾವುದೇ ಹಿಂಜರಿಕೆ ಇಲ್ಲದೇ ಮಾತನಾಡಲು ಜನರಿಗೆ ಉತ್ತೇಜನ ನೀಡುವ ಗುರಿಯನ್ನ ಹೊಂದಿದೆ.




