Ad imageAd image

ಶೀಘ್ರವೇ ಡಿ. ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ : ಖ್ಯಾತ ಜ್ಯೋತಿಷಿಯಿಂದ ಭವಿಷ್ಯ 

Bharath Vaibhav
DKS
WhatsApp Group Join Now
Telegram Group Join Now

ಬೆಂಗಳೂರು: ಮುಂದಿನ ಒಂದೂವರೆ ವರ್ಷದ ಬಳಿಕ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವುದು ನಿಶ್ಚಿತ ಎಂದು ಖ್ಯಾತ ಜ್ಯೋತಿಷಿ ರಾಜಗುರು ದ್ವಾರಕನಾಥ್ ಗುರೂಜಿ ಭವಿಷ್ಯ ನುಡಿದಿದ್ದಾರೆ.

ಗ್ರಹಗತಿಗಳ ಆಧಾರದ ಮೇಲೆ ದೇಶದ ರಾಜಕೀಯ ಭವಿಷ್ಯ ನುಡಿದಿರುವ ಗುರೂಜಿ, ದೇಶಕಾಲ ಅನುಸಾರದಲ್ಲಿ ಶಿವಕುಮಾರ್ ಅವರಿಗೆ ರಾಜ ಸರ್ವ ಸಂಗ ಪರಿತ್ಯಾಗಿಯಾಗಿ ಅಧಿಕಾರ ನಡೆಸಿ ಚರಿತ್ರೆಯಲ್ಲಿ ಉಳಿಯುತ್ತಾರೆ ತಿಳಿಸಿದ್ದಾರೆ.

ರಾಜ್ಯದಲ್ಲಿ 135 ಶಾಸಕರ ಬಲ ಹೊಂದಿರುವ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಸಾಧ್ಯವೇ ಇಲ್ಲ. 5 ವರ್ಷ ಅಧಿಕಾರ ನಡೆಸಲಿದೆ. ಆದರೆ, ಮಹಾರಾಷ್ಟ್ರದಲ್ಲಿ ಸರ್ಕಾರ ಬದಲಾಗಲಿದೆ ಎಂದು ಹೇಳಿದರು.

ಇನ್ನೂ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಿತ್ರಪಕ್ಷಗಳ ಸಹಾಯ ಇಲ್ಲದೇ ಬಿಜೆಪಿಯೊಂದೇ ಅಧಿಕಾರ ಚುಕ್ಕಾಣಿ ಹಿಡಿಯುವುದು ಸಾಧ್ಯವಿಲ್ಲ. ಎನ್‍ಡಿಎ ಮೈತ್ರಿಕೂಟ ಬಲ 300-302 ಸ್ಥಾನಗಳನ್ನು ಗೆಲ್ಲಬಹುದು. ಈ ಬಾರಿ ಪ್ರಬಲ ವಿರೋಧ ಪಕ್ಷ ಲೋಕಸಭೆಯಲ್ಲಿ ಇರಲಿದೆ ಎಂದು ಭವಿಷ್ಯ ನುಡಿದರು.

ನಾನು ಮೋದಿ ವಿರೋಧಯಲ್ಲ. ಗ್ರಹಗತಿ ವಿಶ್ಲೇಷಣೆ ಆಧರಿಸಿ ಹೇಳುವುದಾದರೆ, ಜೂ.4ರಂದು ಫಲಿತಾಂಶ ಪ್ರಕಟವಾದರೂ ಕೇಂದ್ರದಲ್ಲಿ ಸರ್ಕಾರ ರಚನೆ ವಿಳಂಬವಾಗಲಿದೆ.

ಪ್ರಧಾನಿ ಅಭ್ಯರ್ಥಿ ಆಯ್ಕೆಯೂ ಚರ್ಚೆಗೆ ಗ್ರಾಸವಾಗಲಿದೆ. ಸಂಘ ಪರಿವಾರವು ಸರ್ಕಾರ ರಚನೆ ವಿಚಾರದಲ್ಲಿ ಪ್ರಮುಖ ಪಾತ್ರವಹಿಸಲಿದೆ. ಈ ಬಾರಿ ಮಹಾರಾಷ್ಟ್ರ, ಬಿಹಾರ, ರಾಜಸ್ಥಾನ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಬಿಜೆಪಿ ಕಡಿಮೆ ಸೀಟುಗಳನ್ನು ಗೆಲ್ಲಲಿದೆ ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!