Ad imageAd image

ಚಿಕ್ಕೋಡಿ ಲೋಕಸಭಾ ಚುನಾವಣೆ ಪ್ರಚಾರಾರ್ಥವಾಗಿ

Bharath Vaibhav
WhatsApp Group Join Now
Telegram Group Join Now

ನಿಪ್ಪಾಣಿ :- ಚಿಕ್ಕೋಡಿ ಲೋಕಸಭಾ ಚುನಾವಣೆ ಪ್ರಚಾರಾರ್ಥವಾಗಿ ಕಾಗವಾಡ ಮತಕ್ಷೇತ್ರದ ಅನಂತಪುರ ಜಿ.ಪಂ.ವ್ಯಾಪ್ತಿಯ ಗುಂಡೇವಾಡಿ ಗ್ರಾಮದಲ್ಲಿ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆಯವರು ಪ್ರಚಾರ ಸಭೆ ನಡೆಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಮತಯಾಚನೆ ಮಾಡಿದರು.

ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಗಳಾದ ಆಯುಷ್ಮಾನ್ ಭಾರತ್, ಡಿಜಿಟಲ್ ಇಂಡಿಯಾ, ಮುದ್ರಾ ,ಜಲಜೀವನ್ ಹಾಗೂ ಅನೇಕ ಯೋಜನೆಗಳು ಎಲ್ಲರ ಬದುಕನ್ನು ಸುಗಮಗೊಳಿಸುವತ್ತ ಶ್ರಮಿಸಿದ್ದೇವೆ. ಸದೃಢ ಭಾರತದತ್ತ ಹೆಜ್ಜೆ ಹಾಕುತ್ತ ವಿಕಸಿತ ಭಾರತದ ಕನಸನ್ನು ನನಸು ಮಾಡಲು ನಾವೆಲ್ಲರೂ ಮೋದಿಜಿಯವರ ಕೈಜೋಡಿಸಲು ನನಗೆ ತಮ್ಮ ಅಮೂಲ್ಯವಾದ ಮತ ನೀಡಿ ಆಶಿರ್ವಾದ ಮಾಡಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯಸಭೆ ಸದಸ್ಯರಾದ ಶ್ರೀ ಈರಣ್ಣ ಕಡಾಡಿ, ಮಾಜಿ ಸಚಿವರಾದ ಶ್ರೀ ಶ್ರೀಮಂತ ಪಾಟೀಲ, ಮಂಡಲ ಅಧ್ಯಕ್ಷರಾದ ಶ್ರೀ ತಮ್ಮಣ್ಣ ಪಾರಶೆಟ್ಟಿ,ಶ್ರೀ ಅಭಯ ಅಕಿವಾಟೆ,ಶ್ರೀ ಅಪ್ಪಾಸಾಬ ಅವತಾಡೆ,ಶ್ರೀ ಪ್ರಭಾಕರ ಚವ್ಹಾಣ,ಶ್ರೀ ನಿಂಗಪ್ಪ ಖೋಕಲೆ, ಸ್ಥಳೀಯ ಮುಖಂಡರು, ಗಣ್ಯರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!