Ad imageAd image

ಸಂತ ನಿರಂಕಾರಿ ಮಿಷನ್ ಬೆಳಗಾವಿ ಶಾಖಾವತಿಯಿಂದ ಉಚಿತವಾಗಿ ವೈದ್ಯಕೀಯ ಚಿಕಿತ್ಸೆ

Bharath Vaibhav
WhatsApp Group Join Now
Telegram Group Join Now

ಬೆಳಗಾವಿ :

*ಸಂತ ನಿರಂಕಾರಿ ಮಿಷನ್ ಬೆಳಗಾವಿ ಶಾಖಾವತಿಯಿಂದ ಉಚಿತವಾಗಿ ವೈದ್ಯಕೀಯ ಚಿಕಿತ್ಸೆ*

 

*ಹೌದು ಹುಬ್ಬಳ್ಳಿಯ ಖ್ಯಾತ ಹೃದಯ ರೋಗ ತಜ್ಞ ಡಾಕ್ಟರ್ ಪುರುಷೋತ್ತಮ್ ಕ್ಯಾಂಪ ಏರಿಯಾದ ಸಂತ ನಿರಂಕಾರಿ ಆಶ್ರಮಕ್ಕೆ ಭೇಟಿ*

 

*ಈ ಒಂದು ಸಂತ ನಿರಂಕಾರಿ ಆಶ್ರಮವು ಮೊದಲಿಗೆ 1929 ರಲ್ಲಿ ಸದ್ಗುರು ಬಾಬಾ ಬುಟಸಿಂಗ್ ಜಿ ಮಹಾರಾಜ ರವರು ದೆಹಲಿ ಯಲ್ಲಿ ಸ್ಥಾಪನೆ ಮಾಡಿದರು. ಈಗ ಈ ಪೀಠವನ್ನು ಆರನೇ ತಲೆಮಾರಿನ ಸದ್ಗುರು ಮಾತ ಸುದೀಕ್ಷಾ ಜೀ ಮಹಾರಾಜರರಾಗಿದ್ದಾರೆ.

 

*95 ವರ್ಷಗಳ ಕಾಲ ನಿರಂತರವಾಗಿ ಜನರಲ್ಲಿ ಆಧ್ಯಾತ್ಮಿಕ ವಿಚಾರಗಳು ಹಾಗೂ ಜಾತಿ,ಧರ್ಮ,ಬೇಧ-ಭಾವ ಬಿಟ್ಟು ಎಲ್ಲರೂ ಒಂದೇ ಎಂಬ ಭಾವನೆ ಹೊಂದುವ ತತ್ವಗಳನ್ನು ಆಧರಿಸಿ ಇರುವಂತಹ ಈ ಒಂದು ಸಂತ ನಿರಂಕಾರಿ ಆಶ್ರಮಕ್ಕೆ , ಹುಬ್ಬಳ್ಳಿಯ ಖ್ಯಾತ ಹೃದಯ ರೋಗ ತಜ್ಞ ಡಾಕ್ಟರ ಪುರುಷೋತ್ತಮ್ ಅವರು ಭೇಟಿ ನೀಡಿ ಉಚಿತವಾಗಿ ಹೃದಯಕ್ಕೆ ಸಂಬಂಧಪಟ್ಟ ಚಿಕಿತ್ಸೆಯನ್ನು ಮಾಡಿದರು.

*ಈ ಒಂದು ಕಾರ್ಯಕ್ರಮದ ಸಂಬಂಧಿಸಿದಂತೆ ಮಾತನಾಡಿದ ಖ್ಯಾತ ಹೃದಯ ತಜ್ಞ ಡಾಕ್ಟರ್ ಪುರುಷೋತ್ತಮ್ ರವರು ಇಂದು ನಾವು ಎರಡು ನೂರಕ್ಕೂ ಹೆಚ್ಚು ಜನರನ್ನು ಉಚಿತವಾಗಿ ಇಸಿಜಿ ಹಾಗೂ ಇನ್ನಿತರ ಖಾಯಿಲೆಗೆ ಸಂಬಂಧಪಟ್ಟ ಚಿಕಿತ್ಸೆಯನ್ನು ನೀಡುತ್ತಿದ್ದೇವೆ ಹಾಗೂ ಸಂತ ನಿರಂಕಾರಿ ಆಶ್ರಮದ ಗುರುಗಳಾದ ಶ್ರೀ ಸದ್ಗುರು ಮಾತಾ ಸುದೀಕ್ಷಾ ಜಿ ಮಹಾರಾಜ ರವರ ಸಂಬಂಧಪಟ್ಟ ಎಲ್ಲಾ ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿರುವ ಬಡ ಜನರಿಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡುತ್ತಿದ್ದೇವೆ ಎಂದು ಈ ಸಂದರ್ಭದಲ್ಲಿ ಮಾತನಾಡಿದರು.

 

*ಬೆಳಗಾವಿ ನಗರದ ಕ್ಯಾಂಪ್ ಏರಿಯಾದಲ್ಲಿ ಕಳೆದ 20 ವರ್ಷಗಳಿಂದ ಸಂತ ನಿರಂಕಾರಿ ಭವನವಿದ್ದು ಇಲ್ಲಿ ದಿನ ಮುಂಜಾನೆ ಏಳರಿಂದ ಎಂಟರವರೆಗೆ ಹಾಗೂ ರವಿವಾರ ಮುಂಜಾನೆ 10 ರಿಂದ 12 ಗಂಟೆವರೆಗೆ ಸತ್ತ ಸಂಘ ಕಾರ್ಯಕ್ರಮ ನಡೆಯುತ್ತದೆ.

 

*ಹೃದಯ ರೋಗ ತಜ್ಞರು ಡಾಕ್ಟರ್ ಪುರುಷೋತ್ತಮ್ ರವರನ್ನು ಅವ್ವಾನಿಸಿ ಬಡ ಜನರಿಗೆ ಅನುಕೂಲವಾಗಲೆಂದು ಈ ಒಂದು ಕಾರ್ಯಕ್ರಮವನ್ನು ಆಶ್ರಮ ನಡೆಸಿದೆ.

*ಈ ಒಂದು ಕಾರ್ಯಕ್ರಮಕ್ಕೆ ಶಶಿ ಆನಂದ ಜಿ ಸಂಯೋಜಕರು ಸಂತ ನಿರಂಕಾರಿ ಆಶ್ರಮ, ತುಷಾರ್ ಲಂಕಾ ಜೀ ಕಾರ್ಯದರ್ಶಿಗಳು, ಗಜಾನನ ಗವಾನೆ ಸೇವಾದಳ ಶಿಕ್ಷಕ , ವಿ ಎನ್ ಲಾಸೇ ಜ್ಞಾನ ಪ್ರಚಾರಕ ಹಾಗೂ ಎನ ಪ್ರಶಾಂತ್ ರಾವ್ ಭಕ್ತರು ಹಾಗೂ ಸದ್ಗುರು ಮಾತಾ ಸುದ್ದಿಕ್ಷ ಜೀ ಮಹಾರಾಜರ ಎಲ್ಲ ಭಕ್ತರು ಉಪಸಿತರಿದ್ದರು.

 

*ವರದಿ : ಮಂಜುನಾಥ ರಜಪೂತ*

WhatsApp Group Join Now
Telegram Group Join Now
Share This Article
error: Content is protected !!