Ad imageAd image

ಅದ್ದೂರಿಯಾಗಿ ಜರುಗಿದ ಹುಕ್ಕೇರಿ ಹಿರೇಮಠ ಶ್ರೀ ಗುರುಶಾಂತೇಶ್ವರ ರಥೊತ್ಸವ

Bharath Vaibhav
ಅದ್ದೂರಿಯಾಗಿ ಜರುಗಿದ ಹುಕ್ಕೇರಿ ಹಿರೇಮಠ ಶ್ರೀ ಗುರುಶಾಂತೇಶ್ವರ ರಥೊತ್ಸವ
WhatsApp Group Join Now
Telegram Group Join Now

ಹುಕ್ಕೇರಿ:- ನಗರದ ಶ್ರೀ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಅಧಿಪತಿ ಗುರುಶಾಂತೇಶ್ವರ ಮಹಾಸ್ವಾಮಿಯ ರಥೊತ್ಸವ ಅದ್ದೂರಿಯಾಗಿ ಜರುಗೀತು.ಪ್ರಾಥಕಾಲದ ಸಮಯದಲ್ಲಿ ಶ್ರೀ ಗುರುಶಾಂತೇಶ್ವರ ಮಹಾಸ್ವಾಮಿಗೆ ವಿಶೇಷ ಭುತ್ತಿಪೂಜೆ ,ರುದ್ರಾಭಿಷೇಕ ಮಹಾ ಮಂಗಳಾರತಿ ಜರುಗೀತು.

ಶ್ರೀ ಗುರುಶಾಂತೇಶ್ವರ ಸಂಸ್ಥಾನ ಮಠದಿಂದ ಪೇಟೆ ಮಾರ್ಗವಾಗಿ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ, ಪಿ ಜಿ ಹುಣಶ್ಯಾಳದ ನಿಜಗುಣ ದೇವರು, ಹುಕ್ಕೇರಿ ವಿರಕ್ತಮಠದ ಶಿವಬಸವ ಮಹಾಸ್ವಾಮಿಗಳು , ನಂದಿಕೋಲ ಹಾಗೂ ನೂರೆಂಟು ವೇದವಟುಗಳಿಂದ ರಥೊತ್ಸವ ಬಸ್ತವಾಡ ಗಲ್ಲಿಯ ಶ್ರೀ ಬಸವೇಶ್ವರ ದೇವಸ್ಥಾನದ ವರೆಗೆ ಅದ್ದೂರಿಯಾಗಿ ಜರುಗೀತು.

ರಥೊತ್ಸವದಲ್ಲಿ ವಿದ್ವಾನ್ ಸಂಪತ್ತಕುಮಾರ ಶಾಸ್ತ್ರೀಗಳು,ವಿದ್ವಾನ್ ಚಂದ್ರಶೇಖರ ಶಾಸ್ತ್ರೀ ಗಳು , ಮಹಾಂತೆಶ ಹಿರೇಮಠ, ಚನ್ನಪ್ಪಾ ಗಜಬರ, ಅಪ್ಪುಶ ತುಬಚಿ ,ಆನಂದ ಪಟ್ಟಣಶೆಟ್ಟಿ, ಸೋಮ ನಂದಿಕೋಲಮಠ,ಶಂಕರ ಪಟ್ಟಣಶೆಟ್ಟಿ, ಸೇರಿದಂತೆ ವೇದವಟುಗಳು ಉಪಸ್ಥಿತರಿದ್ದರು.

 ವರದಿ:-ಶಿವಾಜಿ ಎನ್ ಬಾಲೇಶಗೋಳ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!