Ad imageAd image

ವಿಶ್ವದಲ್ಲೇ ಅತ್ಯಧಿಕ ಜನಸಂಖ್ಯೆಯಲ್ಲಿ ಭಾರತ ನಂ.1 

Bharath Vaibhav
WhatsApp Group Join Now
Telegram Group Join Now

ನವದೆಹಲಿ: ದೇಶದ ಜನಸಂಖ್ಯೆ 144 ಕೋಟಿ ದಾಟಿದೆ. 142.5 ಕೋಟಿ ಜನಸಂಖ್ಯೆ ಹೊಂದಿರುವ ಚೀನಾ ಹಿಂದಿಕ್ಕುವ ಮೂಲಕ ಭಾರತ ವಿಶ್ವದಲ್ಲೇ ಅತ್ಯಧಿಕ ಜನಸಂಖ್ಯೆ ಹೊಂದಿರುವ ದೇಶವಾಗಿ ಹೊರಹೊಮ್ಮಿದೆ.

ಭಾರತದ ಜನಸಂಖ್ಯೆ 144 ಕೋಟಿ ದಾಟಿದ್ದು, ಇದರಲ್ಲಿ 0- 14 ವರ್ಷದವರ ಪ್ರಮಾಣ ಶೇಕಡ 24 ರಷ್ಟು, 10- 24 ವರ್ಷದವರ ಸಂಖ್ಯೆ ಶೇಕಡ 26ರಷ್ಟು ಇದೆ.

15 ರಿಂದ 64 ವರ್ಷ ವಯಸ್ಸಿನವರ ಸಂಖ್ಯೆ ಶೇಕಡ 68 ರಷ್ಟು, 65 ವರ್ಷ ಮೇಲ್ಪಟ್ಟವರ ಸಂಖ್ಯೆ ಶೇಕಡ 7ರಷ್ಟು ಇದೆ ಎಂದು ವಿಶ್ವ ಸಂಸ್ಥೆಯ ಜನಸಂಖ್ಯಾ ನಿಧಿ ವರದಿ ಅಂದಾಜಿಸಿದೆ.

ಮುಂದಿನ 77 ವರ್ಷವಿದ್ದಲ್ಲಿ ಭಾರತದ ಜನಸಂಖ್ಯೆಯ ಪ್ರಮಾಣ ದುಪಟ್ಟಾಗಲಿದೆ ಎಂದು ಯು.ಎನ್.ಎಫ್.ಪಿ.ಎ. ವರದಿ ತಿಳಿಸಿದೆ. 2011ರಲ್ಲಿ ಕೊನೆಯ ಬಾರಿಗೆ ಜನಗಣತಿ ನಡೆದಾಗ ದೇಶದಲ್ಲಿ 121 ಕೋಟಿ ಜನಸಂಖ್ಯೆ ಇತ್ತು.

ಪುರುಷರ ಜೀವಿತಾವಧಿ ಸರಾಸರಿ 71 ವರ್ಷ. ಮಹಿಳೆಯರ ಸರಾಸರಿ ಆಯಸ್ಸು 74 ವರ್ಷಗಳಾಗಿವೆ. ವರದಿಯ ಅನ್ವಯ 2006 ರಿಂದ 2023ರ ಅವಧಿಯಲ್ಲಿ ಭಾರತದಲ್ಲಿ ಬಾಲ್ಯ ವಿವಾಹ ಪ್ರಮಾಣ ಶೇಕಡ 23ರಷ್ಟು ಇತ್ತು.

WhatsApp Group Join Now
Telegram Group Join Now
Share This Article
error: Content is protected !!