Ad imageAd image

ಅಲಮಟ್ಟಿಯ ನರ್ಸರಿಯಲ್ಲಿ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು.

Bharath Vaibhav
WhatsApp Group Join Now
Telegram Group Join Now

ನಿಡಗುಂದಿ:-ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಣ್ಣ ನಾಗಶೆಟ್ಟಿ ಮಾತನಾಡಿ ಕಾರ್ಮಿಕ ಸಂಘಟನೆಗಳು ಪ್ರಮುಖವಾಗಿ ಆಚರಿಸುವ ಸಾರ್ವಜನಿಕ ಉತ್ಸವದ ದಿನವೇ ಕಾರ್ಮಿಕ ದಿನವಾಗಿದೆ.ಈ ದಿನದಂದು ಪ್ರಪಂಚದ ನೂರಾರು ರಾಷ್ಟ್ರಗಳಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಾಧನೆಗಳನ್ನು ಆಚರಿಸಲಾಗುತ್ತದೆ.

ಆರ್.ಎಂ.ಜಿ.ಎಫ್.ಅಧ್ಯಕ್ಷ ನೇತಾಜಿ ಗಾಂಧಿ ಮಾತನಾಡಿ, ಶ್ರಮಜೀವಿಗಳಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ ಸ್ವಾತಂತ್ರ್ಯ ಪೂರ್ವದ 1923ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಈ ದಿನವನ್ನು ಆಚರಿಸಲು ಆರಂಭಿಸಲಾಯಿತು.ಆದರೆ ಜಗತ್ತಿನಲ್ಲಿ 1886 ರಲ್ಲಿ ಆಮೇರಿಕೆಯಲ್ಲಿ ಆಚರಿಸಲಾಯಿತು.

ದಿನಕ್ಕೆ 8 ತಾಸು ಕೆಲಸದ ಅವಧಿಯನ್ನು ನಿಗದಿ ಮಾಡಬೇಕು ಎನ್ನುವ ಆಗ್ರಹದೊಂದಿಗೆ ಶುರುವಾದ ಚಳವಳಿಗೆ ಯಶಸ್ಸು ಸಿಕ್ಕಿತು. ಕಾರ್ಮಿಕರ ಕೊಡುಗೆ ಮತ್ತು ಅವರ ತ್ಯಾಗವನ್ನು ಈ ದಿನ ಸ್ಮರಿಸಲಾಗುತ್ತದೆ ಎಂದು ಹೇಳಿದರು.ಡೆಪ್ಯುಟಿ ಆರ್.ಎಫ್. ಓ. ಸತೀಶ್ ಗಲಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಮಿಕ ಮುಖಂಡರಾದ ವಿರೂಪಾಕ್ಷಿ ಮಾದರ, ಬಸವರಾಜ್ ಗುಡಿಮನಿ, ನಾಗಪ್ಪ ಎಚ್,ಭೀಮಸಿ ನಾಯಕ, ದ್ಯಾಮಣ್ಣ, ಸಾಯಿ,ಯಶೋಧಾಬಾಯಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ಅಶೋಕ ಕಾಳೆ ಸ್ವಾಗತಿಸಿದರು,ಬೀಟ್ ಫಾರೆಸ್ಟ್ ರ್ ಪ್ರವೀಣ್ ಹಚ್ಯಾಳ ಕಾರ್ಯಕ್ರಮ ನಿರೂಪಿಸಿದರು.ಈರಯ್ಯಾ ಹಳ್ಳಿಮಠ ವಂದಿಸಿದರು.

 

ವರದಿ : ಅಲಿ ಮಕಾನದಾರ

WhatsApp Group Join Now
Telegram Group Join Now
Share This Article
error: Content is protected !!