ಮುಂಬೈ: ಶುಕ್ರವಾರದಂದು ಆಪಲ್‌ನ ಐಫೋನ್ 17 ಸರಣಿಯ ಬಿಡುಗಡೆಯ ಸಂದರ್ಭದಲ್ಲಿ ಮುಂಬೈ , ದೆಹಲಿಯ ಆಪಲ್ ಸ್ಟೋರ್‌ಗಳ ಹೊರಗೆ ಭಾರಿ ಜನಸಂದಣಿ ಸೇರಿತ್ತು.
ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (BKC) ಕಟ್ಟಡದಲ್ಲಿ ಭಾರೀ ಜನದಟ್ಟಣೆ ಇದ್ದು, ಸರತಿ ಸಾಲಿನಲ್ಲಿ ಕಾಯುತ್ತಿದ್ದ ಕೆಲವು ಜನರ ನಡುವೆ ಜಗಳ ಹಾಗೂ ಹೊಡೆದಾಟ ಏರ್ಪಟ್ಟಿತ್ತು.
ಈ ಗದ್ದಲದಿಂದಾಗಿ ಸರದಿಯಲ್ಲಿ ನಿಂತಿದ್ದವರ ಸಮಯ ಅಸ್ತವ್ಯಸ್ತವಾಯಿತು. ತಕ್ಷಣ ಆಪಲ್ ಸ್ಟೋರ್‌ನಲ್ಲಿ ನಿಯೋಜಿಸಲಾಗಿದ್ದ ಕಾವಲುಗಾರರು ಮಧ್ಯಪ್ರವೇಶಿಸಿ ಕ್ರಮ ಕೈಗೊಂಡರು.
ಆದರೆ ವಾಗ್ವಾದಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಘಟನೆಯ ಹೊರತಾಗಿಯೂ, ಐಫೋನ್ 17 ಸರಣಿಯನ್ನು ಖರೀಸಿದ ಗ್ರಾಹಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಆಪಲ್ ಬಿಡುಗಡೆ ಮಾಡಿದ ಐಫೋನ್ 17 ಸರಣಿಯ ಬೆಲೆ 82,900 ರೂ. ಯಿಂದ 2,29,900 ರೂ. ವರೆಗೆ ಇದ್ದು, ಸೆಪ್ಟೆಂಬರ್ 19 ರಂದು ಭಾರತದಲ್ಲಿ ಮುಂಗಡ ಬುಕ್ ಮಾಡಿದ ಮತ್ತು ವಾಕ್-ಇನ್ ಖರೀದಿದಾರರಿಗೆ ಮಾರಾಟಕ್ಕೆ ಬಂದಿದೆ.
ಮುಂಬೈನ ಮೊದಲ ಗ್ರಾಹಕರಲ್ಲಿ ಒಬ್ಬರಾದ ಅಮನ್ ಮೆಮನ್ ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ನನ್ನ ಕುಟುಂಬ ಮತ್ತು ನನಗಾಗಿ ಮೂರು ಐಫೋನ್‌ಗಳನ್ನು ಖರೀದಿಸಿದ್ದೇನೆ.
ಆಪಲ್ ಈ ವರ್ಷ ಉತ್ತಮ ವಿನ್ಯಾಸವನ್ನು ಬಿಡುಗಡೆ ಮಾಡಿದೆ ಮತ್ತು ಈ ವರ್ಷ ಫೋನ್‌ನ ಬಣ್ಣವೂ ತುಂಬಾ ವಿಭಿನ್ನವಾಗಿದೆ. ಇದು ನನ್ನ ನೆಚ್ಚಿನ ಬಣ್ಣ, ಅದಕ್ಕಾಗಿಯೇ ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದು ತಿಳಿಸಿದ್ದಾರೆ.




