Ad imageAd image
- Advertisement -  - Advertisement -  - Advertisement - 

ಜಿಲ್ಲೆಯಾದ್ಯಂತ ಅಭೂತಪೂರ್ವ ಜನ ಬೆಂಬಲ ಸಿಕ್ಕಿದೆ: ಜಗದೀಶ್ ಶೆಟ್ಟರ್

Bharath Vaibhav
ಜಿಲ್ಲೆಯಾದ್ಯಂತ ಅಭೂತಪೂರ್ವ ಜನ ಬೆಂಬಲ ಸಿಕ್ಕಿದೆ: ಜಗದೀಶ್ ಶೆಟ್ಟರ್
WhatsApp Group Join Now
Telegram Group Join Now

ಬೆಳಗಾವಿ: –ಕಳೆದ ಒಂದು ತಿಂಗಳಿನಿಂದ ಜಿಲ್ಲೆಯಲ್ಲಿ ಪ್ರಚಾರ ಮಾಡಿದ್ದೇವೆ. ಇಂದು ಸಾಯಂಕಾಲ 5 ಗಂಟೆ ಕೊನೆಯ ಪ್ರಚಾರಕ್ಕೆ ಅವಕಾಶ ಇದೆ. ಮಾರ್ಚ ತಿಂಗಳಲ್ಲಿ ಬೆಳಗಾವಿಗೆ ಬಂದಾಗ ದೊಡ್ಡ ಪ್ರಮಾಣದಲ್ಲಿ 10 ಸಾವಿರಕ್ಕೂ ಹೆಚ್ಚು ಜನ ಸೇರಿ ರ್ಯಾಲಿ ಮಾಡಿ ಪ್ರೀತಿ ತೊರಿಸಿದರು. ನಾಮಪತ್ರ ಸಲ್ಲಿಸುವ ವೇಳೆ 50 ಸಾವಿರ ಜನ ಸೇರಿ ಬೆಂಬಲ ನೀಡಿದರು. ಪ್ರಧಾನಿ ಮೋದಿ ಅವರು ಬಂದು ಸಮಾವೇಶ ಮಾಡಿದಾಗೂ 1 ಲಕ್ಷ ಜನ ಸೇರಿದರು. ಇದನ್ನು ನೋಡಿದರೆ ದಿನಗಳು ಕಳೆದಂತೆ ಜನ ಹೆಚ್ಚು ಹೆಚ್ಚು ಬೆಂಬಲ ನೀಡಿತ್ತಿದ್ದಾರೆ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ತಿಳಿಸಿದರು.‌

ನಗರದ ಬಿಜೆಪಿ ಮಾದ್ಯಮ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಳಗಾವಿ ಲೋಕಸಭಾ ವ್ಯಾಪ್ತಿಯ ಎಲ್ಲಾ ವಿಧಾನ ಸಭಾ ಕ್ಷೇತ್ರದಲ್ಲಿ ರೋಡ್ ಶೋ, ಸಭೆ ಸಮಾರಂಭ ನಡೆಸಿದ್ದಾಗ ಜನ ಬೆಂಬಲ ನೀಡಿದ್ದಾರೆ. ಗೋಕಾಕ್ ಹಾಗೂ ಅರಭಾವಿ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಸಭೆ ಮಾಡಿ ಜನ ಬೆಂಬಲ ನೀಡಿದ್ದಾರೆ ಎಂದು ತಿಳಿಸಿದರು.

ಬೆಳಗಾವಿ ಗ್ರಾಮೀಣ ಮತ ಕ್ಷೇತ್ರ, ಉತ್ತರ ಮತ ಕ್ಷೇತ್ರ ಹಾಗೂ ದಕ್ಷಿಣ ಮತ ಕ್ಷೇತ್ರದಲ್ಲಿ ಕೂಡಾ ಪಾದಯಾತ್ರೆ, ಸಮಾವೇಶ ಮಾಡಿದಾಗ ಜನ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ನಾನು ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ಮೇಲೆ ಜಿಲ್ಲೆಯ ಎಲ್ಲಾ ನಾಯಕರು ಸಕ್ರಿಯವಾಗಿ ಭಾಗಿವಹಿಸಿ ಮತದಾರರಿಗೆ ಭೇಟಿಯಾಗಿ ವ್ಯವಸ್ಥಿತವಾಗಿ ಪ್ರಚಾರ ಮಾಡುತ್ತಿದ್ದಾರೆ. ಶಾಸಕರು, ಮಾಜಿ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ತಾಲೂಕು ಮಟ್ಟದ ನಾಯಕರು ಸಕ್ರಿಯವಾಗಿ ಭಾಗವಹಿಸಿ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದ್ದಾರೆ.‌

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಪ್ರತಿ ಗ್ರಾಮದಲ್ಲಿ ಮೋದಿ ಮತ್ತೆ ಮೂರನೆ ಸಲ ಪ್ರಧಾನಿ ಆಗಬೇಕು ಎಂದು ಆಸೆ ಇದೆ. ಚಾಯ್ ಪೇ ಚರ್ಚಾ ಮಾಡುವ ವೇಳೆ ಅನಕ್ಷರಸ್ಥ ಚಿಂದಿ ಆರಿಸುವ ಮಹಿಳೆ ಕುಡಾ ಮೋದಿಗೆ ವೋಟ್ ಹಾಕುತ್ತೇವೆ ಎಂದು ಹೇಳುತ್ತಾರೆ. ಮೋದಿ ಪ್ರಭಾವ ಎಲ್ಲಾ ಕಡೆ ಇದೆ ಎಂದು ತಿಳಿಸಿದರು. ‌

ಸುರೇಶ್ ಅಂಗಡಿ ಅವರು ನಾಲ್ಕು ಸಲಾ ಮಾಡಿದ ಕೆಲಸ ಜನ ಇನ್ನು ನೇನೆಪಿಸುತ್ತಾರೆ. ವಿಮಾನ ನಿಲ್ದಾಣ ಅಭಿವೃದ್ಧಿ, ರೇಲ್ವೆ ನಿಲ್ದಾಣ ನಿರ್ಮಾಣ ಅಭಿವೃದ್ಧಿ ಆಗಿದೆ.‌ ಬೆಳಗಾವಿ ಕಿತ್ತೂರು, ಧಾರವಾಡ ರೈಲು ಮಾರ್ಗಕ್ಕೆ ಭೂ ಸ್ವಾಧೀನ ನಡೆಯುತ್ತಿದೆ.‌ ಸುರೇಶ್ ಅಂಗಡಿ ಅವರು ಸಂಸದಾಗಿದ್ದಾಗ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ 10 ಕೋಟಿ ನೀಡಿ ಅಭಿವೃದ್ಧಿ ಮಾಡಿದ್ದಾರೆ. ಮಂಗಳ ಅಂಗಡಿಯವರು 310 ಕೋಟಿ ರೂ ವೆಚ್ಚದಲ್ಲಿ ಸಾಂಬ್ರಾ ವಿಮಾನ ನಿಲ್ದಾಣದ ಟರ್ಮಿನಲ್ ಎರಡರ ಕಾಮಗಾರಿ ನಡೆಯುತ್ತಿದೆ‌. ಇದರಿಂದ 10-15 ನಗರಗಳಿಗೆ ಸಂಪರ್ಕಕ ಆಗಲಿದೆ.‌ ಬರವು ದಿನಗಳಲ್ಲಿ ಬೆಳಗಾವಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಗಲಿದೆ ಎಂದರು.

ಸಿಎಂ, ಇದ್ದಾಗ ಸಚಿವರಾಗಿದ್ದಾಗ ಬೆಳಗಾವಿ ಅಭಿವೃದ್ಧಿಗೆ ಶ್ರಮಿಸಿಲಾಗಿದೆ‌. ಬೆಳಗಾವಿ ಸುವರ್ಣ ಸೌಧ ಯಡಿಯೂರಪ್ಪ ಸಿಎಂ ಇದ್ದಾಗ ನಾನು ಸ್ಪೀಕರ್ ಇದ್ದಾಗ ಸುರ್ವಣಸೌಧ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಯಿತು. ನಾನು ಸಿಎಂ ಆದಗ ಸರ್ಣಸೌಧ ಉದ್ಘಾಟನೆ ಮಾಡಲಾಯಿತು. ಬಳಿಕ ಜೆಡಿಎಸ್ ಬಿಜೆಪಿ ಸಮ್ಮಿಶ್ರಣ ಸರ್ಕಾರ ಇದ್ದಾಗ ಬೆಳಗಾವಿಯಲ್ಲಿ ಮೊದಲ ಅಧಿವೇಶನ ಮಾಡಲಾಯಿತು. ಬಿಜೆಪಿ ಆಡಳಿತದಲ್ಲಿ ಬೆಳಗಾವಿ ಯಲ್ಲಿ ಮೊದಲ ಸಾಹಿತ್ಯ ಅಧಿವೇಶನ ನಡೆಸಲಾಯಿತು. ಸುರೇಶ್ ಅಂಗಡಿ, ಮಂಗಲ ಅಂಗಡಿ ಮಾಡಿದ ಅಭಿವೃದ್ಧಿ ಕಾರ್ಯಗಳು ಶ್ರೀರಕ್ಷೆಯಾಗಿದೆ. ಸ್ಮಾರ್ಟ್ ಸಿಟಿ ಆಗಿ ಬೆಳಗಾವಿ ಆಯ್ಕೆ ಆಗಲು ನಾನು ಸಿಎಂ ಇದ್ದಾಗ 100 ಕೋಟಿ ಅನುದಾನ ಕೊಟ್ಟಿದ್ದು ಸಹಕಾರಿ ಆಯ್ತು ಎಂದರು.

ಕೈಗಾರಿಕೋದ್ಯಮಿ ಈ ಭಾಗದಲ್ಲಿ ಅಭಿವೃದ್ಧಿ ಮಾಡಲು ಅವಕಾಶ ಇದೆ.‌ ಸಾಂಬ್ರಾ ವಿಮಾನ ನಿಲ್ದಾಣ ಬೆಳವಣಿಗೆ ಆಗಲು ಹೊಸ ಕೈಗಾರಿಕೆಗಳು ಬರುವ ಸಾಧ್ಯತೆ ಇದೆ. ಖನಗಾವ ಕೈಗಾರಿಕಾ ಪ್ರದೇಶದಲ್ಲಿ ಭೂ ಸ್ವಾದಿನ ಮಾಡಿಕೊಂಡು ಇಡಲಾಗಿದೆ. ಆದರೆ ಆ ಪ್ರದೇಶ ಯಾವುದೇ ಅಭಿವೃದ್ಧಿ ಆಗಿಲ್ಲ. ನಾನು ಕೈಗಾರಿಕಾ ಸಚಿವರಾಗಿದ್ದಾಗ ಮೂಲಭೂತ ಸೌಕರ್ಯಕ್ಕಾ 100 ಕೋಟಿ ನೀಡಿದ್ದೇನೆ.

ಮಹಾತ್ಮ ಗಾಂಧಿ ಬೆಳಗಾವಿಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ಮಾಡಿದ್ರು. ಅದಕ್ಕೆ 100 ವರ್ಷ ಆಯ್ತು, ಯಾಕೇ ಸಿದ್ದರಾಮಯ್ಯ ಸರ್ಕಾರ ನೂರು ವರ್ಷದ ಆಚರಣೆ ಮಾಡಲಿಲ್ಲ. ಮೋದಿ ಸರ್ಕಾರದಲ್ಲಿ ಮಹದಾಯಿ ಯೋಜನೆ ತೀರ್ಪು ನಮ್ಮ ಅವಧಿಯಲ್ಲಿ ಬಂದಿದೆ. 13 ನಮಗೆ ಟಿಎಂಸಿ ನೀರು ಹಂಚಿಕೆ ಆಗಿದೆ. ಪರಿಸರ ಇಲಾಖೆ ಅನುಮತಿ ಪಡೆದು ಅನುಷ್ಠಾನ ಕೆಲಸವನ್ನು ಮಾಡುತ್ತೇವೆ. ನಾನು ಸಂಸದನಾಗಿ ಗೆದ್ದ ಬಳಿಕ ಬೆಳಗಾವಿ ಅಭಿವೃದ್ಧಿಗೆ ಕೆಲಸವನ್ನು ಮಾಡುತ್ತೇನೆ.

ಬೆಳಗಾವಿಯಲ್ಲಿ ಕೈಗಾರಿಕೋದ್ಯಮಿಗಳ ಬೆಳವಣಿಗೆಗೆ ಶ್ರಮಿಸುವೆ. ಐಟಿ ಉದ್ಯಮವನ್ನ ಬೆಳಗಾವಿಗೆ ತೆಗೆದುಕೊಂಡು ಬರ್ತಿನಿ. ಬೆಳಗಾವಿ ಎರಡನೇ ರಾಜಧಾನಿ ಮಾಡಲು ಶ್ರಮಿಸುತ್ತೇನೆ. ಸವದತ್ತಿ ರೇಣುಕಾ ಯಲ್ಲಮ್ಮನ ದೇವಸ್ಥಾನ ಅಭಿವೃದ್ಧಿ ಮಾಡ್ತಿವಿ. ಸಂಸದೆ ಮಂಗಲ್ ಅಂಗಡಿ 13 ಕೋಟಿ ಅನುದಾನ ತಂದಿದ್ದಾರೆ. ಸವದತ್ತಿಗೆ ರೈಲ್ವೆ ಯೋಜನೆ ಸಂಪರ್ಕ ಕಲ್ಪಿಸುವ ಕೆಲಸವನ್ನ ಮಾಡ್ತಿವಿ. ರಾಮದುರ್ಗ ತಾಲ್ಲೂಕಿನಲ್ಲಿ ಇರೋ ಶಬರಿ ಕೊಳ್ಳದ ಅಭಿವೃದ್ಧಿ ಮಾಡ್ತಿವಿ. ಬೈಲಹೊಂಗಲದಲ್ಲಿ ರಾಣಿ ಚೆನ್ನಮ್ಮ ಸ್ಮಾರಕವನ್ನ ರಾಷ್ಟ್ರೀಯ ಸ್ಮಾರಕ ಮಾಡಲು ಮಾಡ್ತಿವಿ. ಗೋಕಾಕ ಫಾಲ್ಸ್ ಇನ್ನಷ್ಟು ಅಭಿವೃದ್ಧಿ ಮಾಡ್ತಿನಿ ಎಂದರು

ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಆಗಲಿದೆ. ಮತ್ತೊಮ್ಮೆ ನರೇಂದ್ರ ಪ್ರಧಾನಮಂತ್ರಿ ಅಗಲಿದ್ದಾರೆ. ಅತ್ಯಂತ ಹೆಚ್ಚಿನ ಮತಗಳಿಂದ ಗೆದ್ದು ಬರುತ್ತೇನೆ. ಬ್ಯಾಲೆಟ್ ಪೇಪರ್ ನಲ್ಲಿ ಕ್ರಮ ಸಂಖ್ಯೆ 2 ಕ್ಕೆ ಮತಹಾಕುವಂತೆ ಜಗದೀಶ್ ಶೆಟ್ಟರ್ ಮನವಿ ಮಾಡಿದರು.

ಕಾಂಗ್ರೆಸ್ ನವರು ಸೋಲಿನ ಭೀತಿ ಕಾಡುತ್ತಿದೆ  ಬೆಳಗಾವಿ ದಕ್ಷಿಣ ಮತ ಕ್ಷೇತ್ರ, ಗೋಕಾಕನಲ್ಲಿ ಹಣ ಹಂಚುವ ಕೆಲಸ ಮಾಡುವಾಗ ಸಿಕ್ಕು ಬಿದ್ದಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹಣ ಹಂಚುತ್ತಿರುವುದು ಗೊತ್ತಾಗಿದೆ.

ಶಹಾಪುರ ಪೊಲೀಸ್ ಠಾಣೆ ಹಂಚುವವರನ್ನು ಹಿಡುದುಕೊಡಲಾಗಿದೆ‌.‌ ಆದರೆ ಹಿಡುದುಕೊಟ್ಟವರ ಮೇಲೆ ಕೇಸ್ ಯತ್ನ ಆಗಿದೆ. ಇದು ಲೋಕಸಭೆ ಚುನಾವಣೆ ಆಗಿದೆ‌‌. ಜನರು ಹಣವನ್ನು ತೆಗೆದುಕೊಂಡು ಬಿಜೆಪಿಗೆ ಮತಹಾಕಲಿದ್ದಾರೆ‌.
ಕಾಂಗ್ರೆಸನವರು ಅಧಿಕಾರದ ದುರುಪಯೋಗ ಮಾಡಿಕೊಳ್ಳುತ್ತಿದೆ. ನಾನೇ ಪೊಲೀಸ್ ಕಮೀಷನರ್ ಗೆ ಕರೆ ಮಾತನಾಡಿದೆ ಎಂದರು.‌

ಸಿಎಂ ಸಿದ್ದರಾಮಯ್ಯ ಈ ಚುನಾವಣೆ ಎರಡನೇ ಸ್ವಾತಂತ್ರ್ಯ ಹೋರಾಟ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರೇ ಏನು ಹೇಳ್ತಾರೆ. ಬ್ರಿಟಿಷರ ವಿರುದ್ಧ ಹೋರಾಟವೇ ಸ್ವಾತಂತ್ರ್ಯ ಹೋರಾಟ. ಕಾಂಗ್ರೆಸ್ ನಾಯಕರ ಬಳಿ ಮೋದಿ ಬಗ್ಗೆ ಮಾತನಾಡಲು ಏನು ವಿಷಯ ಇಲ್ಲ. ಅದಕ್ಕಾಗಿ ಹೀಗೆ ಮೋದಿ ಬಗ್ಗೆ ಆರೋಪ ಮಾಡುತ್ತಿದ್ದಾರೆ ಎಂದರು.‌

ಈ ವೇಳೆ ವೇಳೆ ಸಂಸದೆ ಮಂಗಳಾ ಅಂಗಡಿ, ಮಾಜಿ ಶಾಸಕರಾದ ಅನಿಲ ಬೆನಕೆ, ಸಂಜಯ ಪಾಟೀಲ್, ಡಾ. ವಿಐ ಪಾಟೀಲ್, ಮಹಾನಗರ ಅಧ್ಯಕ್ಷೆ ಗೀತಾ ಸುತಾರ, ಗ್ರಾಮಿಣ ಜಿಲ್ಲಾಧ್ಯಕ್ಷ ಶುಭಾಸ ಪಾಟಿಲ್, ವಕ್ತಾರರಾದ ಎಂಬಿ ಜಿರಳಿ, ರಾಜೇಂದ್ರ ಹರಕುಣಿ, ಉಜ್ವಲಾ ಬಡವಣಾಚೆ, ಹನಮಂತ ಕೊಂಗಾಲಿ, ಶರತ ಹೆಗಡೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವರದಿ ಪ್ರತೀಕ ಚಿಟಗಿ

WhatsApp Group Join Now
Telegram Group Join Now
Share This Article
error: Content is protected !!