Ad imageAd image
- Advertisement -  - Advertisement -  - Advertisement - 

ಭರತೇಶ್ ಕಾಲೇಜಿನಲ್ಲಿ ಕಾಂಗ್ರೆಸ್ ಪರ ಮತ ಯಾಚನೆ ಎಂಜಿನಿಯರಿಂಗ್ ಪದವೀಧರ ಯುವಕ ಮೃಣಾಲ್ ಬೆಂಬಲಿಸಿ – ಲಕ್ಷ್ಮೀ ಹೆಬ್ಬಾಳಕರ್

Bharath Vaibhav
ಭರತೇಶ್ ಕಾಲೇಜಿನಲ್ಲಿ ಕಾಂಗ್ರೆಸ್ ಪರ ಮತ ಯಾಚನೆ ಎಂಜಿನಿಯರಿಂಗ್ ಪದವೀಧರ ಯುವಕ ಮೃಣಾಲ್ ಬೆಂಬಲಿಸಿ – ಲಕ್ಷ್ಮೀ ಹೆಬ್ಬಾಳಕರ್
WhatsApp Group Join Now
Telegram Group Join Now

ಬೆಳಗಾವಿ: ಬೆಳಗಾವಿಯ ಭರತೇಶ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಲೋಕಸಭೆ ಚುನಾವಣೆಯ ಪ್ರಚಾರ ಕೈಗೊಂಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮತ್ತು ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್, ಯುವಕರ ಪ್ರತಿನಿಧಿಯಾಗಿ ಲೋಕಸಭೆಯಲ್ಲಿ ಧ್ವನಿ ಎತ್ತಲು ಅವಕಾಶ ಮಾಡಿಕೊಂಡುವಂತೆ ಕೋರಿದರು.

ಇದು ಬೆಳಗಾವಿಯ, ಬೆಳಗಾವಿ ಯುವಕರ ಭವಿಷ್ಯದ ಪ್ರಶ್ನೆ, ಎಲ್ಲರೂ ಯೋಚನೆ ಮಾಡುವ ಸಮಯ. ಹೊರಗಿನವರ ಕೈಗೆ ಬೆಳಗಾವಿಯನ್ನು ಕೊಡುವುದು ಬೇಡ. ಹಿಂದಿನಿಂದಲೂ ಬೆಳಗಾವಿಗೆ ಅನ್ಯಾಯ ಮಾಡುತ್ತ ಬಂದವರಿಗೆ ಹೇಗೆ ಅವಕಾಶ ಕೊಡಲು ಸಾಧ್ಯ? ನಮ್ಮ ಜಿಲ್ಲೆಯ ಸ್ವಾಭಿಮಾನ ಉಳಿಸಿಕೊಳ್ಳೋಣ. ಎಲ್ಲರೂ ಸಹಕಾರ ನೀಡಿ ಎಂದು ಲಕ್ಷ್ಮೀ ಹೆಬ್ಬಾಳಕರ್ ಮನವಿ ಮಾಡಿದರು.

ಮೃಣಾಲ ಎಂಜಿನಿಯರಿಂಗ್ ಪದವೀಧರನಿದ್ದು, ಜಿಲ್ಲೆಯ ಅಭಿವೃದ್ದಿಗೆ ಹಲವು ಕನಸು ಕಟ್ಟಿಕೊಂಡಿದ್ದಾನೆ. ಇಲ್ಲಿಯ ಸಮಸ್ಯೆಗಳನ್ನು ತಿಳಿದಿದ್ದಾನೆ. ನಿಮ್ಮೆಲ್ಲರ ಜೊತೆಯಾಗಿ ಕೆಲಸ ಮಾಡಲಿದ್ದಾನೆ. ವಿದ್ಯಾವಂತರಾಗಿರುವ ನಿಮಗೆ ಹೆಚ್ಚಿಗೆ ಹೇಳಬೇಕಾದ ಅವಶ್ಯಕತೆ ಇಲ್ಲ. ನೀವೆಲ್ಲ ಖಂಡಿತ ಮೃಣಾಲ ಹೆಬ್ಬಾಳಕರ್ ಅವರ ಚಿಹ್ನೆಯಾಗಿರುವ ಹಸ್ತಕ್ಕೆ ಮತ ನೀಡುತ್ತೀರಿ ಎನ್ನುವ ವಿಶ್ವಾಸವಿದೆ ಎಂದು ಅವರು ಹೇಳಿದರು.
ಈ ಸಮಯದಲ್ಲಿ ವಿನೋದ್ ದೊಡ್ಡಣ್ಣವರ್, ಶ್ರೀಪಾಲ‌ ಖೆಮಲಾಪುರೆ, ಡಾ.ಸಾವಿತ್ರಿ ದೊಡ್ಡಣ್ಣವರ್, ಶರದ್ ಪಾಟೀಲ, ವಸಂತ ಕೊಡಚವಾಡ, ಅಭಿನಂದನ‌ ಕೊಚೇರಿ, ಸಂಜೀವ್ ದೊಡ್ಡಣ್ಣವರ್ ಮೊದಲಾದವರು ಉಪಸ್ಥಿತರಿದ್ದರು.

ವರದಿ :ಪ್ರತೀಕ ಚಿಟಗಿ

WhatsApp Group Join Now
Telegram Group Join Now
Share This Article
error: Content is protected !!