Ad imageAd image

ಲೋಕಸಭಾ ಚುನಾವಣೆ ಭಾರತೀಯ ಜನತಾ ಪಾರ್ಟಿ ಹುಕ್ಕೇರಿ ಮಂಡಳಿ ಕಾರ್ಯಕರ್ತರ ಸಭೆ

Bharath Vaibhav
WhatsApp Group Join Now
Telegram Group Join Now

ಸಂಕೇಶ್ವರ:–  ಚಿಕ್ಕೋಡಿ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಸಂಕೇಶ್ವರ ನೇಸರಗಿ ಗಾರ್ಡನ್ ಪಕ್ಕದಲ್ಲಿ ಭರ್ಜರಿ ಪ್ರಚಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಹಾಗೂ ಚಿಕ್ಕೋಡಿ ಲೋಕಸಭಾ ಅಭ್ಯರ್ಥಿಯಾದ ಅಣ್ಣಾ ಸಾಹೇಬ್ ಜೊಲ್ಲೆ ಪರ ಬಸಣ್ಣಗೌಡ ಯತ್ನಾಳ್ ಅವರು ಮಾತಿನಲ್ಲಿ ಮತದಾರರ ಮನ ಸೆಳೆದರು.

ಹುಕ್ಕೇರಿ ಮತ ಕ್ಷೇತ್ರದ ಶಾಸಕರಾದ ಶ್ರೀ ನಿಖಿಲ್ ಉಮೇಶ್ ಕತ್ತಿಯವರು ಮಾತನಾಡಿದರು ಈ ಪ್ರಚಾರ ಸಮಯದಲ್ಲಿ ತಮ್ಮ ಚಿಕ್ಕಪ್ಪನಿಗೆ ರಮೇಶ್ ಕತ್ತಿ ಅವರಿಗೆ ಚುನಾವಣೆ ಸ್ಪರ್ಧಿಸಲು ಟಿಕೆಟ್ ನೀಡಿಲವೆಂದು ನಮ್ಮೆಲ್ಲರಿಗೂ ಬಹಳ ನೋವಾಗಿದೆ ಆದರೂ ಕೂಡಾ ಯಾವುದೇ ಬೇರೆ ಪಕ್ಷಕ್ಕೆ ಹೋಗುವಂತ ಸನ್ನಿವೇಶವಿಲ್ಲ ಯಾಕೆಂದರೆ ನಮ್ಮ ದೇಶಕ್ಕಾಗಿ ಒಳ್ಳೆ ರೀತಿಯ ದುಡಿಯುವ ಪಕ್ಷವೆಂದರೆ ಭಾರತೀಯ ಜನತಾ ಪಕ್ಷ ಬರುವ ದಿನಗಳಲ್ಲಿ ನಮ್ಮ ಚಿಕ್ಕಪ್ಪರಾದ ರಮೇಶ್ ಕತ್ತಿ ಅವರಿಗೆ ಒಳ್ಳೆಯ ಸ್ಥಾನ ಮಾನ ನೀಡುತ್ತದೆ ಎಂದು ಪಕ್ಷದ ಮೇಲೆ ನಮ್ಮಗೆ ವಿಶ್ವಾಸವಿದೆ ಎಂದು ಹೇಳಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಪಾರವಾದ ಕೊಡುಗೆ ನೀಡಿರುವುದು ಇವು ಎಲ್ಲವನ್ನು ಮತದಾರರಿಗೆ ತಿಳಿಸಿ ಎಂದು ಪಕ್ಷದ ಕಾರ್ಯಕರ್ತರಿಗೆ ಹೇಳಿದರು.ಈ ಸಂದರ್ಭದಲ್ಲಿ ಸತೀಶ್ ಅಪ್ಪಾಜಿ, ರಾಜೇಶ್ ನೆರ್ಲಿ, ರಾಜೇಂದ್ರ ಪಾಟೀಲ್, ಗಜಾನಂದ ಕೊಳ್ಳಿ, ಸತ್ಯಪ್ಪಾ ನಾಯಿಕ, ಹಾಗೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ:-ಶಿವಾಜಿ ಎನ್ ಬಾಲೇಶಗೋಳ

WhatsApp Group Join Now
Telegram Group Join Now
Share This Article
error: Content is protected !!