Ad imageAd image

ಲೋಕಸಭಾ ಚುನಾವಣೆಯ ಬಾಗಲಕೋಟೆ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಪರ ಪ್ರಚಾರ ಮಾಡಿದ ಸಚಿವ ಸತೀಶ ಜಾರಕಿಹೊಳಿ

Bharath Vaibhav
WhatsApp Group Join Now
Telegram Group Join Now

ಬಾಗಲಕೋಟೆ :-ಲೋಕಸಭಾ ಚುನಾವಣೆಗೆ ಕೋಟೆ ನಗರಿ ಜಿದ್ದಾಜಿದ್ದಿ ಕಣವಾಗಿ ಮಾರ್ಪಟ್ಟಿದ್ದು ಬಾಗಲಕೋಟೆ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಅಬ್ಬರದ ಪ್ರಚಾರ ಮಾಡುತ್ತಿದ್ದು, ಬಾಗಲಕೋಟೆ ಹೊಸ ಅಧ್ಯಾಯಕ್ಕೆ ನನಗೆ ಆಶೀರ್ವದಿಸಿರಿ ಎಂದು ಪ್ರಚಾರ ಆರಂಭಿಸಿರುವ ಯುವನಾಯಕಿಯ ಪ್ರಚಾರಕ್ಕೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ನಿನ್ನೆ ಬಾಗಲಕೋಟೆಗೆ ಆಗಮಿಸಿ ಕೈ ಅಭ್ಯರ್ಥಿ ಸಂಯುಕ್ತ ಪಾಟೀಲ ಪರ ಮತ ಯಾಚನೆ ಮಾಡಿದರು.

ಈ ಜಿಲ್ಲೆಯ ನಮ್ಮ ಸಹೋದರಿ ಸಂಯುಕ್ತ ಪಾಟೀಲ ನಿಮ್ಮ ಮನೆ ಮಗಳನ್ನು ನೀವು ಈ ಬಾರಿ ಆರಿಸಿ ತರಬೇಕು ಆರಿಸಿ ತಂದರೆ ಸಂಸತ್ತಿನಲ್ಲಿ ನಿಮ್ಮ ಧ್ವನಿಯಾಗಿ ನಿಲ್ಲಲಿದ್ದಾಳೆ ಬಾಗಲಕೋಟೆ ಹೊಸ ಅಧ್ಯಾಯಕ್ಕೆ ಮತಕ್ಷೇತ್ರದ ನೀವು ಆಶೀರ್ವಾದ ಮಾಡಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ.ಶಿವಾನಂದ.ಪಾಟೀಲ ಶಾಸಕ ಜೆ ಟಿ ಪಾಟೀಲ, ಅಜಯ್ ಕುಮಾರ್ ಸರನಾಯಕ,, ಎಚ್. ವಾಯ್. ಮೇಟಿ,ಕಾಂಗ್ರೆಸ್ ನ ಜಿಲ್ಲಾಧ್ಯಕ್ಷ ಎಸ್ ಜಿ ನಂಜಯ್ಯನಮಠ,ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ರಕ್ಷಿತಾ ಭರತಕುಮಾರ ಈಟಿ, ಬಾಯಕ್ಕ ಮೇಟಿ ಸೇರಿದಂತೆ ಕಾಂಗ್ರೆಸ್ ನ ಇನ್ನೂ ಅನೇಕ ಪದಾಧಿಕಾರಿಗಳು ಮುಖಂಡರು ಕಾರ್ಯಕರ್ತರು ಉಪಸ್ಥಿರಿದ್ದರು.

ವರದಿ:-ರಾಜೇಶ್. ಎಸ್. ದೇಸಾಯಿ 

WhatsApp Group Join Now
Telegram Group Join Now
Share This Article
error: Content is protected !!