Ad imageAd image

ಸರ್ಕಾರ ಬಿಳಿಸಲು ಯಾರಿಂದಲೂ ಸಾಧ್ಯವಿಲ್ಲ : ಸಚಿವ ಸತೀಶ್ ಜಾರಕಿಹೊಳಿ

Bharath Vaibhav
satish jarkiholi
WhatsApp Group Join Now
Telegram Group Join Now

ಬೆಂಗಳೂರು: ಅಭಿವೃದ್ಧಿ ವಿಚಾರವಾಗಿ ಶಾಸಕರಲ್ಲಿ ಅಸಮಾಧಾನ ಇರೋದು ನಿಜ. ಆದ್ರೇ ಕಾಂಗ್ರೆಸ್ ಸರ್ಕಾರ ಬೀಳುತ್ತೆ ಅನ್ನೋದು ಸುಳ್ಳಿ. ಇನ್ನೂ 4 ವರ್ಷ ಕಾಂಗ್ರೆಸ್ ಸರ್ಕಾರ ಇರುತ್ತೆ. ಬೀಳೊ ಬೀಳಿಸೋ ಮಾತೇ ಇಲ್ಲ ಎಂಬುದಾಗಿ ಪಿ ಡಬ್ಲ್ಯೂ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಕುರಿತಾಗಿ ನಮ್ಮ ನಮ್ಮಲ್ಲೇ ಜಗಳಿದ್ದರು ಅದು ಪಾರ್ಟಯಲ್ಲಿ ಇದೆ. ಮಹಾರಾಷ್ಟ್ರಕ್ಕೆ ನಮ್ಮ ರಾಜ್ಯವನ್ನು ಹೋಲಿಕೆ ಮಾಡುವುದು ಬೇಡ. ಏಕನಾಥ ಶಿಂಧೆಗೆ ಮಾತನಾಡುವ ಸ್ವಾತಂತ್ರ್ಯವಿದೆ. ಮಾತನಾಡುತ್ತಾರೆ ಎಂಬುದಾಗಿ ತಿಳಿಸಿದರು.

ಭಿನ್ನಮತ ಇದೆ ಅಂತ ಸರ್ಕಾರ ಬೀಳಿಸೋದಕ್ಕೆ ಆಗುತ್ತಾ ಎಂದು ಪ್ರಶ್ನಿಸಿದಂತ ಅವರು, ಶಾಸಕರಲ್ಲಿ ಅಸಮಾಧಾನ ಇದೆ. ಅಭಿವೃದ್ಧಿ, ವರ್ಗಾವಣೆ ಬಗ್ಗೆ ಸಮಸ್ಯೆ ಇದೆ. ಅದಕ್ಕೆ ಸರ್ಕಾರ ಬೀಳಲ್ಲ. ಇದು ಎಲ್ಲಾ ಸರ್ಕಾರದಲ್ಲಿ ಇದ್ದೇ ಇರುತ್ತೆ. ಯಾವುದೇ ಕಾರಣಕ್ಕೂ ಅವಧೀಗೂ ಮುನ್ನ ಕಾಂಗ್ರೆಸ್ ಸರ್ಕಾರ ಬೀಳುವುದಿಲ್ಲ. ಬೀಳಿಸೋದಕ್ಕೆ ಪ್ರಯತ್ನ ಪಟ್ಟರು ಅದು ಸಾಧ್ಯನೂ ಆಗಲ್ಲ ಎಂದರು.

WhatsApp Group Join Now
Telegram Group Join Now
Share This Article
error: Content is protected !!