Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹಾಲಿ ಮತದಾರರ ಪಟ್ಟಿಯಿಂದ 1 ಕೋಟಿ ಮತದಾರರು ಡಿಲೀಟ್ 

Advertisement

ಬೆಂಗಳೂರು: ರಾಜ್ಯದಲ್ಲಿ ನಡೆದಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆಯಲ್ಲಿ ಶುಕ್ರವಾರದ ಅಂತ್ಯದ ವೇಳೆಗೆ 98.73 ಲಕ್ಷ ಮತದಾರರು ಹಾಲಿ ಮತದಾರರ ಪಟ್ಟಿಯಿಂದ ಡಿಲೀಟ್ ಆಗಲಿದ್ದಾರೆ.

ಆಗಸ್ಟ್ 8ರ ವೇಳೆಗೆ ಈ ಮತದಾರರ ಸಂಖ್ಯೆ ಒಂದು ಕೋಟಿ ದಾಟುವ ಸಾಧ್ಯತೆ ಇದೆ.ರಾಜ್ಯದಲ್ಲಿ ಇದುವರೆಗಿನ ಎಸ್‌ಐಆರ್ ಪ್ರಕ್ರಿಯೆಯಲ್ಲಿ 98.73 ಲಕ್ಷ ಮತದಾರರನ್ನು ಎ.ಎಸ್.ಡಿ.ಡಿ.ಓ. ಮತದಾರರು ಎಂದು ಗುರುತಿಸಲಾಗಿದೆ.

ಈ ಪೈಕಿ ಪತ್ತೆಯಾಗದವರು/ ಗೈರು 13.77 ಲಕ್ಷ, ಶಾಶ್ವತವಾಗಿ ಸ್ಥಳಾಂತರಗೊಂಡವರು 60.42 ಲಕ್ಷ, ಮೃತ ಮತದಾರರು 15.79 ಲಕ್ಷ, ಈಗಾಗಲೇ ಬೇರೆ ಕಡೆ ನೋಂದಣಿ ಮಾಡಿಕೊಂಡವರು 6.33 ಲಕ್ಷ ಮತ್ತು ಇತರೆ 2.40 ಲಕ್ಷ ಮತದಾರರು ಇದ್ದಾರೆ.

ಈ ಪೈಕಿ 98.73 ಲಕ್ಷ ಮತದಾರರು ಕರಡು ಮತದಾರರ ಪಟ್ಟಿಯಿಂದ ಹೊರಗುಳಿಯಲಿದ್ದಾರೆ. ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರ ಕೇಂದ್ರ ಚುನಾವಣಾ ಆಯೋಗವು ಕ್ಲೇಮು ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಲಿದೆ.

2002ರ ಮತದಾರರ ಪಟ್ಟಿ ಮತ್ತು ಎಸ್‌ಐಆರ್ ವೇಳೆ ನೀಡಿದ ಮಾಹಿತಿಗಳಲ್ಲಿ ವ್ಯತ್ಯಾಸಗಳಿದ್ದಲ್ಲಿ ಸಂಬಂಧಿಸಿದ ಬಿಎಲ್‌ಒ ಗಳೇ ಅಂತಹ ಮತದಾರರಿಗೆ ನೋಟಿಸ್ ನೀಡಲಿದ್ದು, ಈ ಸಂದರ್ಭದಲ್ಲಿ ನಿಗದಿತ ದಾಖಲೆಗಳನ್ನು ನೀಡಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಬಹುದು ಎಂದು ಹೇಳಲಾಗಿದೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಾಮೀನು ಸಿಕ್ಕ ಬೆನ್ನಲ್ಲೇ ಪರಪ್ಪನ ಅಗ್ರಹಾರ ಜೈಲಿನಿಂದ ವಿನಯ್ ಕುಲಕರ್ಣಿ ರಿಲೀಸ್ ಗ್ರಾಹಕರಿಗೆ ಸಿಹಿಸುದ್ದಿ : 19 ಕೆಜಿ ತೂಕದ ಸಿಲಿಂಡರ್ ಬೆಲೆ ₹209 ಇಳಿಕೆ ಇಂದು ಮೈಸೂರಿಗೆ ಪ್ರಧಾನಿ ಮೋದಿ : ಹಲವು ಕಾರ್ಯಕ್ರಮಗಳಲ್ಲಿ ಭಾಗಿ ಹಾಲಿ ಮತದಾರರ ಪಟ್ಟಿಯಿಂದ 1 ಕೋಟಿ ಮತದಾರರು ಡಿಲೀಟ್ ನಿವೃತ್ತ ಮುಖ್ಯಗುರು ದತ್ತಪ್ಪ ಅಲ್ಕೂರು ದಂಪತಿಗೆ ಹಳೆ ವಿದ್ಯಾರ್ಥಿನಿಯರಿಂದ ಬೆಳ್ಳಿ ವಿಘ್ನೇಶ್ವರ ಸಮರ್ಪಣೆ35 ವರ್ಷ ಸೇವೆ ಸಲ್ಲಿಸಿದ ದತ್ತಪ್ಪ ಅಲ್ಕೂರು ಅವರಿಗೆ ದದ್ದಲ್ ಶಾಲೆಯಲ್ಲಿ ಅದ್ಧೂರಿ ಬೀಳ್ಕೊಡುಗೆಎಸ್ ಸಿಪಿ, ಟಿ ಎಸ್ ಪಿ ಅನುದಾನ ದುರ್ಬಳಕೆ  ಆರೋಪ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ319 ಕೆಎಎಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ :  ನಾಳೆಯಿಂದ ಅರ್ಜಿ ಸಲ್ಲಿಕೆ ಪ್ರಾರಂಭ ಮೊಬೈಲ್ ತರಬೇಡ ಎಂದಿದಕ್ಕೆ ಮುಖ್ಯ ಶಿಕ್ಷಕಿಯ ಕಾರಿನ ಮೇಲೆಯೇ ಕಲ್ಲು ಎತ್ತಹಾಕಲು ಮುಂದಾದ ವಿದ್ಯಾರ್ಥಿಕರ್ನಾಟಕ ಬಂದ್‌ ನಿರ್ಧಾರವನ್ನು ಕೈಬಿಡಬೇಕು : ಡಿ. ಕೆ ಶಿವಕುಮಾರ್