ಬೆಂಗಳೂರು : ಅಕ್ಕಮಹಾದೇವಿ 12 ನೇ ಶತಮಾನದ ಪ್ರಸಿದ್ಧ ವಚನಗಾರ್ತಿ, ಕನ್ನಡದ ಪ್ರಥಮ ಮಹಿಳಾ ಕವಯತ್ರಿ ಹಾಗೂ ಶಿವಶರಣೆ ಎಂದು ಶಾಸಕ ಎಸ್ ಮುನಿರಾಜು ಹೇಳಿದರುದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶೆಟ್ಟಿಹಳ್ಳಿ ವಾರ್ಡಿನ ವಿಘ್ನೇಶ್ವರ ಬಡಾವಣೆ ಅಕ್ಕನ ಬಳಗ ಮಹಿಳಾ ಸಮಾಜ ಸಂಸ್ಥಾಪಕ ಅಧ್ಯಕ್ಷೆ ಪ್ರೇಮ ಆರಾಧ್ಯ ಮತ್ತು ಹಿರಿಯ ರಾಜಕಾರಣಿ ಸಿ ಎಸ್ ಆರಾಧ್ಯ ಇವರ ನೇತೃತ್ವದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಅಕ್ಕನ ಬಳಗ ಮಹಿಳಾ ಸಮಾಜದ 13ನೇ ವಾರ್ಷಿಕೋತ್ಸವಕ್ಕೆ ಶಾಸಕ ಎಸ್ ಮುನಿರಾಜು ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಜನಪ್ರಿಯ ಸಮಾಜದ ಚಿಂತಕರು ವಾಗ್ಮಿಗಳು ಬುದ್ದಿಜೀವಿಗಳು ಮತ್ತು ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಡಾ ಸಂಗನ ಬಸಪ್ಪ ಬಿರಾದಾರ್ ಮಾತನಾಡಿ
ಅಕ್ಕಮಹಾದೇವಿ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪ ಉಡುತಡಿ ಗ್ರಾಮ ತಂದೆ ನಿರ್ಮಲ ಶೆಟ್ಟಿ ತಾಯಿ ಸುಮತಿ ಇವರ ಕಾವ್ಯ ನಾಮ ಯೋಗಾಂಗತ್ ಇವರ ವಚನ |ಮರವಿದ್ದು ಫಲವೇನು|ನೆರಳಿಲ್ಲದ ಮೇಲೆ ಧನವಿದ್ದು ಫಲವೇನು| ದಯೆಯಿಲ್ಲದ ಮೇಲೆ ನಾನು ಇದ್ದು ಫಲವೇನು |ನಿಮ್ಮ. ಜ್ಞಾನವಿಲ್ಲದ ಮೇಲೆ -ಚೆನ್ನ ಮಲ್ಲಿಕಾರ್ಜುನಾ...
ಡಾ.ಬಿರಾದಾರ್ ವಚನ ಹೇಳುವ ಮೂಲಕ ಅಕ್ಕಮಹಾದೇವಿ ಆದರ್ಶಗಳು ಮೈಗೂಡಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಿಜೆಪಿ ಹಿರಿಯ ಮುಖಂಡ ಅಕ್ಕನ ಬಳಗ ಮಹಿಳಾ ಸಮಾಜದ ಮುಖ್ಯಸ್ಥ ಸಿ ಎಸ್ ಆರಾಧ್ಯ ಸರ್ವರಿಗೂ ಸ್ವಾಗತಿಸಿದರು.ಅಕ್ಕನ ಬಳಗ ಮಹಿಳಾ ಸಮಾಜದ ಅಧ್ಯಕ್ಷೆ ಶ್ರೀಮತಿ ಪ್ರೇಮ ಅವರು 13ನೇ ವಾರ್ಷಿಕೋತ್ಸವ ಕುರಿತು ಪ್ರಾಸ್ತಾವಿಕ ಭಾಷಣ ಮಾಡಿದರು.ಯುವ ಸಾಹಿತಿ ಬಿ ಕೆ ಕಿರಣ್ ಅವರು ಕಾರ್ಯಕ್ರಮ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಅಬ್ಬಿಗೆರೆ ವೀರ ಶೈವ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಜಿ. ರಾಜೇಂದ್ರ,ಚಿಕ್ಕಬಾಣವಾದ ವೀರ ಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಎಂ ಹೆಚ್ ಪಾಟೀಲ್,ಜನ ವಿಕಾಸ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ದಯಾನಂದ್, ಸುವರ್ಣ ಕರ್ನಾಟಕ ಕಾರ್ಮಿಕರ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಿ.ಎಲ್. ಚೆನ್ನಕೇಶವ, ಸುಬ್ಬಣ್ಣ, ರಾಜಶೇಖರ್, ಈಶ್ವರ್, ಸುರೇಶ್ ದೊಡ್ಡಮನಿ, ಶರಣು ಆಲೂರ್, ಮುತ್ತುರಾಜ್ ಹಾಳಕಿ, ಪತ್ರಕರ್ತ ಜಿ. ನಂದೀಶ್, ಕೆ ಎಂ ರಾಜಣ್ಣ,ಮಲ್ಲಾ ಆರಾಧ್ಯ, ರವೀಶ್, ಮಾಜಿ ಅಧ್ಯಕ್ಷ ಲಕ್ಷ್ಮೀ ಶ್ರೀನಿವಾಸ್ ಹೆಗ್ಗನಹಳ್ಳಿ, ಸ್ವಾಮಿ ಆರಾಧ್ಯ,ಡಾ. ಮಲ್ಲಿಕಾರ್ಜುನ್, ಮಹಿಳಾ ಮುಖಂಡರಾದ ರೇಖಾ,ಸಾಕಮ್ಮ, ಸುಮ ಎಂ,ಚೇತನಾ, ಮಂಜುಳಾ, ಗಾಯಿತ್ರಿ ನಾಗರತ್ನ, ಸವಿತಾ ಸೇರಿದಂತೆ ಅಕ್ಕನ ಬಳಗ ಮಹಿಳಾ ಸಮಾಜದ ಪದಾಧಿಕಾರಿಗಳ ಸದಸ್ಯರು ವಿದ್ಯಾರ್ಥಿಗಳು ಪೋಷಕರು ಮುಂತಾದವರು ಉಪಸ್ಥಿತರಿದ್ದರು.
ವರದಿ ಅಯ್ಯಣ್ಣ ಮಾಸ್ಟರ್


