ಮುಂಬೈ: ಭಾರತ ಕ್ರಿಕೆಟ್ ತಂಡದ ಖ್ಯಾತ ಮಾಜಿ ಆಟಗಾರ ಅಜಿಂಕೆ ರೆಹಾನೆ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಣೆ ಮಾಡಿದ್ದಾರೆ.
ಮುಂಬೈ ಕ್ರಿಕೆಟ್ ಅಶೋಶಿಯೇಶನ್ ಅಧ್ಯಕ್ಷ ಅಜಿಂಕೆ ನಾಯ್ಕ ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ರೆಹಾನೆ ಅವರ ನಿವೃತ್ತಿಯಿಂದ ಕ್ರಿಕೆಟ್‌ನಲ್ಲಿನ ಒಂದು ಮಹತ್ವದ ಅಧ್ಯಾಯ ತೆರೆ ಕಂಡಿದೆ ಎಂದು ಬಣ್ಣಿಸಿದ್ದಾರೆ.
ಅಜಿಂಕೆ ರೆಹಾನೆ ಭಾರತದ ಪರ ೮೫ ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ೯೦ ಏಕದಿನ ಪಂದ್ಯ ಹಾಗೂ ೨೦ ಚುಟುಕು ಪಂದ್ಯಗಳಲ್ಲಿಯೂ ಅವರು ಭಾರತ ತಂಡವನ್ನು ಪ್ರತಿನಿಧಿಸಿದ್ದರು.


