ಮಾನ್ವಿ: ರಾಯಚೂರಿನಲ್ಲಿ ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೆ ಒಳಗಾದ ಆರ್ಯವೈಶ್ಯ ಸಮುದಾಯದ ಸಣ್ಣ ವ್ಯಾಪಾರಿ ದಿವಂಗತ ಬಾಪುರ ನರಸಿಂಹ ಶೆಟ್ಟಿ ಅವರ ಕುಟುಂಬಕ್ಕೆ ನೆರವಾಗುವುದು ಪ್ರತಿಯೊಬ್ಬ ಸಮಾಜದ ಸದಸ್ಯರ ಜವಾಬ್ದಾರಿಯಾಗಿದೆ ಎಂದು ಮಾನ್ವಿ ತಾಲೂಕು ಶ್ರೀ ನಗರೇಶ್ವರ ಆರ್ಯವೈಶ್ಯ ಸಂಘದ ತಾಲೂಕು ಅಧ್ಯಕ್ಷ ಆರ್. ಮುತ್ತುರಾಜ್ ಶೆಟ್ಟಿ ಹೇಳಿದರು.
ಮಾನ್ವಿ ತಾಲೂಕು ಶ್ರೀ ನಗರೇಶ್ವರ ಆರ್ಯವೈಶ್ಯ ಸಂಘದ ವತಿಯಿಂದ ದಿವಂಗತ ಬಾಪುರ ನರಸಿಂಹ ಶೆಟ್ಟಿ ಅವರ ಕುಟುಂಬಕ್ಕೆ 2 ಲಕ್ಷಗಳ ಸಹಾಯಧನವನ್ನು ಅವರು ಹಸ್ತಾಂತರಿಸಿ ಮಾತನಾಡಿದರು. ದುಃಖದ ಸಮಯದಲ್ಲಿ ಸಮಾಜ ಒಗ್ಗಟ್ಟಿನಿಂದ ನೊಂದ ಕುಟುಂಬದ ಬೆನ್ನಿಗೆ ನಿಲ್ಲಬೇಕು. ಸಮಾಜದ ಏಕತೆ ಮತ್ತು ಪರಸ್ಪರ ಸಹಕಾರದ ಮನೋಭಾವ ಇನ್ನಷ್ಟು ಬಲಗೊಳ್ಳಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಬಿ. ಈರಣ್ಣ ಆರ್. ದ್ವಾರಕನಾಥ ಆರ್. ಪುರುಷೋತ್ತಮ ಆರ್. ಪಾಂಡುರಂಗ ಇ. ಬಸವಪ್ರಕಾಶ ಆರ್. ನಾಗರಾಜ ಆರ್. ಮಂಜುನಾಥ ಬಿ. ವಿರೇಶಬಾಬು ಎಂ. ಕೇಶವಯ್ಯ ಡಿ. ಮಂಜುನಾಥ ಕೆ. ರಾಮಚಂದ್ರ ಆರ್. ಸತೀಶಚಂದ್ರ ಎಸ್. ಪ್ರಾಣೇಶ್ ಬಿ. ಶಶಿಧರ ಸೇರಿದಂತೆ ಮಾನ್ವಿ ಹಾಗೂ ರಾಯಚೂರು ಆರ್ಯವೈಶ್ಯ ಸಮಾಜದ ಮುಖಂಡರು ಉಪಸ್ಥಿತರಿದ್ದರು.


