ಮಾನ್ವಿ: ತಾಲೂಕಿನ ಮದ್ಲಾಪುರ ಗ್ರಾಮದ ತುಂಗಭದ್ರ ನದಿ ತೀರದಲ್ಲಿ ರಾಜ್ಯದ ಪಕ್ಷಿ ವೀಕ್ಷಕರ ಸಮುದಾಯದ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಅಕ್ಟೋಬರ್ 30ರಿಂದ ನವೆಂಬರ್ 2ರವರೆಗೆ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಪಕ್ಷಿಗಣತಿ–2026 ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದ ವಲಯ ಅರಣ್ಯಾಧಿಕಾರಿ ಪುರುಷೋತ್ತಮ ರಾವ್ ಜಿ. ಮಾನ್ವಿ ತಾಲೂಕು ವೈವಿಧ್ಯಮಯ ಭೌಗೋಳಿಕ ಪರಿಸರವನ್ನು ಹೊಂದಿದ್ದು ಖುಷ್ಕಿ ಪ್ರದೇಶ ನೀರಾವರಿ ಪ್ರದೇಶ ಹಾಗೂ ತುಂಗಭದ್ರ ನದಿ ತೀರದಲ್ಲಿ ವಿವಿಧ ಜಾತಿಯ ಪ್ರಾಣಿ ಮತ್ತು ಪಕ್ಷಿಗಳನ್ನು ಕಾಣಬಹುದಾಗಿದೆ. ರಾಜ್ಯದ ಪಕ್ಷಿ ವೀಕ್ಷಕರ ಸಮುದಾಯ ಕೈಗೊಂಡಿರುವ ಈ ಪಕ್ಷಿಗಣತಿಯಿಂದ ಇಲ್ಲಿನ ಪಕ್ಷಿಗಳ ವೈವಿಧ್ಯತೆಯ ಕುರಿತು ದಾಖಲಾತಿ ಸಿದ್ಧವಾಗಲಿದ್ದು ಮುಂದಿನ ಪೀಳಿಗೆಗೆ ಅಧ್ಯಯನ ನಡೆಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಪಕ್ಷಿ ಪ್ರೇಮಿ ಸಲ್ಲಾವುದ್ದೀನ್ ಮಾತನಾಡಿ ರಾಯಚೂರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ 28ಕ್ಕೂ ಹೆಚ್ಚು ಪಕ್ಷಿ ಪ್ರೇಮಿಗಳು ಪಕ್ಷಿಗಣತಿಯಲ್ಲಿ ಭಾಗವಹಿಸಿದ್ದು ಒಟ್ಟು 137 ವಿವಿಧ ಪ್ರಭೇದಗಳ ಪಕ್ಷಿಗಳನ್ನು ಗುರುತಿಸಿ ದಾಖಲಿಸಲಾಗಿದೆ. ಮಾನ್ವಿ ತಾಲೂಕಿನಲ್ಲಿಯೇ 70ಕ್ಕೂ ಹೆಚ್ಚು ವಿವಿಧ ಜಾತಿಯ ಪಕ್ಷಿಗಳನ್ನು ಗುರುತಿಸಿ ಅವುಗಳ ಗಣತಿಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ತಿಳಿಸಿದರು.
ಪಕ್ಷಿಗಣತಿ ವೇಳೆ ಇಂಡಿಯನ್ ರೋಲರ್ ಇಂಡಿಯನ್ ಗ್ರೇ ಹಾರ್ನ್‌ಬಿಲ್ ಬ್ಲಾಕ್ ಬಿಲ್ಡ್ ಟರ್ನ್ ರೆಡ್ ಅವಡಾವಟ್ ಪರ್ಪಲ್ ಸನ್‌ಬರ್ಡ್ ಫ್ಲೆಮಿಂಗೋ ಏಷಿಯನ್ ಓಪನ್‌ಬಿಲ್ ಯುರೇಶಿಯನ್ ಸ್ಪೂನ್‌ಬಿಲ್ ಇಂಡಿಯನ್ ಸ್ಪಾಟ್ ಬಿಲ್ಡ್ ಡಕ್ ಏಷಿಯನ್ ಗ್ರೀನ್ ಬೀ ಈಟರ್ ಬ್ಲಾಕ್ ಡ್ರಾಂಗೋ ಬ್ಲಾಕ್ ಹೆಡೆಡ್ ಐಬಿಸ್ ರೆಡ್ ನೇಪ್ಡ್ ಐಬಿಸ್ ಗ್ಲೋಸಿ ಐಬಿಸ್ ಬ್ರಾಹ್ಮಿಣಿ ಸ್ಟಾರ್ಲಿಂಗ್ ರೋಸಿ ಸ್ಟಾರ್ಲಿಂಗ್ ಕಾಮನ್ ಹೂಪೋ ಇಂಡಿಯನ್ ಗೋಲ್ಡನ್ ಓರಿಯಲ್ ನವಿಲು ಗ್ರೇ ಫ್ರಾಂಕೊಲಿನ್ ರೆಡ್ ವೆಂಟೆಡ್ ಬುಲ್‌ಬುಲ್ ಶಿಕ್ರಾ ಕಾಮನ್ ಕೆಸ್ಟ್ರೆಲ್ ಬ್ಲಾಕ್ ವಿಂಗ್ಡ್ ಕೈಟ್ ಬ್ಲಾಕ್ ವಿಂಗ್ಡ್ ಸ್ಟಿಲ್ಟ್ ಕಾಮನ್ ಮೈನಾ ಇಂಡಿಯನ್ ಪೈಡ್ ಮೈನಾ ಇಂಡಿಯನ್ ರಾಬಿನ್ ಇಂಡಿಯನ್ ಸಿಲ್ವರ್‌ಬಿಲ್ ಲಾಫಿಂಗ್ ಡವ್ ರೆಡ್ ಕಾಲರ್ಡ್ ಡವ್ ರೋಸ್ ರಿಂಗ್ಡ್ ಪ್ಯಾರಕೀಟ್ ಹೌಸ್ ಸ್ಪ್ಯಾರೋ ಕ್ಯಾಟಲ್ ಈಗ್ರೆಟ್ ಲಿಟಲ್ ಈಗ್ರೆಟ್ ಗ್ರೇ ಹೆರಾನ್ ಪರ್ಪಲ್ ಹೆರಾನ್ ರೆಡ್ ವಾಟಲ್ಡ್ ಲ್ಯಾಪ್‌ವಿಂಗ್ ರಾಕ್ ಪಿಜನ್ ವೈಟ್ ಬ್ರೆಸ್ಟೆಡ್ ವಾಟರ್‌ಹೆನ್ ವೈಟ್ ಥ್ರೋಟೆಡ್ ಕಿಂಗ್‌ಫಿಶರ್ ವುಡ್ ಸ್ಯಾಂಡ್‌ಪೈಪರ್ ವೈಟ್ ವ್ಯಾಗ್‌ಟೇಲ್ ಓರಿಯಂಟಲ್ ಮ್ಯಾಗ್‌ಪೈ ರಾಬಿನ್ ಲಿಟಲ್ ಕಾರ್ಮೊರಂಟ್ ಲಿಟಲ್ ರಿಂಗ್ಡ್ ಪ್ಲೋವರ್ ಥಿಕ್ ನೀ ಪ್ಯಾಡಿ ಪಿಪಿಟ್ ಹಾಗೂ ವೆಸ್ಟರ್ನ್ ಮಾರ್ಷ್ ಹರಿಯರ್ ಸೇರಿದಂತೆ 70ಕ್ಕೂ ಹೆಚ್ಚು ವಿವಿಧ ಪಕ್ಷಿ ಪ್ರಭೇದಗಳನ್ನು ಗುರುತಿಸಿ ದಾಖಲಿಸಲಾಯಿತು.
ವರದಿ :ಆಂಜನೇಯ ನಸಲಾಪುರ


