ಬೆಳಗಾವಿ: ಕರ್ನಾಟಕ ಹಾಗೂ ಚತ್ತಿಸಗಢ ಕ್ರಿಕೆಟ್ ತಂಡಗಳ ನಡುವಿನ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಲೀಗ್ ಪಂದ್ಯ ಇಲ್ಲಿನ ಕೆಸ್ ಸಿಎ ಮೈದಾನದಲ್ಲಿ ಜನವರಿ 17 ರಿಂದ 20 ರ ವರೆಗೆ ನಡೆಯಲಿದೆ.
ನಗರದ ಆಟೊ ನಗರದಲ್ಲಿರುವ ಕೆಸ್ ಸಿಎ ಮೈದಾನದಲ್ಲಿ ಪಂದ್ಯ ನಿಗಧಿಯಾಗಿದ್ದು, ಬೆಳಗಾವಿ ಹಾಗೂ ಜಿಲ್ಲೆ ಕ್ರಿಕೆಟ್ ಅಭಿಮಾನಿಗಳಿಗೆ ರಣಜಿ ಪಂದ್ಯ ನೋಡುವ ಸೌಭಾಗ್ಯ ಸಿಗಲಿದೆ.
ಕರ್ನಾಟಕದ ಅಂತಾರಾಷ್ಟ್ರೀಯ ಮಟ್ಟದ ಆಟಗಾರರ ಆಟವನ್ನು ನೋಡುವ ಅವಕಾಶ ಸ್ಥಳೀಯ ಪ್ರೇಕ್ಷಕರಿಗೆ ಸಿಗಲಿದೆ.


