ರಾವಲಪಿಂಡಿ: ಪಾಕಿಸ್ತಾನ ಪ್ರವಾಸದಲ್ಲಿರುವ ಶ್ರೀಲಂಕಾ ಕ್ರಿಕೆಟ್ ತಂಡವು ಆತಿಥೇಯ ತಂಡದ ಎದುರು 2 ಟೆಸ್ಟ್ ಗಳ ಸರಣಿಯನ್ನು ಕೂಡ ಆಡಲಿದ್ದು, ಈ ಪೈಕಿ ಮೊದಲ ಟೆಸ್ಟ್ ಪಂದ್ಯ ನವೆಂಬರ್ 9 ರಿಂದ ಇಲ್ಲಿ ಆರಂಭವಾಗಲಿದೆ.
ಇಲ್ಲಿನ ರಾವಲಪಿಂಡಿ ಕ್ರಿಕೆಟ್ ಮೈದಾನದಲ್ಲಿ ಅಂದು ಪಂದ್ಯ 9: 30 ಕ್ಕೆ ಶುರುವಾಗಲಿದೆ. ಪಾಕಿಸ್ತಾನ ಈ ಮೊದಲು ನಡೇದ ಏಕದಿನ ತ್ರಿಕೋನ ಸರಣಿ ಹಾಗೂ ಟಿ-20 ಸರಣಿಗಳನ್ನು ಗೆದ್ದುಕೊಂಡಿತ್ತು.


