LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಖ್ಯಾತ ಕ್ರೀಡಾಪಟು ಎಂ.ಎಂ. ಸೋಮಯ್ಯ ಮನೆಯಲ್ಲಿ ಕಳ್ಳತನ : ಚಿನ್ನ ಪದಕ ಸಮೇತ ಹಲವು ವಸ್ತುಗಳ ಕಳವು 

Advertisement

ಬೆಂಗಳೂರು: ಭಾರತದ ಮಾಜಿ ಹಾಕಿ ತಂಡದ ನಾಯಕ (Hockey Captain) ಹಾಗೂ 1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ (Olympian) ಚಿನ್ನದ ಪದಕ ಗೆದ್ದಿದ್ದ ಖ್ಯಾತ ಕ್ರೀಡಾಪಟು ಎಂ.ಎಂ. ಸೋಮಯ್ಯ (MM Somaya) ಅವರ ಬೆಂಗಳೂರಿನ ನಿವಾಸದಲ್ಲಿ ಭಾರಿ ಕಳ್ಳತನ ನಡೆದಿದೆ.

ಇಂದಿರಾನಗರದ ನ್ಯೂ ತಿಪ್ಪಸಂದ್ರದಲ್ಲಿರುವ ಸೋಮಯ್ಯ ಅವರ ಮನೆಯಲ್ಲಿ ಒಲಿಂಪಿಕ್ಸ್ ಚಿನ್ನದ ಪದಕ, ಏಷ್ಯನ್ ಗೇಮ್ಸ್ ಪದಕಗಳು, ಬೆಲೆಬಾಳುವ ಆಭರಣಗಳು ಹಾಗೂ ನಗದು ಕಳವಾಗಿರುವುದಾಗಿ ವರದಿಯಾಗಿದೆ.

67 ವರ್ಷದ ಸೋಮಯ್ಯ ಅವರು ಅಕ್ಟೋಬರ್ 25ರಂದು ಬೆಳಿಗ್ಗೆ 5 ಗಂಟೆಗೆ ಕುಟುಂಬದೊಂದಿಗೆ ಕೊಡಗಿಗೆ ತೆರಳಿದ್ದರು.

ಅಕ್ಟೋಬರ್ 28ರಂದು ಬೆಳಿಗ್ಗೆ 7.15ರ ಸುಮಾರಿಗೆ ಮನೆಯ ಬಾಗಿಲು ತೆರೆದಿರುವುದನ್ನು ಗಮನಿಸಿದ ನೆರೆಮನೆಯ ನಾರಾಯಣ್ ಅವರು, ಸೋಮಯ್ಯ ಅವರಿಗೆ ಕರೆ ಮಾಡಿ ಕಳ್ಳತನದ ವಿಷಯ ತಿಳಿಸಿದ್ದಾರೆ.

1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಭಾರತ ಗೆದ್ದಿದ್ದ ಚಿನ್ನದ ಪದಕ ಸೋಮಯ್ಯ ಅವರ ಕ್ರೀಡಾ ಸಾಧನೆಯ ಅಮೂಲ್ಯ ನೆನಪಾಗಿದೆ. ಇಂತಹ ಐತಿಹಾಸಿಕ ಪದಕವೇ ಕಳ್ಳತನವಾಗಿರುವುದು ಕ್ರೀಡಾಭಿಮಾನಿಗಳಲ್ಲಿ ಆಘಾತ ಮೂಡಿಸಿದೆ.

ಕಳ್ಳತನಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆ ಹಾಗೂ ಕಳವಾದ ಪದಕಗಳು ಮತ್ತು ಇತರ ವಸ್ತುಗಳ ಮರುಪಡೆಯುವಿಕೆ ಮಹತ್ವ ಪಡೆದಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST