ಚಿಕ್ಕಮಗಳೂರು: ನೀರು ಕಾಯಿಸಲು ಹಾಕಿದ್ದ ವಾಟರ್ ಹೀಟರ್ (Water Heater) ಬಕೆಟ್‌ಗೆ ಕೈಹಾಕಿ ವಿದ್ಯುತ್ ಆಘಾತದಿಂದ (Electric Shock) 8 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಸಂಭವಿಸಿದೆ.
ಸಖರಾಯಪಟ್ಟಣ ನಿವಾಸಿಗಳಾಗಿದ್ದು, 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ನೀಲಾಂಶ್ (8) ಮೃತಪಟ್ಟ ದುರ್ದೈವಿ. ಭಾನುವಾರ (ನ. 1) ಶಾಲೆಗೆ ರಜೆ ಇದ್ದಿದ್ದರಿಂದ ಬಾಲಕ ಮನೆಯಲ್ಲಿ ಒಬ್ಬನೇ ಇದ್ದ ಎನ್ನಲಾಗಿದೆ. ಈ ವೇಳೆ ಸ್ನಾನ ಮಾಡುವುದಕ್ಕಾಗಿ ಬಕೆಟ್‌ನಲ್ಲಿ ನೀರಿಟ್ಟು ಹೀಟರ್ ಆನ್ ಮಾಡಿದ್ದ ಬಾಲಕ ತಿಳಿಯದೇ ಬಕೆಟ್‌ನಲ್ಲಿದ್ದ ನೀರಿಗೆ ಕೈ ಹಾಕಿದ್ದಾನೆ.
ತೀವ್ರ ವಿದ್ಯುತ್ ಆಘಾತದಿಂದಾಗಿ ಬಾಲಕ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಪೋಷಕರು ಕೆಲಸ ಮುಗಿಸಿ ಮನೆಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದ್ದು, ಮಗನನ್ನು ಕಳೆದುಕೊಂಡ ಹೆತ್ತವರ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಘಟನೆಗೆ ಸಂಬಂಧಿಸಿದಂತೆ ಸಖರಾಯಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


