LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ರಾಯಚೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ! 

Advertisement

ರಾಯಚೂರು : ರಾಯಚೂರಲ್ಲಿ ಹೃದಯವಿದ್ರಾವಕ ಘಟನೆ ಒಂದು ನಡೆದಿದ್ದು ಅದೇ ಕುಟುಂಬದ ನಾಲ್ವರು ಆತ್ಮಹತ್ಯೆ ಶರಣಾಗಿದ್ದಾರೆ ರಾಯಚೂರಿನ ಜಲಾಲನಗರದಲ್ಲಿ ಈ ಒಂದು ಘಟನೆ ನಡೆದಿದೆ. ಮನೆಯಲ್ಲಿ ತಾಯಿ ಇಬ್ಬರು ಮಕ್ಕಳ ಅನುಮಾನ ಸಾವಾಗಿದ್ದು, ಬಳಿಕ ತಂದೆ ವಿಷ್ಣು ಮಲ್ಲೇಶ್ ಕೂಡ ರೈಲಿಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ. 

ವಿಷ್ಣು ಮಲ್ಲೇಶ್, ಪತ್ನಿ ಅರುಣ (40) ಮಗ ಶ್ಲೋಕ (8) ಮಗಳು ಖುಷಿ (4) ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಇನ್ನು ಹಿರಿಯ ಮಗ ಸುಹಾಸ್ ಮಾತ್ರ ಜೀವಂತವಾಗಿದ್ದಾನೆ. ನಿನ್ನೆ ರಾತ್ರಿ ಒಂದೇ ಬೆಡ್ ರೂಮ್ನಲ್ಲಿ ಐವರು ಮಲಗಿದ್ದರು. ಮುಂಜಾನೆ ಎದ್ದು ನೋಡಿದ ಹಿರಿಯ ಮಗ ಸುಹಾಸ್. ಆಗ ಬೆಡ್ ರೂಂನಲ್ಲಿ ಯಾರು ಇಲ್ಲದ್ದನ್ನು ಕಂಡು, ಮತ್ತೊಂದು ಬೆಡ್ರೂಮ್ ಪರಿಶೀಲನೆ ವೇಳೆ ಶವಗಳು ಪತ್ತೆಯಾಗಿದೆ. 

ತಾಯಿ ಹಾಗೂ ಇಬ್ಬರು ಮಕ್ಕಳ ಮೃತ ದೇಹಗಳು ಪತ್ತೆಯಾಗಿವೆ. ಆಗ ತಂದೆ ವಿಷ್ಣು ಮಲ್ಲೇಶಗೆ ಮಗ ಸುಹಾಸ್ ಕರೆ ಮಾಡಿದ್ದಾನೆ. ಬಳಿಕ ಈ ಒಂದು ಆತ್ಮಹತ್ಯೆ ಘಟನೆ ಬೆಳಕಿಗೆ ಬಂದಿದೆ.

ಆಗ ಸಾಲದ ಹೊರೆ ಹೆಚ್ಚಾಗಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ನಾನು ಕೂಡ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಅಂತ ತಂದೆ ವಿಷ್ಣು ಮಲ್ಲೇಶ್ ಹೇಳಿದ್ದಾನೆ.

 ಬಳಿಕ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ ತಂದೆ ವಿಷ್ಣುಮಲ್ಲೇಶ್ ಸದ್ಯ ಚಿಕ್ಕ ಸೂಗೂರು ಬಳಿ ರೈಲ್ವೆ ಟ್ರಾಕ್ನಲ್ಲಿ ವಿಷ್ಣು ಶವ ಪತ್ತೆಯಾಗಿದೆ ರಾಯಚೂರು ತಾಲೂಕಿನ ಚಿಕ್ಕ ಸೂಗುರು ಗ್ರಾಮದ ರೈಲ್ವೆ ಟ್ರಾಕ್ ಬಳಿ ವಿಷ್ಣು ಶವ ಪತ್ತೆಯಾಗಿದೆ. 

ರಾಯಚೂರಿನ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನ.5ರಿಂದ ಸಾರಿಗೆ ಬಸ್ ಪ್ರಯಾಣ ದರ ಏರಿಕೆ : ಸಚಿವ ಬೈರತಿ ಸುರೇಶ್ ಘೋಷಣೆರಾಯಚೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ! ಶೀಘ್ರದಲ್ಲೇ 72 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿ : ಡಿ.ಕೆ. ಶಿವಕುಮಾರ್ಕಿವೀಸ್ ಗೆ 192 ರನ್ ಗಳ ಟಾರ್ಗೆಟ್ ನೀಡಿದ ಭಾರತ ಪಾಕಿಸ್ತಾನ- ಒಮಾನ್ ಹಾಗೂ ಆಸ್ಟ್ರೇಲಿಯಾ- ಅಪಘಾನಿಷ್ಠಾನ್ ಪಂದ್ಯ ಇಂದು ತ್ರಿಕೋನ ಏಕದಿನ ಕ್ರಿಕೆಟ್ ಸರಣಿ: ಪಾಕಿಸ್ತಾನ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ 2-1 ರಿಂದ ಟೆಸ್ಟ್ ಸರಣಿ ಗೆದ್ದ ದ. ಆಪ್ರಿಕಾ ಪಟ್ಟಣದ ಶ್ರೀನಿಧಿ ಭಾರತ್ ಗ್ಯಾಸ್ ಗೋದಮನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಂತರಿಸುವಂತೆ ಮನವಿಎಸ್.ವಿ.ವಿ.ಕೆ.ಟ್ರಸ್ಟ್ನ ಆರ್ಯುವೇದೀಕ್ ಮೆಡಿಕಲ್ ಕಾಲೇಜ್ ಅಂತಿಮ ವಿದ್ಯಾರ್ಥಿಗಳ ವೈದ್ಯೋತ್ತಾನ ಪದವಿಪ್ರದಾನ ಕಾರ್ಯಕ್ರಮಸರ್ಕಾರದ ಕಣ್ಣಿಗೆ ಮಣ್ಣು, ಅನ್ನದಾತನ ಬದುಕಿಗೆ ಕಣ್ಣೀರು: ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ರವಿ ಪಾಟೀಲ್ ಸಿಡಿದೆದ್ದಿದ್ದು ಹೀಗೆ!