ಮಾನ್ವಿ: ಪಟ್ಟಣದ ಕಲ್ಮಠದ ಪೂಜ್ಯ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಆರ್ಯುವೇದೀಕ್ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆ ಸಭಾಂಗಣದಲ್ಲಿ ವೈದ್ಯೋತ್ತಾನ ಪದವಿಪ್ರದಾನ ಕಾರ್ಯಕ್ರಮ-2026 ಅನ್ನು ಎಸ್.ವಿ.ವಿ.ಕೆ.ಟ್ರಸ್ಟ್ನ ಅಧ್ಯಕ್ಷರು ಹಾಗೂ ಕಲ್ಮಠ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಉದ್ಘಾಟಿಸಿ ಮಾತನಾಡಿ ನಮ್ಮಲಿರುವ ಜ್ಞಾನವನ್ನು ಬಳಸದೆ ಇದ್ದಲ್ಲಿ ಜ್ಞಾನವು ಕ್ಷೀಣಿಸುತ್ತ ಹೊಗುತ್ತದೆ ಅದ್ದೆ ರೀತಿ ವೈದ್ಯಕೀಯ ವಿದ್ಯಾಲಯದಲ್ಲಿ ಪಡೆದ ವೈದ್ಯಕೀಯ ಜ್ಞಾನವನ್ನು ರೋಗಿಗಳ ಸುಧಾರಣೆಗೆ ಬಳಸದೆ ಇದ್ದಲ್ಲಿ ನಿಮ್ಮಲಿರುವ ಜ್ಞಾನಕೂಡ ಕ್ಷೀಣಿಸುತ್ತ ಹೊಗುತ್ತದೆ 5 ವರ್ಷಗಳ ಕಾಲ ವೈದ್ಯಾಕೀಯ ಕಾಲೇಜಿನಲ್ಲಿ ಪಡೆದ ಜ್ಙಾನವನ್ನು ಸಮಾಜದಲ್ಲಿ ಅಗತ್ಯವುಳ್ಳವರಿಗೆ ಕಾಯಲೆಗಳಿಂದ ಬಳಲುತ್ತಿರುವವರನ್ನು ಗುಣಪಡಿಸುವುದಕ್ಕೆ ಬಳಸಿಕೊಂಡಲ್ಲಿ ನಿಮ್ಮಲಿರುವ ವೈದ್ಯಾಕೀಯ ಜ್ಞಾನ ಹೆಚ್ಚುತ್ತದೆ ಹಾಗೂ ನಿಮ್ಮಿಂದ ಸಮಾಜಕ್ಕೆ ಒಳಿತಾಗುವುದಲ್ಲದೆ ನಿಮ್ಮ ಜೀವನಕೂಡ ಉತ್ತಮವಾಗಿರುತ್ತದೆ ಎಂದು ತಿಳಿಸಿದರು.
ಎಸ್.ವಿ.ವಿ.ಕೆ.ಟ್ರಸ್ಟ್ ಆರ್ಯುವೇದೀಕ್ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆಯ ಪ್ರಾಚಾರ್ಯರಾದ ಡಾ.ಜೀವನೇಶ್ವರಯ್ಯ ಮಾತನಾಡಿ ಎಸ್.ವಿ.ವಿ.ಕೆ.ಟ್ರಸ್ಟ್ನ ಆರ್ಯುವೇದೀಕ್ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆಯಲ್ಲಿ ಅತ್ಯಧೂನಿಕವಾದ ವೈದ್ಯಕೀಯ ಸಲಕರಣೆಗಳನ್ನು ಹೊಂದಿರುವುದು ಸೇರಿದಂತೆ ಅನುಭವಿ ಉಪನ್ಯಾಸಕರು ಕಳೆದ 5 ವರ್ಷಗಳಲ್ಲಿ ಆರ್ಯುವೇದೀಕ್ ವೈದ್ಯಪದ್ದತಿಯ ಎಲ್ಲಾ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪರಿಣಿತಿಯನ್ನು ನೀಡಿದ್ದಾರೆ ನೀವು ಉತ್ತಮ ಆರೋಗ್ಯಶಿಕ್ಷಣವನ್ನು ಹೊಂದುವುದರೊಂದಿಗೆ ನಿಮ್ಮ ಸುತ್ತಮುತ್ತಲಿನ ಸಮಾಜದಲ್ಲಿರುವವರ ಆರೋಗ್ಯವಂತರಾಗುವುದಕ್ಕೆ ಅಗತ್ಯ ಸಹಕಾರ ನೀಡಿ ನೀವು ಕಲಿತಾ ಸಂಸ್ಥೆಯ ಬೆಳವಣಿಗೆಗೆ ಅಗತ್ಯ ಸಹಕಾರವನ್ನು ನೀಡಿ ಎಂದು ತಿಳಿಸಿದರು.
ಅಗಸ್ತ್ಯ 2026 ನೇ ತಂಡದ 52 ಕ್ಕೂ ಹೆಚ್ಚು ಅಂತಿಮ ವರ್ಷದ ವೈದ್ಯಾವಿದ್ಯಾರ್ಥಿಗಳಿಗೆ ವೈದ್ಯ ಪದವಿ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು. ವೈದ್ಯಪದವಿದಾರರಿಗೆ ಪ್ರತಿಜ್ಞಾವಿಧಿಯನ್ನು ಭೋದಿಸಲಾಯಿತು.
ಕಾರ್ಯಕ್ರಮದಲ್ಲಿ ಪಟ್ಟಣದ ಸ್ತ್ರೀರೋಗ ತಜ್ಞರಾದ ಡಾ.ರೋಹಿಣಿ ಮಾನ್ವಿಕರ್,ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾರಾಯಣ್ಣಪ್ಪ, ನಿವೃತ್ತ ಜಿಲ್ಲಾ ಆಯುಷ್ ಆರೋಗ್ಯಾಧಿಕಾರಿ ಡಾ.ಬಿ.ರೂಪ ಬಾಯಿ, ಸಿಂಧನೂರು ಪಾಟೀಲ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆರ್.ಸಿ. ಪಾಟೀಲ್, ಕಾಲೇಜಿನ ಉಮಶಂಕರ್ ಹೆಚ್.ಎಂ. ಡಾ.ಸುರೇಶರಾವ್ ದೇಶಪಾಂಡೆ, ಸೇರಿದಂತೆ ಕಾಲೇಜಿನ ಉಪನ್ಯಾಸಕರು,ವೈದ್ಯ ವಿದ್ಯಾರ್ಥಿಗಳು ,ಪಾಲಕರು ಭಾಗವಹಿಸಿದರು.
ವರದಿ :ಆಂಜನೇಯ ನಸಲಾಪುರ


