LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

218 ಕಿರಿಯ ಎಂಜಿನಿಯರ್ ನೇಮಕಾತಿಗೆ ಕೆಇಎ ಅಧಿಸೂಚನೆ

Advertisement

ಬೆಂಗಳೂರು : ಕರ್ನಾಟಕ ಗೃಹ ಮಂಡಳಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ, ನಗರ ಯೋಜನಾ ಆಯುಕ್ತಾಲಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು‌ 218 ಕಿರಿಯ ಎಂಜಿನಿಯರ್ ಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶನಿವಾರ ಅಧಿಸೂಚನೆ ಹೊರಡಿಸಿದೆ.

ಉಳಿಕೆ ಮೂಲ ವೃಂದಕ್ಕೆ ಸೇರಿದ 187 ಹಾಗೂ ಕಲ್ಯಾಣ ಕರ್ನಾಟಕ ವೃಂದಕ್ಕೆ ಸೇರಿದ 31 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ನ.26 ಹಾಗೂ ಶುಲ್ಕ ಪಾವತಿಗೆ ನ.27 ಕೊನೆ ದಿನ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

ಡಿಪ್ಲೊಮಾ ಅಥವಾ ತತ್ಸಮಾನ ವಿದ್ಯಾರ್ಹತೆ ಇರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಜನವರಿ ತಿಂಗಳಲ್ಲಿ ಲಿಖಿತ ಪರೀಕ್ಷೆ ಇರಲಿದೆ. ಆದರೆ ಕನ್ನಡ ಭಾಷಾ ಪರೀಕ್ಷೆ ಮಾತ್ರ ಜನವರಿ 8ರಂದು ನಡೆಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.

ನಗರಾಭಿವೃದ್ಧಿ ಪ್ರಾಧಿಕಾರಗಳು ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯದಲ್ಲಿ ಖಾಲಿ ಇದ್ದ ಸಹಾಯಕ ನಗರ ಯೋಜಕರ ಹುದ್ದೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಕೆಎಚ್ ಬಿ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ, ಅಂತರ್ಜಲ ನಿರ್ದೇಶನಾಲಯ, ಕರ್ನಾಟಕ ರಾಜ್ಯ ಖನಿಜ‌ ನಿಗಮ, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ನಿಗಮ ದಲ್ಲಿನ ಕಿರಿಯ‌ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ವಿವರಗಳಿಗೆ ವೆಬ್ ಸೈಟ್ ನೋಡಿ ಎಂದು ಅವರು ಸಲಹೆ ನೀಡಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನ.5ರಿಂದ ಸಾರಿಗೆ ಬಸ್ ಪ್ರಯಾಣ ದರ ಏರಿಕೆ : ಸಚಿವ ಬೈರತಿ ಸುರೇಶ್ ಘೋಷಣೆರಾಯಚೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ! ಶೀಘ್ರದಲ್ಲೇ 72 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿ : ಡಿ.ಕೆ. ಶಿವಕುಮಾರ್ಕಿವೀಸ್ ಗೆ 192 ರನ್ ಗಳ ಟಾರ್ಗೆಟ್ ನೀಡಿದ ಭಾರತ ಪಾಕಿಸ್ತಾನ- ಒಮಾನ್ ಹಾಗೂ ಆಸ್ಟ್ರೇಲಿಯಾ- ಅಪಘಾನಿಷ್ಠಾನ್ ಪಂದ್ಯ ಇಂದು ತ್ರಿಕೋನ ಏಕದಿನ ಕ್ರಿಕೆಟ್ ಸರಣಿ: ಪಾಕಿಸ್ತಾನ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ 2-1 ರಿಂದ ಟೆಸ್ಟ್ ಸರಣಿ ಗೆದ್ದ ದ. ಆಪ್ರಿಕಾ ಪಟ್ಟಣದ ಶ್ರೀನಿಧಿ ಭಾರತ್ ಗ್ಯಾಸ್ ಗೋದಮನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಂತರಿಸುವಂತೆ ಮನವಿಎಸ್.ವಿ.ವಿ.ಕೆ.ಟ್ರಸ್ಟ್ನ ಆರ್ಯುವೇದೀಕ್ ಮೆಡಿಕಲ್ ಕಾಲೇಜ್ ಅಂತಿಮ ವಿದ್ಯಾರ್ಥಿಗಳ ವೈದ್ಯೋತ್ತಾನ ಪದವಿಪ್ರದಾನ ಕಾರ್ಯಕ್ರಮಸರ್ಕಾರದ ಕಣ್ಣಿಗೆ ಮಣ್ಣು, ಅನ್ನದಾತನ ಬದುಕಿಗೆ ಕಣ್ಣೀರು: ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ರವಿ ಪಾಟೀಲ್ ಸಿಡಿದೆದ್ದಿದ್ದು ಹೀಗೆ!