ಕೋಲಾರ : ಮೂವರು ಮಕ್ಕಳ ಎದುರೇ ಚಾಕುವಿನಿಂದ ಇರಿದು ಪತ್ನಿಯನ್ನು ಭೀಕರವಾಗಿ ಪತಿ ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಟೋಲ್ ಗೇಟ್ ನಲ್ಲಿ ಈ ಒಂದು ಘಟನೆ ನಡೆದಿದ್ದು ಶೀಲ ಶಂಕೆಸಿ ಪತ್ನಿಯನ್ನು ಪತಿ ರಾಮಚಂದ್ರ ಕೊಲೆ ಮಾಡಿದ್ದಾನೆ.
ನಂದ ಬಂಬಳ್ಳಿ ಸ್ನೇಹಾಳನ್ನು (26) ಪತಿ ರಾಮಚಂದ್ರ ಕೊಲೆ ಮಾಡಿದ್ದಾನೆ.ಮೂರಂಡಹಳ್ಳಿಯ ಮನೆಗೆ ತೆರಳುವ ವೇಳೆ ಈ ಒಂದು ಕೊಲೆ ಮಾಡಿದ್ದಾನೆ. ದಂಪತಿಗಳ ನಡುವೆ ಪದೇ ಪದೇ ಗಲಾಟೆ ನಡೆಯುತ್ತಿತ್ತು.
ಸ್ಥಳಕ್ಕೆ ಎಸ್ಪಿ ಕನ್ನಿಕಾ ಸಿಕ್ರಿವಾಲ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.


