ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ದೆಹಲಿ ಮೂಲದ ಓರ್ವ ವ್ಯಕ್ತಿಯನ್ನು ಸಿಸಿಬಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.
ಸ್ಟಿಂಗ್ ಆಪರೇಷನ್ ಮಾಡಲೆಂಡೆ ಈತ ಸೆಕೆಂಡ್ ಹ್ಯಾಂಡ್ ಫೋನ್ ಖರೀದಿ ಮಾಡಿದ್ದ ಎಂದು ತನಿಖೆ ಸಂದರ್ಭದಲ್ಲಿ ತಿಳಿದುಬಂದಿದೆ.
ಬಂದಿತ ಆರೋಪಿಯನ್ನು ರಿತೇಶ್ ಪಾಂಡೆ ಎಂದು ತಿಳಿದುಬಂದಿದೆ. ತನಿಖೆಯ ವೇಳೆ ಸ್ಟಿಂಗ್ ಆಪರೇಷನ್ ಕೃತ್ಯದಲ್ಲಿ ಫೋನ್ ಬಳಕೆಯಾಗಿದ್ದು ಅದಕ್ಕಾಗಿ ಹೊಸ ಫೋನ್ ಆತ ಖರೀದಿ ಮಾಡಿದ್ದ ಎಂದು ತಿಳಿದು ಬಂದಿದೆ.
ಹಾಗಾಗಿ ಹೊಸ ಮೊಬೈಲ್ ಖರೀದಿಸಿದ ಆರೋಪಿಯನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಆತನಿಗೂ ಸ್ಟಿಂಗ್ ಆಪರೇಷನ್ ಏನು ಲಿಂಕ್ ಇದೆ ಎನ್ನುವುದರ ಕುರಿತು ಸಿಸಿಬಿ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇನ್ನು ವಿಚಾರಣೆ ಸಂದರ್ಭದಲ್ಲಿ ಆತ ಯಾರ ಹೆಸರು ಬಾಯಿಬಿಡುತ್ತಾನೆ ಎನ್ನುವುದರ ಕುರಿತು ತೀವ್ರ ಕುತೂಹಲ ಮೂಡಿಸಿದೆ.


