LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಮನೆಗೆ ಬಂದು ಜೀವ ಬೆದರಿಕೆ ಆರೋಪ : ಧನ್ವಿರ್ ತಂದೆಯಿಂದ ವಿಜಯಲಕ್ಷ್ಮಿ ವಿರುದ್ಧ ದೂರು

Advertisement

ಬೆಂಗಳೂರಿನಲ್ಲಿ ನಟ ದರ್ಶನ್‌ ಅವರ ಪರಮಾಪ್ತ ನಟ ಧನ್ವೀರ್‌ ಹಾಗೂ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ನಡುವಿನ ಆಂತರಿಕ ಭಿನ್ನಾಭಿಪ್ರಾಯವು ತಾರಕಕ್ಕೇರಿದ್ದು, ವಿವಾದವು ಅಧಿಕೃತವಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ. 

ಧನ್ವೀರ್‌ ವಿರುದ್ಧ ವಿಜಯಲಕ್ಷ್ಮಿ ಅವರ ಮ್ಯಾನೇಜರ್‌ ನಾಗರಾಜ್‌ ದೂರು ದಾಖಲಿಸಿದ ಬೆನ್ನಲ್ಲೇ, ತಿರುಗೇಟು ನೀಡಿರುವ ಧನ್ವೀರ್‌ ತಂದೆ ತಿಮ್ಮೇಗೌಡ ಅವರು ವಿಜಯಲಕ್ಷ್ಮಿ ಹಾಗೂ ಅವರ ತಂಡದ ವಿರುದ್ಧ ರಾಜಾಜಿನಗರ ಪೊಲೀಸ್‌ ಠಾಣೆಯಲ್ಲಿ ಗಂಭೀರ ಆರೋಪಗಳೊಂದಿಗೆ ಪ್ರತಿದೂರು ದಾಖಲಿಸಿದ್ದಾರೆ.

ರಿಯಲ್‌ ಎಸ್ಟೇಟ್‌ ಉದ್ಯಮಿ ಹಾಗೂ ನಿರ್ಮಾಪಕರಾದ ತಿಮ್ಮೇಗೌಡರ ದೂರಿನನ್ವಯ, ಅಕ್ಟೋಬರ್‌ 21ರಂದು ರಾತ್ರಿ ಧನ್ವೀರ್‌ ಮನೆಯಲ್ಲಿ ಇಲ್ಲದ ವೇಳೆ ವಿಜಯಲಕ್ಷ್ಮಿ ಹಾಗೂ ಮ್ಯಾನೇಜರ್‌ ನಾಗರಾಜ್‌ ಏಕಾಏಕಿ ಮನೆಗೆ ನುಗ್ಗಿದ್ದಾರೆ. 

ಬಾಗಿಲು ತೆರೆದ ಧನ್ವೀರ್‌ ತಾಯಿ ಭಾರತಿ ಅವರ ಬಳಿ ಏರುಧ್ವನಿಯಲ್ಲಿ ಧನ್ವೀರ್‌ ಮತ್ತು ಅವರ ತಂದೆಯ ಬಗ್ಗೆ ವಿಚಾರಿಸಿ ಗಲಾಟೆ ಮಾಡಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಧನ್ವೀರ್‌ ಸಂಬಂಧಿ ಅಜಯ್‌ ಗೌಡ ಅವರೊಂದಿಗೆ ವಾಗ್ವಾದ ನಡೆಸಿ, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.

ಅಲ್ಲದೆ, ವಿಜಯಲಕ್ಷ್ಮಿ ಅವರ ಸೂಚನೆಯಂತೆ ನಾಗರಾಜ್‌ ಕರೆ ಮಾಡಿದ ಹಿನ್ನೆಲೆಯಲ್ಲಿ ಭೋಜ ಹಾಗೂ 'ಬಾಟಲಿ' ಪ್ರಮೋದ್‌ ಸ್ಥಳಕ್ಕೆ ಆಗಮಿಸಿದ್ದು, ತಾವು ವಿಜಯಲಕ್ಷ್ಮಿ ಅವರ ತಮ್ಮನೆಂದು ಹೇಳಿಕೊಂಡು ಧನ್ವೀರ್‌ ಕುಟುಂಬದವರಿಗೆ ಧಮ್ಕಿ ಹಾಕಿದ್ದಾರೆ.

 ಧನ್ವೀರ್‌ ಅವರನ್ನು ಎಲ್ಲಿಗೆ ಕರೆಸಿ ಏನು ಮಾಡಬೇಕೆಂದು ನಮಗೆ ಚೆನ್ನಾಗಿ ಗೊತ್ತಿದೆ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ತಿಮ್ಮೇಗೌಡರು ಪೊಲೀಸರಿಗೆ ಕರೆ ಮಾಡಲು ಮುಂದಾಗುತ್ತಿದ್ದಂತೆ ಇಡೀ ತಂಡ ಅಲ್ಲಿಂದ ತೆರಳಿದೆ.

ಇದಕ್ಕೂ ಮುನ್ನ ನಟ ಧನ್ವೀರ್‌ ತಮಗೆ ಫೋನ್‌ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಮ್ಯಾನೇಜರ್‌ ನಾಗರಾಜ್‌ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಗೆ ದೂರು ನೀಡಿ ಆಡಿಯೊ ಕ್ಲಿಪ್‌ಗಳನ್ನು ಒಪ್ಪಿಸಿದ್ದರು. ಸದ್ಯ ತಿಮ್ಮೇಗೌಡರ ಈ ಗಂಭೀರ ದೂರಿನ ಸಂಬಂಧ ರಾಜಾಜಿನಗರ ಠಾಣೆ ಪೊಲೀಸರು ಅಸಂಜ್ಞೆಯ ಪ್ರಕರಣ (ಎನ್‌ಸಿಆರ್) ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದಾಖಲೆಯ 450 ಕೋಟಿ ರೂ.ಗೆ ರಾಮಾಯಣ ಓಟಿಟಿ ರೈಟ್ಸ್ ಸೇಲ್ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಕೇಸ್ : ಸಿಸಿಬಿ ಪೊಲೀಸರಿಂದ ದೆಹಲಿ ಮೂಲದ ವ್ಯಕ್ತಿ ಅರೆಸ್ಟ್ತುಳಜಾಪುರ ಭವಾನಿ ದರ್ಶನಕ್ಕೆ ತೆರಳುತ್ತಿದ್ದ ವೇಳೆ ಭೀಕರ ರಸ್ತೆ ಅಪಘಾತ: ದಂಪತಿ ಸಾವುಬೆಳಗಾವಿಯಲ್ಲಿ ಫುಟ್ಪಾತ್ ತೆರವು ವೇಳೆ ಪಾಲಿಕೆಯ  ಇಂಜಿನಿಯರ್ ಗಳ ಮೇಲೆ ಹಲ್ಲೆ ಆಸ್ಟ್ರೇಲಿಯಾ ವಿರುದ್ಧ ಇನ್ನಿಂಗ್ಸ್ 31 ರನ್ ಗಳಿಂದ ಗೆದ್ದ ದ. ಆಪ್ರಿಕಾ ಮೈಸೂರಿನಲ್ಲಿ ನಾಡೆದ್ದು ಕರ್ನಾಟಕ - ತ್ರಿಪುರಾ ರಣಜಿ ಪಂದ್ಯ ಇಂದು ವೈಭವ್ ಸೂರ್ಯವಂಸಿ ಆಡುವ ಸಾಧ್ಯತೆ ತೀವ್ರ ಬರಗಾಲ : ಕ್ವಿಂಟಲ್ ಜೋಳಕ್ಕೆ 9200ಕ್ಕೆ ಏರಿದ ದರಮನೆಗೆ ಬಂದು ಜೀವ ಬೆದರಿಕೆ ಆರೋಪ : ಧನ್ವಿರ್ ತಂದೆಯಿಂದ ವಿಜಯಲಕ್ಷ್ಮಿ ವಿರುದ್ಧ ದೂರುನಾಳೆ ಬೆಳಗಾವಿಗೆ ಡಿ. ಕೆ ಶಿವಕುಮಾರ್ : ನಾಡಿದ್ದು ಕಬ್ಬು ಬೆಳೆಗಾರರ ಜೊತೆ ಸಭೆ